ಉಜ್ವಲ್ ಯೋಜನೆಯ ನೆಪದಲ್ಲಿ ಬಿಜೆಪಿ ಸದಸ್ಶತ್ವ: ಜಿಲ್ಲಾಧಿಕಾರಿಗೆ ಪ್ರಿಯಾಂಕ್ ಖರ್ಗೆ ದೂರು

0
117

ಕಲಬುರಗಿ: ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ವಿತರಿಸಲು ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡುತ್ತಿರುವುದನ್ನು ಖಂಡಿಸಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರಕಾರದ ಸೌಲಭ್ಶ ನಾಗರಿಕರಿಗೆ ತಲುಪಿಸಲು ಬಿಜೆಪಿ ಕಾರ್ಯಕರ್ತರೇನು ಅಧಿಕಾರಿಗಳೇ? ಅಥವಾ ಜನಪ್ರತಿನಿಧಿಗಳೇ? ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಉಜ್ವಲ್ ಯೋಜನೆಯಡಿಯಲ್ಲಿ ಗ್ಶಾಸ್ ವಿತರಿಸುವ ನೆಪದಲ್ಲಿ ಗ್ರಾಹಕರನ್ನು ಬಿಜೆಪಿ ಸದಸ್ಶರನ್ನಾಗಿ ಮಾಡಲಾಗುತ್ತಿದೆ. ಇದು ಕಾನೂನು ಭಾಹಿರವಾದ ಕೆಲಸವಾಗಿದೆ.

Contact Your\'s Advertisement; 9902492681

ಕೇಂದ್ರ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ನೀಡಲು ರಾಜ್ಯ ಬಿಜೆಪಿ, ಅವರ ಕಾರ್ಯಕರ್ತರಿಗೆ ಕಳುಹಿಸಿ ತಮ್ಮ ಪಕ್ಷದ ಸದಸ್ಯತ್ವವನ್ನು ಪಡೆಯಲು ಜನರಿಗೆ ಒತ್ತಾಯಿಸುತ್ತಿದ್ದಾರೆ ಎಂಬುದರ ಕುರಿತು ದೂರು ಬಂದಿರುವದರಿಂದ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವರು ಈ ಪತ್ರ ಬರೆದಿದ್ದಾರೆ.

ಶಿಷ್ಟಾಚಾರ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ವಿತರಕರನ್ನ ವಿಚಾರಣೆಗೆ ಒಳಪಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here