ಸುರಪುರ; ವಾಲ್ಮೀಕಿ ಮೂರ್ತಿ ಬದಲಾವಣೆಗೆ ಸರ್ವಾನುಮತದ ಒಪ್ಪಿಗೆ

0
10

ಸುರಪುರ: ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಬದಲಾವಣೆ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆಗಾಗಿ ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಯಿತು.

ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಮಾಹಿತಿ ನೀಡಿದ ಪೌರಾಯುಕ್ತರು, ನಗರದ ವಾರ್ಡ್ ಸಂಖ್ಯೆ 4 ರ ಹಳೆ ಬಸ್ ನಿಲ್ದಾಣ ಹತ್ತಿರದ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಬದಲಾವಣೆಗೆ ಮತ್ತು ವಾಲ್ಮೀಕಿ ಚೌಕ್ ಅಭಿವೃದ್ಧಿಪಡಿಸಲು ನಗರಸಭೆ ತುರ್ತು ಸಭೆಯಲ್ಲಿ ನಗರಸಭೆ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ, ಮೂರ್ತಿ ಬೇರೆ ರೂಪದಲ್ಲಿದೆ ಕಾರಣ ಬದಲಾಯಿಸಬೇಕು ಎಂದು ಈ ಹಿಂದೆ ವಾಲ್ಮೀಕಿ ಸಮಾಜ ಬಾಂಧವರು ತಿಳಿಸಿದ್ದರು. ಮೊನ್ನೆ ತಹಸಿಲ್‍ನಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿಯೂ ಅವರು ಮೂರ್ತಿ ಬದಲಾವಣೆಗೆ ಮತ್ತೊಮ್ಮೆ ಒತ್ತಾಯಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿ ಅವರ ನಿರ್ದೇಶನದ ಮೇರೆಗೆ ತುರ್ತು ಸಭೆ ಕರೆಯಲಾಗಿತ್ತು ಎಂದರು.

Contact Your\'s Advertisement; 9902492681

ನಿಯಮನುಸಾರ ಸಭೆ ನಡೆಸಲು 1/3 ಸದಸ್ಯರ ಅಗತ್ಯತೆ ಇರುತ್ತದೆ. 2/3 ಬಹುಮತದಿಂದ ನಿರ್ಣಯ ಕೈಗೊಳ್ಳಬಹುದು.ಸಭೆಯಲ್ಲಿ 22 ಜನ ನಗರಸಭೆ ಸದಸ್ಯರು ಭಾಗಿಯಾಗಿದ್ದರು. ಮೂರ್ತಿ ಬದಲಾವಣೆ ವಿಷಯ ಮಂಡಿಸಲಾಯಿತು ಅವರು ಸಮ್ಮತಿಸಿದರು. 24.10 ಎಸ್‍ಎಫ್‍ಸಿ ಅನುದಾನದ ಯೋಜನೆಯಲ್ಲಿ ಹಣವನ್ನು ಕಾಯ್ದಿರಿಸಿ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅವರಿಂದ ಅನುಮೋದನೆ ಪಡೆದು ಮೂರ್ತಿ ಬದಲಾವಣೆ ಮತ್ತು ಚೌಕ್ ಅಭಿವೃದ್ಧಿ ಪಡೆಸಲು ನಿರ್ಣಯಿಸಲಾಯಿತು. ಹೊಸ ಮೂರ್ತಿಗೆ ಸಂಬಂಧಿಸಿದಂತೆ 11 ಜನ ಸದಸ್ಯರ ಕಮಿಟಿ ರಚಿಸಲಾಯಿತು. ಅವರು ಮೂರ್ತಿ ಕುರಿತಂತೆ ರೂಪ ರೇಷ ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.

ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಮಹೇಶ್ ಪಾಟೀಲ್,ಹಿರಿಯ ಸದಸ್ಯರಾದ ವೇಣುಮಾಧವ ನಾಯಕ, ಸೋಮನಾಥ ಡೊಣ್ಣಿಗೇರೆ, ಮಹ್ಮದ್ ಶರೀಫ್, ನಾಸೀರ್ ಕುಂಡಾಲೆ, ಜುಮ್ಮಣ್ಣ ಕೆಂಗೂರಿ, ಕಮ್ಮರುದ್ದೀನ್ ನಾರಾಯಣಪೇಟೆ, ಮಾನಪ್ಪ ಚಳ್ಳಿಗಿಡ, ಮಹಿಬೂಬ್, ಶಿವಕುಮಾರ ಕಟ್ಟಿಮನಿ, ಮೊಹ್ಮದ್ ಗೌಸ್ ಕಿಣ್ಣಿ, ಸುವರ್ಣಾ ಎಲಿಗಾರ, ಲಕ್ಷ್ಮೀ ಬಿಲ್ಲವ್, ಪಾರ್ವತಿ ದಿವಳಗುಡ್ಡ, ಸಿದ್ದಲಿಂಗಮ್ಮ, ಚನ್ನಮ್ಮ ಮಡಿವಾಳ, ಉತ್ತಮ ಅಕ್ಕಿ, ಮಲ್ಲೇಶಿ ಪೂಜಾರಿ ಸೇರಿದಂತೆ ಇತರೆ ಸದಸ್ಯರು ಇದ್ದರು. ಎಇಇ ಶಾಂತಪ್ಪ ಹೊಸೂರು, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರೆ, ಗುರುಸ್ವಾಮಿ ಹಿರೇಮಠ, ಶಿವುಪುತ್ರ ನಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here