ಕನ್ನಡ ಭಾಷೆ ಅನ್ನದ ಭಾಷೆಯಾಗಲಿ: ಪ್ರೊ. ಅಷ್ಠಗಿ ಆಶಯ

0
86

ಕಲಬುರಗಿ : ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಕನ್ನಡ ಕಟ್ಟುವ ಕಾರ್ಯ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿತ್ಯ- ನಿರಂತರವಾಗಿ ನಡೆಯಲಿ, ಕನ್ನಡ ಭಾಷೆ ಅನ್ನದ ಭಾಷೆಯಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಯಶವಂತರಾಯ ಅಷ್ಠಗಿ ಆಶಯ ವ್ಯಕ್ತಪಡಿಸಿದರು.

ಹಲವಾರು ದಶಕಗಳ ಕಾಲ ನಾಡು-ನುಡಿಗಾಗಿ ಶ್ರಮಿಸಿದ ಉತ್ಕಟ ಪ್ರೇಮಿಗಳ ತ್ಯಾಗ-ಬಲಿದಾನದ ಸಾಕ್ಷಾತ್ಕಾರವೇ ಈ ಕನ್ನಡ ರಾಜ್ಯೋತ್ಸವ. ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರ ಆದಿಯಾಗಿ ಪ್ರಾತಃಸ್ಮರಣೀಯರಿಗೆಲ್ಲ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು. – ಪ್ರೊ.ಯಶವಂತರಾಯ ಅಷ್ಠಗಿ, ಗೌರವ ಕಾರ್ಯದರ್ಶಿ, ಕಸಾಪ ಕಲಬುರಗಿ.

ನಗರದ ಬಿದ್ದಾಪುರ ಕಾಲೋನಿಯ ಶ್ರೀ ಸಿದ್ಧಿವಿನಾಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ೬೮ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ದಕ್ಷಿಣ ಭಾರತದ ಅನೇಕ ರಾಜ್ಯ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸುವ ನಮ್ಮ ಹಿರಿಯರ ಕಾರ್ಯ ಸದಾ ಹಸಿರಾಗಿ ಕನ್ನಡಿಗರ ಮನೆ – ಮನೆಗಳಲ್ಲಿ ಅಜರಾಮರವಾಗಿ ಉಳಿಯಲಿದೆ,ಅವರ ಆಶಯದಂತೆ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೇಂದು ಪ್ರೊ.ಅಷ್ಠಗಿ ಕೆರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್ ಕೆ ಇ ಸಂಸ್ಥೆಯ ಆಡಳಿತ ಮಂಡಳಿ ‌ಸದಸ್ಯ ಅರುಣಕುಮಾರ ಎಂ ವೈ ಪಾಟೀಲ್ ಮಾತನಾಡಿ, ಕನ್ನಡದ ಅಸ್ಮಿತೆ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವನ್ನು ಮರಳಿ ಗಳಿಸಲು ಮತ್ತು ನಾಡಿನ ನೆಲ – ಜಲ ಭಾಷೆಯ ಸಂರಕ್ಷಣೆಗಾಗಿ ಹೋರಾಡೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿವಿನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ಶಿವಪುರ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ಎಚ್, ಡಾ.ಶಿವಪ್ರಸಾದ ಜಂಬಲದಿನ್ನಿ, ಅಂಬರೀಷ್ ಪಾಟೀಲ್, ಧರ್ಮರಾಜ ಹೇರೂರ ಶಂಕರೇಗೌಡ ಪಾಟೀಲ್ ಭಾಸಗಿ, ರಾಜಶೇಖರ ನಾಡಗೌಡ, ಬಸವಂತರಾಯ ಕೋಳಕೂರ್, ಶಿವಶರಣಪ್ಪ ಪೂಜಾರಿ, ಬಾಬುರಾವ್ ಕೋಬಾಳ, ಸುಧಾ ಗೊಬ್ಬರ ಖ್ಯಾತ ತಬಲಾ ವಾದಕ ಅಂಬರೀಷ್ ಹೂಗಾರ, ಸೂರ್ಯಕಾಂತ ಡುಮ್ಮಾ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ ಸುರೇಶ್ ಬಂಡಗಾರ ಸ್ವಾಗತಿಸಿದರು , ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು ಅಂಬರೀಷ್ ಹೂಗಾರ ದೇಸಾಯಿ ಕಲ್ಲೂರ, ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here