ದೃತರಾಷ್ಟ್ರನ ಕುರುಡು ರಾಜಕಾರಣ; ಭಾರತದ ರಾಜಕಾರಣಿಗಳು

0
19

ದೃತರಾಷ್ಟ್ರನ ಕುರುಡು ರಾಜಕಾರಣ. ಈ ಹಿಂದೆ ಮಹಾಭಾರತದಲ್ಲಿ ದೃತರಾಷ್ಟ್ರ ಕುರುಡ ಅಂದ ನೃಪ ಎಂದು ಕರೆಸಿಕೊಳ್ಳುತ್ತಿದ್ದ ಆತನ ಕುರುಡು ರಾಜಕಾರಣ ಇಂದಿಗೂ ಕೂಡ ಮರೆಯದ ದಾಖಲಾತ್ಮಕ ಸಂಗತಿಯಾಗಿದೆ ಅಂದು ದೃಢರಾಷ್ಟ್ರನೊಬ್ಬನೇ ಕುರುಡು ರಾಜಕಾರಣವನ್ನು ಮಾಡಿದನೆಂಬ ಆರೋಪವಿದೆ ಆದರೆ ಇಂದಿನ ಮಹಾಭಾರತದಲ್ಲಿ ಎಲ್ಲ ರಾಜಕಾರಣಿಗಳು ದೃತರಾಷ್ಟ್ರನ ವಂಶಸ್ಥರೇ ಆಗಿದ್ದಾರೆ ಆತನ ಕುರುಡು ರಾಜಕಾರಣವನ್ನು ಪರಂಪರಾನುಗತವಾಗಿ ಎನ್ನುವಂತೆ ಅನುಸರಿಸುತ್ತಿದ್ದಾರೆ ಧೃತರಾಷ್ಟ್ರನು ಪುತ್ರ ವ್ಯಾಮೋಹದಿಂದ ಬಳಲಿ ದುರ್ಯೋಧನನಿಗೆ ಪಟ್ಟವನ್ನು ಕಟ್ಟುವ ಮೂಲಕ ತನ್ನ ಸಹೋದರರ ಮಕ್ಕಳನ್ನು ಕಾಡಿಗಟ್ಟಿದ ಪ್ರಸಂಗ ಎಲ್ಲರೂ ಓದಿದ್ದೇವೆ ಅದೇ ರೀತಿ ಇಂದು ನಮ್ಮ ಭಾರತದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಪಟ್ಟಾಭಿಷೇಕ ಮಾಡುವುದಕ್ಕಾಗಿ ತಮ್ಮದೇ ಪಕ್ಷದ ಸೋದರರನ್ನು ಸಂಬಂಧಿಗಳನ್ನು ಕಾಡಿಗೆ ಕಳುಹಿಸುವ ವ್ಯವಸ್ಥಿತ ಸಂಚು ಮಾಡುತ್ತಿದ್ದಾರೆ.

ಇಂತಹ ಘಟನೆಗಳು ಅಂದಿನ ಮಹಾಭಾರತದಲ್ಲಿಯೇ ಮುಗಿಯಿತು ಎಂದು ಭಾವಿಸಿದ್ದೆವು ಇಂದಿಗೂ ಕೂಡ ಅವು ಮರುಕಳಿಸುತ್ತಿವೆ ಅಂದಿನ ಮಹಾಭಾರತದಲ್ಲಿರುವ ಎಲ್ಲವೂ ಈ ಭಾರತದಲ್ಲಿದೆ ಇಂದಿನ ಭಾರತದಲ್ಲಿ ನಡೆಯುವ ಎಲ್ಲ ಸಂಗತಿಗಳು ಮಹಾಭಾರತ ಕಾವ್ಯದಲ್ಲಿ ಅಡಕವಾಗಿವೆ.

Contact Your\'s Advertisement; 9902492681

ಮಹಾಭಾರತ ಭಾರತೀಯರ ಜನಜೀವನದ ಸಮಗ್ರ ಕಾವ್ಯವಾಗಿದೆ ಇಂತಹ ಕಾವ್ಯವನ್ನು ರಚಿಸಿದ ವ್ಯಾಸ ಮಹರ್ಷಿ ದೂರ ದೃಷ್ಟಿ ಮುಂದಾಲೋಚನೆ ಇರಿಸಿಕೊಂಡು ಮುಂದೆ ಭಾರತದಲ್ಲಿ ಏನು ನಡೆಯಬಹುದೆಂಬುದನ್ನು ತಿಳಿದು ಊಹಿಸಿ ಮೊದಲೇ ಬರೆದಂತಿದೆ ಇಂದು ರಾಜಕೀಯದಲ್ಲಿ ಹಿರಿಯ ನಾಯಕರುಗಳು ಎಲ್ಲ ಪಕ್ಷಗಳಲ್ಲಿ ದೃತರಾಷ್ಟ್ರನಂತೆ ಕಾಣುತ್ತಿದ್ದಾರೆ ಅವರ ಮಕ್ಕಳು ಧೃತರಾಷ್ಟ್ರನ ಮಕ್ಕಳಂತೆ ಬಾಪಕಾ ಬೇಟಾಗಳಾಗಿದ್ದಾರೆ ತಂದೆಯ ಹೆಸರಿನಲ್ಲಿ ಮತ್ತು ಅವರ ವರ್ಚಸ್ಸು ಪ್ರಭಾವದಲ್ಲಿ ಅಧಿಕಾರದ ದಾರಿಯಲ್ಲಿ ಮುನ್ನಡೆದು ತಮ್ಮ ತಂದೆ ಗಳಿಗಿಂತಲೂ ಹೆಚ್ಚಾಗಿ ಮತ್ತು ಜೋರಾಗಿ ರಾಜಕೀಯ ಮಾಡುತ್ತಿದ್ದಾರೆ

