ಧಮ್ಮ ಭೂಮಿಯಿಂದ ದಿಕ್ಷಾ ಭೂಮಿವರೆಗೆ ಧಮ್ಮ ರ್ಯಾಲಿ; ಶಾಂತಿ-ಭ್ರಾತೃತ್ವಕ್ಕಾಗಿ ಧಮ್ಮ ಯಾತ್ರೆ

0
9

ವಾಡಿ: ಸನ್ನತಿ ಗ್ರಾಮವು ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿದ್ದು ಬೌದ್ಧರ ಪವಿತ್ರ ಸ್ಥಳ ವಾಗಿದೆ ಸಾಮ್ರಾಟ್ ಅಶೋಕ ಇರುವ ಉಬ್ಬು ಶಿಲ್ಪ, ಹಾಗೂ ಅಶೋಕ ಶಾಸನ ದೊರೆತ ಏಕೈಕ ಸ್ಥಳ ಸನ್ನತಿ ಯಾಗಿದೆ. ಸನ್ನತಿ ಎಂದರೆ ಸದ್ಗತಿ ಯಾಗಿದೆ ಎಂದು ಭಂತೆ ವರಜ್ಯೋತಿ ಹೇಳಿದರು.

ಬುಧವಾರ ಬುದ್ಧಿಸ್ಟ್ ಫ್ಯಾಟ್ರನಿಟಿ ಕೌನ್ಸಿಲ್ ಮತ್ತು ನ್ಯಾಷನಲ್ ಧಮ್ಮ ಯಾತ್ರ ಕಮಿಟಿ ಅವರು ಜಂಟಿಯಾಗಿ ಹಮ್ಮಿಕೊಂಡಿದ್ದ ಶಾಂತಿ ಮತ್ತು ಭ್ರಾತೃತ್ವಕ್ಕಾಗಿ ಧಮ್ಮ ಭೂಮಿಯಿಂದ ದಿಕ್ಷಾ ಭೂಮಿವರೆಗೆ ಧಮ್ಮ ರ್ಯಾಲಿ ಸನ್ನತಿ ಬುದ್ಧ ಧಮ್ಮ ವಿಹಾರ ತಲುಪಿದಾಗ ರ್ಯಾಲಿ ಕುರಿತು ಮಾತನಾಡುತ್ತಾ ಸಾಮ್ರಾಟ್ ಅಶೋಕ ಉತ್ತರ ಭಾರತದ ಬೌದ್ಧ ಧರ್ಮ ಧಕ್ಷಿಣ ಭಾರತದ ವರೆಗೂ ಪ್ರಚಾರಗೊಳಿಸಿ ಬೌದ್ಧ ಧರ್ಮ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದರು.

Contact Your\'s Advertisement; 9902492681

ಇಂಥ ಭವ್ಯ ಪರಂಪರೆ ಇತಿಹಾಸ ಇರುವ ದಕ್ಷಿಣ ಭಾರತ ಬೌದ್ಧರ ಸ್ಥಳಗಳ ದರ್ಶನ ಮಾಡುವ ನಿಟ್ಟಿನಲ್ಲಿ ಕೆರಳಾ,ಚೆನೈ, ತೆಲಂಗಾಣ, ಕರ್ನಾಟಕ, ಹಾಗೂ ಮಾಹಾರಾಷ್ಟ್ರ ಸೇರಿದಂತೆ ಪಂಚರಾಜ್ಯಗಳ ಬೌದ್ಧರ ಐತಿಹಾಸಿಕ ಸ್ಥಳಗಳ ದರ್ಶನ ಮಾಡುತ್ತಾ ಧಮ್ಮ ಉಪದೇಶ ನೀಡುವ ಉದ್ದೇಶದಿಂದ ಈ ಧಮ್ಮ ಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿ ಸನ್ನತಿ,ಕನಗನಳ್ಳಿ, ಹಾಗೂ ರಣ ಮಂಡಲದ ಇತಿಹಾಸ ತಿಳಿಸಿದರು, ವಿಶ್ವ ಬೌದ್ಧರ ಐತಿಹಾಸಿಕ ಪಾರಂಪರಿಕ ಸ್ಥಳಗಳ ಪರಿಚಯ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ,ಸಂಶೋಧನೆ ನಡೆಯಬೇಕು, ಸನ್ನತಿ ಹಾಗೂ ಕನಗನಳ್ಳಿ ಪರಿಸರದಲ್ಲಿ ಇನ್ನೂ ಹೆಚ್ಚಿನ ಉತ್ಖನ, ಹಾಗೂ ಸಂಶೋಧನೆ ಮಾಡಿದಲ್ಲಿ ಬೌದ್ಧರ ಇತಿಹಾಸದ ಗತ ವೈಭವ ಅನಾವರಣ ಗೊಳ್ಳಲಿದೆ, ಕೇಂದ್ರ ಸರ್ಕಾರ ಈ ಕುರಿತು ನಿμÁ್ಕಳಜಿ ತೋರುತ್ತಿದೆ ಎಂದು ದೂರಿದರು.

ಮಧುರೈನ ಭಂತೆ ಮೌರ್ಯ, ಭಂತೆ ಗುಣಶೀಲ, ನಾಗಣ್ಣ ಬಂದಳ್ಳಿ,ದೇವಿಂದ್ರಪ್ಪ ಕನಗನಳ್ಳಿ, ರಣಧೀರ, ಅಮೃತ ಕೋಮಟೆ, ಮೈಯೂರ ಶಿವನಕರ, ಹಾಗೂ ಬೌದ್ಧ ಉಪಾಸಕರು, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here