ಕಲಬುರಗಿ ಕೆಬಿಎನ್ ವಿವಿ: ಬುಕ್ ಕ್ಲಬ್ ಉದ್ಘಾಟನೆ

0
16

ಕಲಬುರಗಿ: ನಗರದ ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ‘ಬುಕ್ ಕ್ಲಬ್ ‘ನ್ನು ಗುರುವಾರ ಉದ್ಘಾಟಸಲಾಯಿತು.

ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ ಸ ಜಾವುದ್ದೀನ್ ಸಫಿ ಬುಕ್ ಕ್ಲಬ್ ನ ಉದ್ದೇಶ ಮತ್ತು ಮಹತ್ವಗಳನ್ನು ಕುರಿತು ಮಾತನಾಡಿ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಿ ಪ್ರೂತ್ಸಾಹಿಸಲು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬುಕ್ ಕ್ಲಬ್ ಕೇಂದ್ರ ಉಪಯುಕ್ತವಾಗಿದೆ ಎಂದು ಹೇಳಿದರು. ಅಲ್ಲದೆ ಬುಕ್ ಕ್ಲಬ್ ಎಲ್ಲರಿಗೂ ಮುಕ್ತವಾಗಿದ್ದು, ಆಸಕ್ತರು ಸದಸ್ಯತ್ವಕ್ಕಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ ಎಂದರು.

Contact Your\'s Advertisement; 9902492681

ಪ್ರತಿ ತಿಂಗಳಿಗೊಮ್ಮೆ ಬುಕ್ ಕ್ಲಬ್ ಸಭೆಗಳು ನಡೆಯಲಿದ್ದು ಈಗಾಗಲೇ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಕ್ಲಬ್‌ನ ಸದಸ್ಯರು ಆಯ್ಕೆ ಮಾಡಿದ ಪುಸ್ತಕ ಮತ್ತು ಅಲ್ಲಿರುವ ಮಹತ್ವದ ವಿಚಾರಗಳನ್ನು ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಉರ್ದು ವಿಭಾಗದ ಅಧ್ಯಕ್ಷ ಪ್ರೊ.ಹಮೀದುದ್ದೀನ್ ಅಕ್ಬರ್, ಆಹಾರ ಮತ್ತು ಪೌಷ್ಟಿಕಾಂಶ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ. ವಿನೋದ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಮ್ರತಾ ರಾವುತ ಮತ್ತು ಡಾ. ಜಾವೇದ್ ಅಖ್ತರ್ ಹಾಗೂ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿನಿ ಇ ಇಕ್ರಾ ಫಾತಿಮಾ ಕವನ ವಾಚಿಸಿದರು.

ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಡಾ. ಝೈನಾಬ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಪಕಿ ಡಾ. ಅಥಿಯಾ ಸುಲ್ತಾನ ವಂದಿಸಿದರು. ಡಾ ಸಫಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here