ಹಲಕರ್ಟಿ ಬಸವೇಶ್ವರ ನಾಮಫಲಕ ಅವಮಾನಕ್ಕೆ ವೀರಶೈವ ಲಿಂಗಾಯತ ಸಮಾಜ ಖಂಡನೆ

0
4

ಸುರಪುರ:ಬಸವಾದಿ ಶರಣರನ್ನು ಅವಮಾನಿಸುವ ಕೆಲಸವನ್ನು ಕಿಡಿಗೇಡಿಗಳು ಮಾಡಿರುವುದು ಖಂಡನಿಯವಾಗಿದೆ,ಇಂತಹ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾ ಸ್ವಾಮೀಜಿ ಆಗ್ರಹಸಿದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವ ಗುರು ಬಸವೇಶ್ವರರ ನಾಮಫಲಕಕ್ಕೆ ಅವಮಾನ ಮಾಡಿದ ಘಟನೆ ಮತ್ತು ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದ ಹೊರವಲಯದಲ್ಲಿನ ಕಂಠಿ ಬಸವೇಶ್ವರ ದೇವಸ್ಥಾನದ ಮೂರ್ತಿ ಭಗ್ನಗೊಳಿಸಿರುವುದನ್ನು ಖಂಡಿಸಿ, ಈ ಕೃತ್ಯಗಳೆಸಗಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ನಗರದ ರಂಗಂಪೇಟೆಯ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜ ಹಾಗೂ ಬಸವ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, 12ನೇ ಶತಮಾನದಲ್ಲಿ ಬಸವೇಶ್ವರರು ಎಲ್ಲಾ ಜಾತಿ, ಜನಾಂಗದ ಶರಣರನ್ನು ಒಗ್ಗೂಡಿಸಿ ವಚನ ಕ್ರಾಂತಿಯ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ವಚನ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಗುಣಗಳು ವಿಶ್ವಕ್ಕೆ ಮಾದರಿಯಾಗಿವೆ. ಸಮ ಸಮಾಜ ನಿರ್ಮಾಣದ ಕನಸು ಹೊತ್ತು ಕ್ರಾಂತಿ ಮಾಡಿದ ಕ್ರಾಂತಿ ಪುರಷನ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದು ಇದೊಂದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದನ್ನು ಆಡಳಿತ ನಿರ್ಲಕ್ಷಿಸಬಾರದು. ಕಿಡಿಗೇಡಿಗಳನ್ನು ಆದಷ್ಟು ಬೇಗನೆ ಬಂಧಿಸಿ ಕಾನೂನು ಕ್ರಮಕೈಗೊಂಡು ಶಿಕ್ಷಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ವೀರಶೈವ ಸಮಾಜ ಉಗ್ರ ಸ್ವರೂಪದ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕೆ.ವಿಜಯಕುಮಾರ ಮೂಲಕ ಸಲ್ಲಿಸಲಾಯಿತು.

ಮುಖಂಡರಾದ ಪ್ರಕಾಶ ಅಂಗಡಿ ಕನ್ನೆಳ್ಳಿ, ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ಜಗದೀಶ್ ಪಾಟೀಲ್, ಶಿವರಾಜ ಕಲಕೇರಿ, ಜಗದೀಶ್ ಕಲಬುರಗಿ, ಶರಣುನಾಯಕ ಡೊಣ್ಣೀಗೇರೆ, ದೇವಿಂದ್ರಪ್ಪಗೌಡ ಮಾಲಗತ್ತಿ, ಶಿವರುದ್ರ ಉಳ್ಳಿ ಸತ್ಯಂಪೇಟೆ, ಚೆನ್ನಬಸವ ವಾಲಿ, ಬಸವರಾಜ ಅಂಗಡಿ, ಸಿದ್ದನಗೌಡ ಹುಣಸಗಿ ಮಾತನಾಡಿದರು,ಮುಖಂಡರಾದ ವೀರೇಶ್ ಪಂಚಾಂಗಮಠ, ಮಹೇಶ್ ಪಾಟೀಲ್, ವಿರೇಶ ನಿಷ್ಠಿ ದೇಶಮುಖ, ಶಿವು ಸಾಹುಕಾರ ರುಕ್ಮಾಪುರ, ಬಸನಗೌಡ ಚಿಕ್ಕನಳ್ಳಿ, ಸಿದ್ದನಗೌಡ ಹೆಬ್ಬಾಳ, ಮಲ್ಲಣ್ಣ ಸಾಹು ಜಾಲಬೆಂಚಿ, ಚನ್ನಪ್ಪಗೌಡ ದೇವಪುರ, ಮಹೇಶ ಹಳ್ಳದ, ಸೂಗುರೇಶ್ವರ ಮೋದಿ, ಪ್ರಕಾಶ ಬಣಗಾರ, ಅಜಯಕುಮಾರ ನರಬೋಳಿ, ಶಿವರಾಜ ವನಕೇರಿ, ಬಸನಗೌಡ ಕಮತಗಿ, ಸುಮಂತ ದೇವಪುರ, ಲಿಂಗರಾಜ ಶಾಬಾದಿ, ರವಿಗೌಡ ಪಾಟೀಲ್, ಆನಂದ ಮಡ್ಡಿ, ಹರೀಶ ಹಳ್ಳದ, ಶರಬಣ್ಣ ಹೊಸ್ಮನಿ, ಭೀಮನಗೌಡ ಹಂದ್ರಾಳ, ಅಮರೇಶ ಮುಧೋಳ, ಶಿವಕಾಂತ ಹೂಗಾರ, ಮಲ್ಲು ಬಾದ್ಯಾಪುರ, ಕೃಷ್ಣರೆಡ್ಡಿ ಮುದ್ನೂರು, ಮಲ್ಲು ಹೂಗಾರ, ಮಂಜುನಾಥ ಚಿನ್ನಗುಡಿ ಸೇರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here