95600 ವಿಕಲಚೇತನ ಮತದಾರರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ: ಸುಬೋಧ ಯಾದವ

0
49

ಕಲಬುರಗಿ: ಕಲಚೇತನ ಮತದಾರರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಲಬುರಗಿ ವಿಭಾಗದ ಒಟ್ಟು 95600 ವಿಕಲಚೇತನ ಮತದಾರರನ್ನು ಮತಗಟ್ಟೆಗಳಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ.  ವಿಕಲಚೇತನ ಮತದಾರರು ಈ ವ್ಯವಸ್ಥೆಯ ಸದುಪಯೋಗ ಪಡೆದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಅಕ್ಸೆಸಿಬಿಲಿಟಿ ಅಬ್ಸರ್ವರ್ ಸುಬೋದ ಯಾಧವ ಮನವಿ ಮಾಡಿದ್ದಾರೆ.

ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳ ವಿಕಲಚೇತನ ಮತದಾರರನ್ನು ಏಪ್ರಿಲ್ 23 ಮತದಾನದಂದು ಮತಗಟ್ಟೆಗಳಿಗೆ ಸರ್ಕಾರ ವ್ಯವಸ್ಥೆ ಮಾಡಿರುವ ವಾಹನಗಳ ಮೂಲಕ ಕರೆತರುವ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ವಿಭಾಗದಲ್ಲಿ ಒಟ್ಟು 3807 ವಾಹನಗಳ ವ್ಯವಸ್ಥೆ ಮಾಡಿದೆ. ವಿಕಲಚೇತನರಿಗೆ ಸಹಾಯ ಮಾಡಲು ಒಟ್ಟು 9152 ಸ್ವಯಂ ಸೇವಕರನ್ನು ಗುರುತಿಸಲಾಗಿದ್ದು, ಈಗಾಗಲೇ ಆಯಾ ಪ್ರದೇಶದ ಸ್ವಯಂ ಸೇವಕರ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಆಯಾ ಪ್ರದೇಶದಲ್ಲಿರುವ ವಿಕಲಚೇತನರಿಗೆ ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆತರುವ ಸಮರ್ಪಕ ವ್ಯವಸ್ಥೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ವಿಭಾಗದಲ್ಲಿ ಒಟ್ಟು 10555 ಮತಗಟ್ಟೆಗಳಿದ್ದು, ಈ ಪೈಕಿ 10013 ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಕಲಚೇತನ ಮತದಾರರು ನೋಂದಾಯಿಸಿಕೊಂಡಿದ್ದು, ಈ ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆ ಸಹಿತ ಮಾಡಲಾಗಿದೆ. ವಿಭಾಗದಲ್ಲಿರುವ ಒಟ್ಟು ೯೫೬೦೦ ವಿಕಲಚೇತನ ಮತದಾರರ ಪೈಕಿ 57401 ಪುರುಷ, 37804 ಮಹಿಳಾ ಹಾಗೂ 395 ಇತರೆ ವಿಕಲಚೇತನ ಮತದಾರರು ಇದ್ದಾರೆ. ಕಲಬುರಗಿ ವಿಭಾಗದಲ್ಲಿ 16 ಮತಗಟ್ಟೆಗಳಲ್ಲಿ ವಿಕಲಚೇತನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆ. ಈ ಪೈಕಿ 9 ಮತಗಟ್ಟೆಗಳು ಕಲಬುರಗಿ ಜಿಲ್ಲೆಯಲ್ಲಿವೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ೧೪೫೮೪ ವಿಕಲಚೇತನ ಮತದಾರರಿದ್ದು, ಈ ಪೈಕಿ ೯೪೩೯ ಪುರುಷ, ೪೯೧೮ ಮಹಿಳೆ ಹಾಗೂ 227 ಇತರೆ ವಿಕಚೇತನ ಮತದಾರರಿದ್ದಾರೆ. ಇವರನ್ನು ಮತಗಟ್ಟೆಗೆ ಕರೆತರಲು 1216 ವಾಹನದ ವ್ಯವಸ್ಥೆ ಮಾಡಲಾಗಿದ್ದು, 1750 ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಮತಗಟ್ಟೆಗೆ ಆಗಮಿಸುವ ವಿಕಲಚೇತನರು ಮತದಾನ ಮಾಡಲು ಅನುಕೂಲ ಮಾಡಿಕೊಡಲು 2368 ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಾದ ರ‍್ಯಾಂಪ್, ಕುಡಿಯುವ ನೀರು, ನೆರಳು, ಶೌಚಾಲಯ, ವಿಕಲಚೇತನರಿಗಾಗಿ ಗಾಲಿ ಕುರ್ಚಿ, ಭೂತಗನ್ನಡಿ, ಬ್ರೈಲ್ ಮತಪತ್ರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಕಲಚೇತನರಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬ್ರೈಲ್ ಲಿಪಿ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿತ್ತು. ವಿಕಲಚೇತನರಿಗೆ ವಿದ್ಯುನ್ಮಾನ್ ಮತಯಂತ್ರ ಹಾಗೂ ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಕಲ್ಪಿಸಿರುವ   ಈ ಎಲ್ಲ ಸವಲತ್ತುಗಳನ್ನು ಸದುಪಯೋಗಿಸಿಕೊಂಡು ವಿಕಲಚೇತನ ಮತದಾರರು ನೂರಕ್ಕೆ ನೂರು ಪ್ರತಿಶತ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here