ಕೆಕೆಆರಡಿಬಿ,ಗೆ ಹೆಚ್ಚು ಅಧಿಕಾರ ವಹಿಸಿರುವುದು ಸ್ವಾಗತಾರ್ಹ; ಅಟ್ಟೂರ

0
69

ಕಲಬುರಗಿ; ಕಲ್ಯಾಣ ಕರ್ನಾಟಕ ಮಂಡಳಿ ಅನುದಾನ ಕ್ರಿಯಾಯೋಜನೆ ತಯಾರಿಸುವ ಅಧಿಕಾರ ಶೇಕಡಾ 42 ರಿಂದ 98ಕ್ಕೆ ವಹಿಸಿರುವುದು ಸ್ವಾಗತ ರ್ಹವಾಗಿದೆ ಎಂದು ಜನಪರ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ತಿಳಿಸಿದ್ದಾರೆ.

ಸಂವಿಧಾನದ 371 ಜೆ ಅಡಿ ಈ ಭಾಗದ ಅಭಿವೃದ್ಧಿಗಾಗಿ ವಿಶೇಷ ಕಾಯ್ದೆ ಮೂಲಕ ರಚಿಸಿ ಈ ಭಾಗದ ಸರ್ವಾಂಗಿಣ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಅಧಿಕಾರ ನೀಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಡಳಿಗೆ ಅನುದಾನ ನೀಡಿದರು ಅದರಲ್ಲಿ ತಯಾರಿಸುವ ಅಧಿಕಾರವನ್ನು ಸರಕಾರ ತನ್ನ ಬಳಿಯೇ ಇಟ್ಟುಕೊಂಡಿತ್ತು.

Contact Your\'s Advertisement; 9902492681

ಇದರ ಜೊತೆಗೆ ಸರ್ಕಾರ ವಿವೇಚನ ಕೋಟಾ( 5%) ಸಿಎಂ ವಿವೇಚನ ಕೋಟಾ (3%) ಕಾಮಗಾರಿಗಳಿಗೆ ರಾಜ್ಯ ಸರ್ಕಾರವೇ ಅನುದಾನ ನಿಗದಿಪಡಿಸಿ ಅನುಷ್ಠಾನಗೊಳಿಸಲು ಸೂಚಿಸುತ್ತಿತ್ತು. ಹಣ ಖರ್ಚು ಮಾಡಲು ಮಂಡಳಿಗೆ ಸ್ವಾತಂತ್ರ್ಯವಾದ ಅಧಿಕಾರ ಇರಲಿಲ್ಲ. ಕಾಮಗಾರಿ ಮಂಡಳಿಯ ಅಧ್ಯಕ್ಷರ ಒಳಗೊಂಡು ಕಲ್ಯಾಣ ಕರ್ನಾಟಕದ 41 ಜನ ಶಾಸಕರು ಕ್ರಿಯಾಯೋಜನೆ ನೀಡುವ ಪದ್ಧತಿ ಜಾರಿಗೆ ತರಲಾಗಿದೆ.

ಜನರ ಬೇಡಿಕೆಗಳು ಏನು ಹಾಗೂ ಈ ಭಾಗದ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಲು ಮಂಡಳಿಗೆ ವಹಿಸಿರುವುದು ಸೂಕ್ತವಾಗಿದೆ. ಏಕೆಂದರೆ ಬೆಂಗಳೂರಲ್ಲಿ ಕುಳಿತುಕೊಂಡು ಅಧಿಕಾರಿಗಳು ಯೋಜನೆ ರೂಪಿಸಿ ಅನುಷ್ಠಾನ ಮಾಡುವಂತೆ ಮಂಡಳಿಗೆ ಆದೇಶ ಮಾಡಿದರೆ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತದೆ? ವಿಶೇಷವಾಗಿ ಕೆಕೆಆರ್‌ಡಿಬಿ ರಾಜ್ಯದ ಇತರ ನಿಗಮ ಮಂಡಳಿಯಂತೆ ಸಾಮಾನ್ಯ ಮಂಡಳಿಯಲ್ಲ. ಸಂವಿದಾನ ತಿದ್ದುಪಡಿ ಮೂಲಕ ಜಾರಿಗೊಂಡ ವಿಶೇಷ ಮಂಡಳಿಯಾಗಿದ್ದರಿಂದ ಅದನ್ನು ವಿಶೇಷವಾಗಿ ಪರಿಗಣಿಸಬೇಕು.

ಈ ಪ್ರದೇಶ ಹೆಚ್ಚು ಅಭಿವೃದ್ಧಿಯಾಗದೆ ಮಂಡಳಿಗೆ ಬಿಡುಗಡೆಯಾದ ಹಣ ಮರಳಿ ಸರಕಾರಕ್ಕೆ ಹೋಗುತ್ತಿತ್ತು. ಈಗಲಾದರೂ ಮಂಡಳಿ ಈ ಭಾಗದ ಸಮಸ್ಯೆಗಳ ಕುರಿತು ಕ್ರಿಯಾ ಯೋಜನೆ ರೂಪಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here