ಪಟೇಲರ ದಿಟ್ಟತನದಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ; ಪಾಟೀಲ, ಕಮಕನೂರ

0
45

ಕಲಬುರಗಿ: ದೇಶದ ಮೊದಲನೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರವರು ಸಮಯೋಚಿತವಾಗಿ ದಿಟ್ಟತನದ ಧೋರಣೆ ಅನುಸರಿಸಿ ಹೈದರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನ ಮಾಡಲು ಪೋಲಿಸ್ ಕಾರ್ಯಾಚರಣೆ ನಡೆಸಿರುವುದರಿಂದ ಮತ್ತು ನಮ್ಮ ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನದಿಂದ ಇಂದು ನಾವು ರಾಜಶಾಹಿ ವ್ಯವಸ್ಥೆಯಿಂದ ಅಖಂಡ ಭಾರತದ ಪ್ರಜಾಶಾಹಿ ವ್ಯವಸ್ಥೆಯಲ್ಲಿ ಸೇರಿ ನೆಮ್ಮದಿಯಿಂದ ಭಾರತ ಮಾತೆಯ ಸುಪುತ್ರರಾಗಿ ಬದುಕುತ್ತಿದ್ದೇವೆ ಎಂದು ಉಭಯ ಶಾಸಕರಾದ ತಿಪ್ಪಣಪ್ಪ ಕಮಕನೂರ ಮತ್ತು ಅಲ್ಲಮಪ್ರಭು ಪಾಟೀಲರವರು ಸಭೆಗೆ ಉದ್ದೇಶಿಸಿ ಮಾತನಾಡಿದರು.

ಇಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತ್ನಾಡಿದ ಅವರು ಸಮಿತಿಯ ಬೇಡಿಕೆಯಂತೆ ಕಾಲಮಿತಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸೌಂದರಿಕರಣ ಮತ್ತು ಅಧುನಿಕರಣ ಕಾಮಗಾರಿ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು.

Contact Your\'s Advertisement; 9902492681

ಪಟೇಲರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಳಾದ ಲಕ್ಷ್ಮಣ ದಸ್ತಿಯವರು ಮಾತ್ನಾಡಿ 1948 ಸೆಪ್ಟೆಂಬರ ನಲ್ಲಿ ಪಟೇಲ್ ರ ದಿಟ್ಟತನದ ಧೋರಣೆಯಿಂದ ಪೋಲಿಸ್ ಕಾರ್ಯಾಚರಣೆ ನಡೆಯದಿದ್ದರೆ, ಇಂದು ನಾವು ರಾಜಶಾಹಿ ವ್ಯವಸ್ಥೆಯಲ್ಲಿಯೆ ಉಳಿಯುತ್ತಿದ್ದೇವು. ಡಾ.ಬಾಬಾಸಾ‌ಹೇಬ ಅಂಬೇಡ್ಕರ್ ಅವರ ಸಮರ್ಥ ಕಾನೂನಾತ್ಮಕ ಸಲಹೆಯಂತೆ ಉಕ್ಕಿನ ಮನುಷ್ಯ ಮತ್ತು ದೇಶದ ಮೊದಲನೇ ಉಪ ಪ್ರಧಾನಿ ಹಾಗೂ ಗೃಹ ಮಂತ್ರಿಗಳಾದ ‌ಸರದಾರ್ ವಲ್ಲಭಭಾಯ್ ಪಟೇಲ್ ರವರ ಕಠೋರ ದಿಟ್ಟತನದ ಧೋರಣೆಯಿಂದ ಹೈದ್ರಾಬಾದ ಸಂಸ್ಥಾನ ಭಾರತದಲ್ಲಿ ವಿಲೀವಾಯಿತ್ತು ಈ ಕಠು ಸತ್ಯದ ಇತಿಹಾಸ ನಾವು ಎಂದು ಮರೆಯಬಾರದು ಎಂದು ಸಭೆಗೆ ವಿವರಿಸಿದರು.

