ನಮ್ಮ ಭಾಷೆ, ನೆಲ, ಜಲಕ್ಕಾಗಿ ಜೀವಕೊಟ್ಟವರಿಗೆ ಋಣಿ :ಯಾರಿ

0
27

ವಾಡಿ: ನಮ್ಮ ಭಾಷೆ,ನೆಲ,ಜಲ ಜತನ ಮಾಡುವ ಮನಸ್ಸುಗಳಿಂದಲೆ ನಮ್ಮ ನಾಡಿನ ವೈಭವ ನಿರಂತರವಾಗಿದೆ ಎಂದು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಇಂದು ಕರುನಾಡಿನ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆಯ ಮಹತ್ವ ಸಾರುವ ಕರ್ನಾಟಕ ಹಬ್ಬ ಇದಾಗಿದೆ. ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ.ಇಲ್ಲಿ ಎಲ್ಲಾ ಧರ್ಮಗಳ, ಜಾತಿಗಳ ಸಮುದಾಯಗಳೊಂದಿಗೆ ನಾವು ಸಹೋರತ್ವ ಭಾವನೆಯಿಂದ ಬಾಳುತ್ತೀದ್ದೇವೆ.

ಕರ್ನಾಟಕ ವೆಂದು ಹೆಸರಾಗಿ ಇಂದಿಗೆ 50 ವರ್ಷ ನಾವು ಸಾಧಿಸಿದ್ದು ಸಾಕಷ್ಟು,ಮುಂದಿನ ನಮ್ಮ ನಾಡಿನ ಶ್ರೇಯೋಭಿವೃದ್ದಿಗೆ ನಾವು ಸದಾ ಶ್ರಮಿಸುವ ಮನಸ್ಸು ಈ ಕರ್ನಾಟಕ ಮಾತೆ ನಮ್ಮಲ್ಲಿ ಮೂಡಿಸಲಿ ಎಂದರು.

ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾದ ಅಧ್ಯಕ್ಷ ಭಾಗಣ್ಣ ದೊರೆ,ಮುಖಂಡರಾದ ರಾಮಚಂದ್ರ ರಡ್ಡಿ, ಸಿದ್ದಣ್ಣ ಕಲ್ಲಶೆಟ್ಟಿ, ಗಿರಿಮಲ್ಲಪ್ಪ ಕಟ್ಟೀಮನಿ, ಅರ್ಜುನ ಕಾಳೆಕರ್, ಕಿಶನ್ ಜಾಧವ್,ಶಿವಶಂಕರ ಕಾಶೆಟ್ಟಿ,ಸತೀಶ್ ಸಾವಳಗಿ, ಅನುಸಾಬಾಯಿ ಪವಾರ, ದೇವಕ್ಕಿ ಪುಜಾರಿ, ಅಯ್ಯಣ್ಣ ದಂಡೋತಿ, ಪ್ರಕಾಶ ಪುಜಾರಿ, ರಾಜು ಕೋಳಿ, ಆನಂದ ಇಂಗಳಗಿ, ಮಲ್ಲಿಕಾರ್ಜುನ ಸಾತಖೇಡ್, ಚಂದ್ರಶೇಖರ ಬೆಣ್ಣೂರಕರ್, ಅಶೋಕ ಗುತ್ತೆದಾರ ಸೇರಿದಂತೆ ಅನೇಕರು  ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here