ಕಲಬುರಗಿ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸೇಡಂ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ಮಾಡಿ ಜಾತಿ ನಿಂದನೆ ,307 ,ಪೆÇೀಸ್ಕೋ ಕೇಸ್ ಹಾಕಿ ಜನರನ್ನು ಹತ್ತಿಕ್ಕಲಾಗುಗತ್ತಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಆರೋಪಿಸಿದರು.
ತನಿಖೆ ಮುಗಿಯುವವರೆಗೆ ಸಾಕ್ಷಿ ನಾಶ ಆಗದಂತೆ ತನಿಖೆ ಕೈಗೊಂಡು ಸರಕಾರ ಸೇಡಂ ಶಾಸಕರು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣಪ್ರಕಾಶ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ತನಿಖೆ ನಡೆಸಬೇಕು. -ರಾಜಕುಮಾರ ಪಾಟೀಲ ತೆಲ್ಕೂರ್, ಮಾಜಿ ಶಾಸಕ, ಸೇಡಂ.
ರಾಮತೀರ್ಥ ಗ್ರಾಮದಲ್ಲಿ ಬಿಜೆಪಿ ಪಕ್ಷದ ಮುಖಂಡ ಪ್ರಭುಲಿಂಗರಡ್ಡಿ ಅಪ್ರಾಪ್ತವಯಸ್ಕ ಮಗಳ ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಪುನಃ ಹುಡಗಿ ತಂದೆ ಮೇಲೆ ಜಾತಿ ನಿಂದನೆ ಕೇಸ್ ಮತ್ತು ಫೆÇೀಸ್ಕೋ ದಾಖಲು ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರುದನೂರ ಗ್ರಾಮದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ರುದನೂರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವರ ಮೇಲೆ ಕೇಸ್ 307 ಕೇಸ್ ಮಾಡಿಸಿದ್ದಾರೆ. ಮದನಾ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನಲ್ಲಿ ಅವವಹಾರ ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರುಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ಹೇಳಿದರು.
ಶಿರೋಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಾಂಗ್ರೆಸ್ ಮುಖಂಡರು ,
ಇವತ್ತು ಕಲಬುರಗಿ ಯುನೈಟೆಡ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಕುಟುಂಬದ ಸದಸ್ಯ ಶಿವಕುಮಾರ ಪೂಜಾರಿ ಭಯಭೀತನಾಗಿ ಮಾನಸಿಕವಾಗಿ ಘಾಸಿಗೊಳಗಾಗಿ ಸಚಿವರಾದ ಶರಣಪ್ರಕಾಶ ಪಾಟೀಲ ಅವರ ಭಯದಿಂದ ಆಡಿಯೋ ಮಾಡಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಎಂದು ದೂರಿದರು.
ಹಿಗೆ ಇನ್ನೂ ಹತ್ತು ಹಲವಾರು ದಿನ ಬೆಳಗಾದರೆ ಕಾಂಗ್ರೆಸ್ ನವರ ದೌರ್ಜನ್ಯ. ದೌಲತ್ತು ಹೆಚ್ಚಾಗಿದ್ದು ಪೆÇೀಲಿಸ್ ಇಲಾಖೆ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲಾಗುತ್ತಿದೆ. ಇನ್ನೂ ಹಲವಾರು ಪ್ರಕರಣಗಳು ಪೆÇಲೀಸ್ ಸ್ಟೇಷನ್ ನಲ್ಲಿ ಮುಚ್ಚಿಹಾಕಲಾಗುತ್ತಿದೆ ಎಂದು ವಿವರಿಸಿದರು.