ಕಲಬುರಗಿ: ಕೆಬಿಎನ್ ದರ್ಗಾದಲ್ಲಿ ನ. 3 ರಂದು “ಜಶನ್ ಎ ಫೈಜಾನ್ ಎ ಔಲಿಯಾ” ಕಾರ್ಯಕ್ರಮ

0
20

ಕಲಬುರಗಿ: ಹಜರತ್ ಖಾಜಾ ಗಂಜ್ ಬಕ್ಷಷ್ (ರ.ಅ) ಅವರ 593ನೇ ಉರುಸ್ ನಿಮಿತ್ತ ಖಾಜಾ ಬಂದಾ ನವಾಜ್ ದರ್ಗಾದ ಛೋಟಿ ದರ್ಗಾದಲ್ಲಿ ನ.3 ರಂದು ಜಶನ್ ಎ ಫೈಜಾನ್ ಎ ಔಲಿಯಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಹಜರತ್ ಖಾಜಾ ಗಂಜ್ ಬಕ್ಷಷ್ (ರ.ಅ) ಛೋಟಿ ದರ್ಗಾದ ಪೀಠಾಧಿಪತಿಗಳಾದ ಸೈಯದ್‌ ಶಾಹಾ ಯಾದುಲ್ಲಾ ಹುಸೇನಿ ನಿಜಾಂ ಬಾಬಾ ಸಾಹೇಬ್‌ ತಿಳಿಸಿದ್ದಾರೆ.

ನವೆಂಬರ್ 03 ರಂದು ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಛೋಟಿ ದರ್ಗಾದದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಹಜರತ್ ಖಾಜಾ ಗಂಜ್ ಬಕ್ಷಷ್ (ರ.ಅ) ಛೋಟಿ ದರ್ಗಾದ ಪೀಠಾಧಿಪತಿ ಹಜರತ್ ಅಬ್ದುಲ್ ಫತೇಹ ಸೈಯದ್ ಶಾ ಹಸೈನ್ ಶಬ್ಬಿರ್ ಮೊಹಮ್ಮದ್ ಉಲ್ ಹುಸೈನಿ ಸಾಹೇಬ್ ಖೀಬ್ಲಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.

Contact Your\'s Advertisement; 9902492681

ಮಾಲೇಗಾಂವನ ಸುನ್ನಿ ದಾವತ್ ಎ ಇಸ್ಲಾಮಿ ಸಂಚಾಲಕ ಸೈಯದ್ ಅಮೀನುಲ್ ಖಾದ್ರಿ ಸಾಹೇಬ್, ಬುರಹಾನ್ ಶಮಶೀರ್ ದರ್ಗಾದ ಪೀಠಾಧಿಪತಿ ಸೈಯದ್ ಕಲೀಮುಲ್ಲಾ ಹುಸೈನಿ ಕಾಶೀಫ್ ಪಾಶಾ ಸಾಹೇಬ್, ಅಬ್ದುಲ್ ಹಕೀಮ್ ವಿಖಾರ್ ಅಶ್ರಫಿ ಅವರಿಂದ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here