ರಾಜುಗೌಡಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗೆ ಆಗ್ರಹ

0
107

ಸುರಪುರ: ಭಾರತೀಯ ಜನತಾ ಪಕ್ಷದ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಹಾಗು ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ)ಗೆ ಸಚಿವ ಸ್ಥಾನ ನೀಡುವಂತೆ ನಗರದಲ್ಲಿ ರಾಜುಗೌಡ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾಗು ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದರು.

ಬೆಳಿಗ್ಗೆ ಹನ್ನೊಂದು ಗಂಟೆಗೆ ತಾಲ್ಲೂಕು ಬಿಜೆಪಿ ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡರು.ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ರಾಜ್ಯದ ಬಿಜೆಪಿ ಪಕ್ಷದ ಪ್ರಮುಖ ಮುಖಂಡರಲ್ಲಿ ರಾಜುಗೌಡರು ಒಬ್ಬರು.ಅಲ್ಲದೆ ಕಳೆದ ಚುನಾವಣೆಯ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ,ಅಲ್ಲದೆ ಅನೇಕ ಜನ ಶಾಸಕರ ಗೆಲುವಿನಲ್ಲಿ ರಾಜುಗೌಡರ ಪಾತ್ರವಿದೆ. ಜೊತೆಗೆ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮತಗಳಿಂದ ಜಯಗಳಿಸಿದ್ದಾರೆ ಹಾಗು ಮೂರು ಬಾರಿ ಶಾಸಕರಾಗಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ಮತ್ತು ಹಿಂದೆಯೂ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.ಇಂತಹ ನಮ್ಮ ನಾಯಕರಿಗೆ ರಾಜ್ಯ ಸರಕಾರದಲ್ಲಿ ಸಚಿವಸ್ಥಾನ ನೀಡದೆ ಅನ್ಯಾಯ ಮಾಡಲಾಗುತ್ತಿದೆ.ಆದ್ದರಿಂದ ರಾಜ್ಯದಲ್ಲಿಯ ಎಸ್ಟಿ ಸಮುದಾಯಕ್ಕೆ ನ್ಯಾಯ ಒದಗಿಸಲು ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕು ಮತ್ತು ನಮ್ಮ ಶಾಸಕರಾದ ನರಸಿಂಹ ನಾಯಕ (ರಾಜುಗೌಡ)ರಿಗೆ ಸಚಿವ ಸ್ಥಾನ ನೀಡಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುವುದು.ಮುಂದಾಗುವ ಅನಾಹುತಗಳಿಗೆ ತಾವೆ ಜವಬ್ದಾರರಾಗಲಿದ್ದೀರಿ ಎಂದು ಬಿಜೆಪಿ ಹೈಕಮಾಂಡ್‌ಗೆ ಆಗ್ರಹಿಸಿ,ನಂತರ ಮುಖ್ಯಮಂತ್ರಿ ಮತ್ತು ಬಿಜೆಪಿ ಹೈಕಮಾಂಡ್‌ಗೆ ಬರೆದ ಮನವಿಯನ್ನು ತಹಸೀಲ್ದಾರ ಸುರೇಶ ಅಂಕಲಗಿ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ),ರಾಜುಗೌಡ ಅಭಿಮಾನಿಗಳ ಸಂಘದ ಅಧ್ಯಕ್ಷ ಶಂಕರ ನಾಯಕ,ವೇಣುಮಾಧವ ನಾಯಕ,ವೇಣುಗೋಪಾಲ ಜೇವರ್ಗಿ,ರಾಜಾ ಪಾಮನಾಯಕ,ಶ್ರೀನಿವಾಸ ನಾಯಕ ದರಬಾರಿ,ಈಶ್ವರ ನಾಯಕ,ಚಂದ್ರಶೇಖರ ಹಸನಾಪುರ,ಭೀಮಾಶಂಕರ ಬಿಲ್ಲವ,ಸುರೇಶ ಸಜ್ಜನ,ರಂಗನಗೌಡ ದೇವಿಕೇರಾ,ಎಕ್ಬಾಲ್ ವರ್ತಿ,ಪಾರಪ್ಪ ಗುತ್ತೇದಾರ,ಬಲಭೀಮ ನಾಯಕ, ಅಬ್ದುಲ್ ಗಫೂರ ಖುರೇಶಿ,ಧರ್ಮರಾಜ ಬಡಿಗೇರ,ಕುಮಾರಸ್ವಾಮಿ ಗುಡ್ಡಡಗಿ,ಮಲ್ಲು ವಿಷ್ಣುಸೇನಾ,ಹರೀಶ ತ್ರಿವೇದಿ,ಶಿವು ಕಲಕೇರಿ,ದೇವರಾಜ ವಕೀಲ ಸೇರಿದಂತೆ ಅನೇಕರಿದ್ದರು.ಪಿಐ ಆನಂದರಾವ್ ನೇತೃತ್ವದಲ್ಲಿ ಎಲ್ಲೆಡೆ ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here