ರಿಷಿ ಪಬ್ಲಿಕ್ ಶಾಲೆಯಲ್ಲಿ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ

0
95

ಆನೇಕಲ್: ತಾಲ್ಲೂಕಿನ ರಿಷಿ ಪಬ್ಲಿಕ್ ಶಾಲೆಯಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಿಸುವಂತಹ ಹಾಡುಗಳಿಗೆ ನೃತ್ಯಗಳನ್ನು ಮಾಡುವ ಮೂಲಕ ಮೆರಗನ್ನು ನೀಡಿದರು.

Contact Your\'s Advertisement; 9902492681

ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾಸುಹೊಕ್ಕಾಗಿರುವ ಕಲಾ ಪ್ರಕಾರಗಳಾದ ಕಂಸಾಳೆ, ಭರತನಾಟ್ಯ, ಯಕ್ಷಗಾನ, ಕೊಡವ ಕುಣಿತ, ಮಾದೇವ ನೃತ್ಯ, ಕೋಲಾಟ ನೃತ್ಯಗಳನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಬಿ.ವಿ.ಅರಳಪ್ಪನವರ್ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ನಾಡಿನ ವೈವಿಧ್ಯತೆಗಳನ್ನು ಸಾರುವಂತಹ ನೃತ್ಯಗಳನ್ನು ಮಾಡುವ ಮೂಲಕ ಕನ್ನಡ ನಾಡಿ‌ನ ಹಿರಿಮೆಯನ್ನು ಸಾರಿದ್ದಾರೆಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಲೆಯ ಶಿಕ್ಷಕರು ನಾಡು-ನುಡಿಯ ಬಗ್ಗೆ ಅಭಿಮಾನ, ಅರಿವು ಇದ್ದರೆ, ಅದು ವಿದ್ಯಾರ್ಥಿಗಳ ಮೂಲಕ ಪ್ರತಿಬಿಂಬವಾಗುತ್ತದೆ‌. ಆ ರೀತಿಯಲ್ಲಿ ರಿಷಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿಯ ಕುರಿತು ಪ್ರೀತಿ ಮೂಡಿಸುವಂತೆ ಮಾಡಿರುವುದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೂಲಕ ಸಾಬೀತು ಪಡಿಸಿದ್ದಾರೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ವಿದ್ಯಾರ್ಥಿಗಳು ಕುಂಟೆ ಬಿಲ್ಲೆ, ಗೋಲಿ, ಲಗೋರಿ, ಬುಗುರಿ ಗ್ರಾಮೀಣ ಆಟಗಳನ್ನು ಆಡವ ಮೂಲಕ ಖುಷಿಪಟ್ಟರು. ಹಾಗೂ ವಚನ ಸಾಹಿತ್ಯ ಕುರಿತು ಕಿರು ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ ಶಶಿಧರ್, ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here