ಶವ ಸಂಸ್ಕಾರ ಸ್ಮಶ್ಮಾನ ಭೂಮಿ ಮಂಜೂರಾತಿಗೆ ಆಗ್ರಹ

0
38

ಕಲಬುರಗಿ: ಅಪಜಲಪೂರ ತಾಲ್ಲೂಕಿನ ಕೆಕ್ಕಿರಸಾವಳಗಿ (ಸಂಗಾಪೂರ) ಪರಿಶಿಷ್ಟ ಜಾತಿ, ಜನಾಂಗದವರಾದ ಮಾದಿಗ ಸಮುದಾಯದವರಿಗೆ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಮಂಜೂರಾತಿ ಮಾಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ಸ್ಮಶಾನ ಭೂಮಿ ಮಂಜೂರಾತಿ ಮಾಡಿಕೊಡಬೇಕೆಂದು ಸುಮಾರು 2 ವರ್ಷಗಳಿಂದ ನಿರಂತರವಾಗಿ ಗ್ರಾಮದ ಸಮುದಾಯದವರು ಎಲ್ಲರೂ ಸೇರಿ ಅಫಜಲಪೂರ ತಾಲ್ಲೂಕಿನ ದಂಡಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದರಂತೆ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡ 2 ಬಾರಿ ಮನವಿ ಸಲ್ಲಿಸಿದರೂ ಕೂಡ ಈ ಹಿಂದಿನ ಜಿಲ್ಲಾಧಿಕಾರಿಗಳು ಈ ವಿಷಯ ಕುರಿತು ನಿರ್ಲಕ್ಷ್ಯ ವಹಿಸಿದ್ದು, ಗ್ರಾಮದ ನಿವಾಸಿಗಳಾದ ನಾವು ಹಾಗೂ ನಮ್ಮ ಸಮಿತಿ ಇದನ್ನು ಖಂಡಿಸಿದೆ. ಕೆಲ ದಿನಗಳ ಹಿಂದೆ ಅದೇ ಗ್ರಾಮದ ಒಬ್ಬ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ಶವ ಸಂಸ್ಕಾರ ಮಾಡುವುದಕ್ಕೆ ಸ್ಥಳ, ಜಮೀನು ನೀಡಬೇಕೆಂದು ಸಂಬಂಧಪಟ್ಟ ಅಫಜಲಪೂರ ತಹಸೀಲ್ದಾರ ಅವರಿಗೆ ದೂರವಾಣಿ ಮೂಲಕ ಲೆಕ್ಕಾಧಿಕಾರಿಗಳಿಗೆ ದೂರವಾಣಿ ಮಾಡುವ ಮೂಲಕ ಹೇಳಿದರೂ ಕೂಡಾ ಹಾಗೂ ಗ್ರಾಮ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿರುವುದಿಲ್ಲ.

Contact Your\'s Advertisement; 9902492681

ಕೆಲ ತಿಂಗಳ ಹಿಂದೆ ಮರಣ ಹೊಂದಿದ ಆ ವ್ಯಕ್ತಿ ಶವ ಸಂಸ್ಕಾರ ಗ್ರಾಮದಿಂದ 2 ಕಿ.ಮೀ. ದೂರ ಮರಣ ಹೊಂದಿದ ಆ ವ್ಯಕ್ತಿಯ ಶವ ಸಂಸ್ಕಾರ ರಾತ್ರಿ 11:30 ಗಂಟೆಗೆ ಬೇರೆಯವರ ಖಾಸಗಿ ಜಮೀನಿನಲ್ಲಿ ಮನವಿ ಮಾಡಿಕೊಂಡು ಶವ ಸಂಸ್ಕಾರ ಮಾಡಲಾಯಿತು. ಹಾಗಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡುವುದೇನೆಂದರೆ, ಈಗಾದರೂ ಕೆಕ್ಕಿರಸಾವಳಗಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಇಲದೇ ಹೋದರೆ, ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ನಮ್ಮ ಸಮುದಾಯದವರು ಮರಣ ಹೊಂದಿದ್ದೆ ಆದರೆ, ಆ ಶವವನ್ನು ಕಲಬುರಗಿಯ ಜಿಲ್ಲಾಧಿಕಾರಿಗಳ ಕಛೇರಿಗೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತೇವೆ ಎಂದು ಗ್ರಾಮಸ್ಥರ ಪರವಾಗಿ ಅವರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ರಾಜು ಎಸ್ ಕಟ್ಟಿಮನಿ, ಬಾಬು ಮಾಂಗ,ಪ್ರಭು ಮಾಂಗ,ದಶರಥ ಮಾಂಗ,ಹಣಮಂತ ಮಾಂಗ,ರಾಜು ಮಾಂಗ,ರಾಜು ಎಸ್ ಕಟ್ಟಿಮನಿ,ಚಂದು ಎಸ್ ಕಟ್ಟಿಮನಿ,ಶ್ರೀಮಂತ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here