ಮುಂದುವರಿದು ಅವರು ಸೆಪ್ಟೆಂಬರ್ ತಿಂಗಳ ಬದಲು ಒಂದೆ ತಿಂಗಳು ಪೋಲಿಸ್ ಕಾರ್ಯಾಚರಣೆ ಮುಂದುವರೆದಿದ್ದರೆ, ಹೈದರಾಬಾದ್ ಸಂಸ್ಥಾನ ವಿಲೀನ ಅಂತರ್ ರಾಷ್ಟ್ರೀಯ ಸಮಸ್ಯೆಯಾಗಿ ಹೈದರಾಬಾದ್ ರಾಜ್ಯ ಭಾರತದಲ್ಲಿ ಸೇರಿಸಿಕೊಳ್ಳಲು ಬಹಳ ಕಷ್ಟ ಅನುಭವಿಸಬೇಕಾಗುತ್ತಿತ್ತು, ಪಟೇಲ್ ರ ಮುಂದಾಲೋಚನೆಯ ಪೋಲಿಸ್ ಕಾರ್ಯಾಚರಣೆಯ ಧೋರಣೆಯಿಂದ ನಿಜಾಂ ಬಹಳ ಬೇಗ ಭಾರತದಲ್ಲಿ ಸೇರಲು ಒಪ್ಪಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ರು ರಾಷ್ಟ್ರದ ಅಖಂಡತೆ ಮತ್ತು ರಾಷ್ಟ್ರೀಯತೆ ಹಾಗೂ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುವ ಯಾವ ಸಂಘ ಸಂಸ್ಥೆ ಸಂಘಟನೆಗಳಿಗೆಮೂಲಾಜಿ ಇಲ್ಲದೆ ಕಠೋರ ಕ್ರಮ ಕೈಗೊಳ್ಳತ್ತಿದ್ದರು. ಒಂದು ಸಂದರ್ಭದಲ್ಲಿ ಆರ್ ಎಸ್ ಎಸ್ ನ್ನು ಸಹ ನಿಷೇಧ ಮಾಡಿ ನಂತರ ಶರತ್ತು ಬದ್ಧವಾಗಿ ವಾಪಸ್ ಪಡೆದ ಉದಾಹರಣೆ ಗಳು ಇತಿಹಾಸ ದಿಂದ ತಿಳಿದುಕೊಳ್ಳ ಬಹುದು. ಪಟೇಲರು ಎಂದು ದೇಶದ ಅಖಂಡತೆಯ ಬಗ್ಗೆ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಸಹಿಸುತ್ತಿರಲಿಲ್ಲ ರೈತ ನಾಯಕರಾದ ಅವರು ಇನ್ನು ಕನಿಷ್ಠ ಎರೆಡು ದಶಕಗಳು ಬದುಕಿದರೆ ಪ್ರಧಾನಿ ನೆಹರು ಸೇರಿದಂತೆ ಅಂಬೇಡ್ಕರ್ ಅವರ ಜೊತೆ ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಅದರಲ್ಲ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ರೈತರ ಕನಸು ನನಸಾಗುವಂತೆ ಮಾಡುತ್ತಿದ್ದರು ಎಂದರು.

ಈ ಸಂದರ್ಭದಲ್ಲಿ ಪಟೇಲ್ ಜಯಂತಿಯ ನಿಮಿತ್ಯ ಸಮಸ್ತ ನಾಡಿನ ಜನತೆಗೆ ಸಮಿತಿಯಿಂದ ಶುಭ ಕೋರಲಾಯಿತು.ಜಯಂತೋತ್ಸವ ಕಾರ್ಯಕ್ರಮದಲ್ಲಿ ಡಿ.ಬಿ.ನಾಯಕ, ಲಿಂಗರಾಜ ಸಿರಗಾಪೂರ, ಕಲ್ಯಾಣರಾವ ಪಾಟೀಲ,ಶಿವಲಿಂಗಪ್ಪ ಭಂಡಕ್, ಅಬ್ದುಲ್ ರಹೀಂ, ಅಬ್ದುಲ್ ಖದೀರ್, ಸಾಬಿರ್ ಅಲಿ, ಭೀಮರಾಯ ಕಂದಳ್ಳಿ, ಬಸವರಾಜ ಚಿಟಗುಪ್ಪಿ, ವಿಜಯ ಕುಮಾರ ಅವರಾದಿ, ಮಲ್ಲಿನಾಥ ಸಂಘಶೆಟ್ಟಿ, ಬೀಮಶೆಟ್ಟಿ ಮುಕ್ಕಾ, ಶಿವಾನಂದ ಕಾಂದೆ, ಬಾಬುರಾವ್ ಗವಾರ್,ಬಸವರಾಜ ಅನವರ್, ಶರಣಬಸಪ್ಪ ಕುರಿಕೂಟಾ,ಬಾಬಾ ಫಕ್ರುದ್ದೀನ್, ಪರಮೇಶ್ವರ ಹಡಪದ್, ಅಮಿತ್ ಕುಮಾರ್, ಭೀಮರಾಯ ಮಡಿವಾಳ ಸೇರಿದಂತೆ ನೂರಾರು ಸಮಿತಿಯ ಸದಸ್ಯರುಗಳು ಹಾಗೂ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here