ದುರ್ಯೋಧನನ ಎಲ್ಲಾ ಸಾಹಸ ಗುಣಗಳನ್ನು ಅಳವಡಿಸಿಕೊಂಡು ದುರ್ಯೋಧನರಾಗಿ ಜೋರಾಗಿ ಮೆರೆಯುತ್ತಿದ್ದಾರೆ ಅಧಿಕಾರ ಹಣ ಮತ್ತು ವ್ಯಸನಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ ಈ ಪರಂಪರೆ ಮುಂದುವರಿಯುತ್ತಿರುವುದು ಸರಿಯಾದ ಕ್ರಮವಲ್ಲ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಪ್ರಜಾಪ್ರಭುತ್ವವನ್ನು ಕುರಿತು ಬರೆಯುವಾಗ ಗೌಡರ ಮಗ ಗೌಡ ಕುಲಕರ್ಣಿಯ ಮಗ ಕುಲಕರ್ಣಿ ರಾಜನ ಮಗ ರಾಜ ಆಗಬಾರದು ಅರ್ಹತೆ ಯೋಗ್ಯತೆ ಇದ್ದವರು ಯಾರಾದರೂ ದೇಶವನ್ನು ಆಳಬಹುದು ಎಂದು ಯೋಚಿಸಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪಿಸಲು ಸಂವಿಧಾನ ರಚಿಸಿದರು.

ಇಂದು ನಡೆಯುತ್ತಿರುವುದು ಸಂವಿಧಾನಯುಕ್ತವಾದ ಸರ್ಕಾರವಲ್ಲ ಸಂವಿಧಾನ ಬಾಹಿರವಾದ ಕಾನೂನುಬಾಹಿರವಾದ ಚಟುವಟಿಕೆಗಳನ್ನು ನಡೆಸುವ ಸರಕಾರಗಳು ಅಸ್ತಿತ್ವಕ್ಕೆ ಬರುತ್ತಿವೆ ನಿಜಕ್ಕೂ ಇದು ವಿಷಾದದ ಸಂಗತಿಯಾಗಿದೆ ಇಂದು ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿಗಳಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಮೀಸಲಾತಿ ಲಾಭವನ್ನು ಅವರ ಗಂಡಂದಿರು ಪಡೆಯುತ್ತಿದ್ದಾರೆ ಅದೇ ರೀತಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ತಂದೆ ತಾಯಿ ರಾಜಕೀಯದಲ್ಲಿದ್ದರೆ ಅವರ ಎಲ್ಲ ಸೌಲತ್ತುಗಳನ್ನು ಅವರ ಮಕ್ಕಳು ಪಡೆಯುವುದರೊಂದಿಗೆ ಉತ್ತರಾಧಿಕಾರಿಯೂ ಆಗುತ್ತಿದ್ದಾರೆ ಇಂದು ಪ್ರಜಾಪ್ರಭುತ್ವ ಯಾರಿಗೂ ಬೇಕಾಗಿಲ್ಲ ಬದಲಿಗೆ ತಮ್ಮ ಕುಟುಂಬ ರಾಜಕಾರಣ ಮಕ್ಕಳು ಮೊಮ್ಮಕ್ಕಳು ಅಧಿಕಾರದಲ್ಲಿರುವದನ್ನು ಅವರು ಕಣ್ಣಾರೆ ನೋಡಿ ಸಂತೋಷಪಡುವ ವಿಕೃತ ಜಿಮನಸ್ಸಿನ ರಾಜಕಾರಣಿಗಳ ಕಾಲವಾಗಿದೆ.

ಇದು ಭಾರತದ ದುರಂತ ಪ್ರಜಾಪ್ರಭುತ್ವದ ಅಣಕು ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ತೋರಿಸುವ ಅಗೌರವ ಒಂದು ರೀತಿ ಕ್ರೂರ ವೆಂಗ್ಯವಾಗಿದೆ ಹಿಂತಾ ಸ್ಥಿತಿಯನ್ನು ಬುದ್ಧಿಜೀವಿಗಳು ಹೋರಾಟಗಾರರು ಚಿಂತಕರು ಸೇರಿ ರಾಜಕೀಯ ದೃವೀಕರಣ ಮಾಡಬೇಕು ಇಂದಿನ ರಾಜಕೀಯ ಸ್ಥಿತಿಗತಿ ಸುಧಾರಿಸಲು ಅದಕ್ಕಾಗಿ ಇಂದು ಹೋರಾಟ ತುರ್ತು ಅಗತ್ಯವಾಗಿದೆ ದೃತರಾಷ್ಟ್ರನ ಕುರುಡ ರಾಜಕಾರಣ ನಿಲ್ಲಿಸಿ ಜನರಿಂದ ಜನರಿಗಾಗಿ ಜನರೇ ಆಳುವ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಇಲ್ಲದಿದ್ದರೆ ಮತ್ತೆ ನಾವು ವಂಶ ಪಾರಂಪರ್ಯ ಕುಟುಂಬ ರಾಜಕಾರಣದ ಹೆಮ್ಮಾರಿಗೆ ಬಲಿಯಾಗಿ ಪ್ರಜಾಪ್ರಭುತ್ವವನ್ನು ನಾಶ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ.

 

-ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here