ಕೆಬಿಎನ್ ವಿವಿಯಲ್ಲಿ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ ಶಿಬಿರ

0
45

ಕಲಬುರಗಿ : ನಗರದ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಎಂಜಿನಿಯರಿಂಗ್ ನಿಕಾಯದಲ್ಲಿ ಶನಿವಾರ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

v2 ಕೌಶಲ್ಯ ವರ್ಧನೆ ಮತ್ತು ಸಂಪನ್ಮೂಲ ಕೇಂದ್ರದ ನಿರ್ದೇಶಕ ವಿವೇಕ ಹಿರೇಮಠ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಜಯ ಸಿಂಘ ಠಾಕುರ ಎರಡು ಗೋಷ್ಠಿಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ವಿಡಿಯೋ, ಪ್ರಶ್ನೆ, ಸಹಿ ಉತ್ತರಗಳಿಗೆ ಬಹುಮಾನ, ಸ್ಫೂರ್ತಿದಾಯಕ ಮಾತು, ಸಂದರ್ಶನವನ್ನು ಎದುರಿಸುವ ಬಗೆ ಮುಂತಾದ ತಂತ್ರಗಳನ್ನು ತಿಳಿ ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು.

ಅಬ್ದುಲ್ ಮುಸೈಬ್ ಪ್ರಾರ್ಥಿಸಿದರೆ, ನ್ಯಾ ಕ್ ನಿರ್ದೇಶಕ ಡಾ ಬಷೀರ್ ಅಹ್ಮದ್ ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣದ ಡೀನ ಸ್ಯೆದ್ ನಜಿರ್ ಅಹ್ಮದ್ ಪರಿಚಯಿಸಿದರೆ ಇಂಜಿನಿಯರಿಂಗ ನಿಕಾಯದ ಡೀನ್ ಡಾ ಮೊಹಮ್ಮದ ಅಜಾಮ್ ಪ್ರಸ್ತಾವಿಕ ನುಡಿದರು.ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಹಾಯಕ ಪ್ರಾಧ್ಯಪಾಕಿ ಜೋಹರಾ ಬೇಗಂ ವಂದಿಸಿದರೆ ವಿದ್ಯಾರ್ಥಿನಿ ರುಕಯ್ಯ ರಫಾ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಡೀನ್ ಡಾ ಸಿದ್ದೇಶ್, ಪ್ರೊ ಅರ್ಫಾತ್, ಜಾವೆದ್, ಡಾ ಮಜೀದ್, ಶಿರೀನ್ ಫಾತಿಮಾ, ಡಾ ಅಲಿ, ಜಮೀರ್ ಅಹ್ಮದ್, ಡಾ ರಫಿಯ, ಡಾ ರಾಧಿಕಾ, ಶಿರೀನ್, ಮಂಜುನಾಥ್, ಸಮದ್, ಅಂಜುಮ್, ಲೂಬ್ನ್ ಕೌಸರ್ , ಆಯೇಷಾ, ಅಸ್ರ, ಜಿನಾಥ್, ವಿನಯ್, ನಝರುದ್ದಿನ್ ಮುಂತಾದವರಿದ್ದರು.

ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಪಾಕಿ ಡಾ ರಾಫಿಯ ಗೋಷ್ಠಿಯ ನಂತರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here