ಪ್ಯಾಲೆಸ್ಟೈನ್ ನಲ್ಲಿ ‘ನರಮೇಧ ನಿಲ್ಲಿಸಿ ಶಾಂತಿ ಸ್ಥಾಪಿಸಿ’ ಸಿಪಿಐಎಂ ವತಿಯಿಂದ ಸಮಾವೇಶ

0
29

ಕಲಬುರಗಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಪ್ಯಾಲೆಸ್ಟೈನ್ ಪರ ಬೆಂಬಲಿಸಲಿಲ್ಲ ಅಂದರೆ ಇಸ್ರೇಲ್ ನ ನರಮೇಧ ಬೆಂಬಲಿಸಿದಂತೆ ಭಾರತವು ಪ್ಯಾಲೆಸ್ಟೈನ್ ರ ತಾಯ್ನೆಲದ ಹೋರಾಟಕ್ಕೆ ಬೆಂಬಲಿಸಿದೆ. ಆದರೆ ಪ್ರಧಾನಿಯವರು ಇಂದು ನರಮೇಧಕ್ಕೆ ಬೆಂಬಲ ಕೊಡುವ ಮೂಲಕ ಭಾರತದ ಅಲಿಪ್ತ ನೀತಿಯ ವಿರುದ್ಧ ನಡೆದುಕೊಂಡಿದೆ ಎಂದು ಸಿಪಿಐಎಂ ಪಕ್ಷದ ಪಾಲಿಟ್ ಬ್ಯರೊ ಸದಸ್ಯರಾದ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವರಾದ ಕಾ.ಎಂ ಎ ಬೇಬಿ ಹೇಳಿದರು.

ಸಿಪಿಐಎಂ ಆಯೋಜಿಸಿದ ‘ನರಮೇಧ ನಿಲ್ಲಿಸಿ ಶಾಂತಿ ಸ್ಥಾಪಿಸಿ’ ಸಮಾವೇಶದಲ್ಲಿ ಮಾತನಾಡಿದ ಅವರು ಇಸ್ತೇಲಿ ನರಮೇಧ ಸಿದ್ಧಾಂತವೇ ಭಾರತದಲ್ಲಿ ಮಹಾತ್ಮಾ ಗಾಂಧಿಯವರನ್ನು ಕೊಂದಿದ್ದು ಇತಿಹಾಸದಲ್ಲಿ ನೋಡಿದ್ದೇವೆ. ಭಾರತದ ಪರಂಪರೆಯು ಶಾಂತಿಗಾಗಿ ಶ್ರಮಿಸಿದ ಪರಂಪರೆಯಾಗಿದೆ. ಇಸ್ರೇಲ್ ದೇಶವು ಆಸ್ಪತ್ರೆಯ ಮೇಲೆ, ನಿರಾಶ್ರಿತರ ಶಿಬಿರದ ಮೇಲೂ ಜನವಸತಿಯ ಮೇಲೂ ಧಾಳಿ ಮಾಡುತ್ತಿದೆ. ಇದು ಏಕಪಕ್ಷೀಯ ನರಮೇಧವಾಗಿದೆ. ಇಂತಹ ನರಮೇಧಕ್ಕೆ ಅಮೇರಿಕವು ಶಸ್ತ್ರಾಸ್ತ ಮತ್ತು ಹಣಕಾಸು ನೆರವು ನೀಡುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು. ಇದು ನಿಲ್ಲಬೇಕು. ಶಾಂತಿ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಪ್ಯಾಲೆಸ್ಟೈನ್ ರಿಗೆ ತಾಯ್ನಾಡು ದೊರೆಯಬೇಕು. ಪ್ಯಾಲೆಸ್ಟೈನ್ ನ ಗಾಜಾ ಪ್ರದೇಶದಲ್ಲಿ ಜನರು ವಾಸ ಮಾಡುತ್ತಾರೆ. ಇಸ್ರೇಲಿ ಸೈನಿಕರು ಇಡೀ ಗಾಜಾ ಪ್ರದೇಶದ ಜನರಿಗೆ ಹೊರಹೋಗದಂತೆ ಮಾಡಲಾಗಿದೆ. ದಿಗ್ಭಂಧನ ಹಾಕಲಾಗಿದೆ. ನೀರು ಮೆಡಿಕಲ್ ವಿದ್ಯುಚ್ಚಕ್ತಿ ದೊರೆಯದಂತೆ ಮಾಡಲಾಗಿದೆ. ಇದು ಅತ್ಯಂತ ಅಮಾನವೀಯವಾದದ್ದು. ಇದನ್ನು ಶಾಂತಿ ಬಯಸುವ ಎಲ್ಲರೂ ತೀವ್ರವಾಗಿ ಖಂಡಿಸಬೇಕಿದೆ ಎಂದು ಕರೆ ನೀಡಿದರು.

ಅಮೇರಿಕಾ ಇಸ್ರೇಲ್ ಬೆಂಬಲಿಸುವ ತನ್ನ ಕ್ರೂರ ನಿಲುವು ನಿಲ್ಲಿಸಬೇಕು. ಪ್ಯಾಲೆಸ್ಟೈನ್ ಜನತೆಗೆ ಬದುಕುವ ಎಲ್ಲ ಹಕ್ಕುಗಳು ದೊರೆಯಬೇಕು ಎಂದು ಸಿಪಿಐಎಂ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದ ಕಾ.ಬಿ ವಿ ರಾಘವಲು ಹೇಳಿದರು.

ಈ ಸಮಾವೇಶದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾ.ಯು ಬಸವರಾಜ ಹಾಗೂ ಜಿಲ್ಲಾ ಕಾರ್ಯದರ್ಶು ಕಾ.ಕೆ ನೀಲಾ ಭಾಗವಹಿಸಿರುವರು. ಮತ್ತು ಕಾ.ಶರಣಬಸಪ್ಪ ಮಮಶೆಟ್ಟಿ, ಕಾ.ಶ್ರೀಮಂತ ಬಿರಾದಾರ, ಕಾ.ಗೌರಮ್ಮ, ಕಾ.ಶಾಂತಾ ಘಂಟೆ, ಕಾ.ಎಂ ಬಿ ಸಜ್ಜನ್, ಕಾ.ಭೀಮಶೆಟ್ಟಿ ಯಂಪಳ್ಳಿ ಅವರು ವೇದಿಕೆಯ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here