371 (J) ಸ್ಥಾನಮಾನದಲ್ಲಿ ಮುಂಬೈ ಕರ್ನಾಟಕದ ಭಾಗ ಸೇರಿಸುವ ಸಂಚು ಲಕ್ಷ್ಮಣ ದಸ್ತಿ ಖಂಡನೆ

0
34

ಕಲಬುರಗಿ; ಮುಂಬಯಿ ಕರ್ನಾಟಕ ಪ್ರದೇಶದ ಇಂಡಿ ಉಪ ವಿಭಾಗದ ತಾಲೂಕುಗಳು ಮತ್ತು ಮುದ್ದೇಬಿಹಾಳ ಹೈದ್ರಾಬಾದ ಕರ್ನಾಟಕದ ಅನುಚ್ಛೆದ 371ನೇ ಜೇ ವಿಶೇಷ ಸ್ಥಾನಮಾನದಲ್ಲಿ ಸೇರಿಸಬೇಕೆಂದು ಮುಂಬಯಿ ಕರ್ನಾಟಕದ ನಾಯಕರು ಹಿಂದೆ ನಿಂತು ನಡೆಸುತ್ತಿರುವ ಸಂಚಿಕೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸಿದೆ.

ಪ್ರಸ್ತುತ ಹೈದ್ರಾಬಾದ ಕರ್ನಾಟಕ ಪ್ರದೇಶದ ವಿಶೇಷ ಸ್ಥಾನಮಾನದ ವ್ಯಾಪ್ತಿಯಲ್ಲಿ ಒಂದೇ ಒಂದು ಗ್ರಾಮ ಸೇರಿಸಲು ಸಾಧ್ಯವಿಲ್ಲ ಮತ್ತು ನಾವು ಇದಕ್ಕೆ ಅವಕಾಶ ನೀಡುವುದಿಲ್ಲ, ಬೇಕಾದರೆ ಮುಂಬಯಿ ಕರ್ನಾಟಕದವರು ವಿಶೇಷ ಸ್ಥಾನಮಾನ ಬೇಡಿಕೆ ಇಟ್ಟು ಹೋರಾಟ ಮಾಡಿ ಪ್ರತ್ಯೇಕ ತಮ್ಮ ಭಾಗಕ್ಕೆ ವಿಶೇಷ ಸ್ಥಾನಮಾನ ಪಡೆಯಲ್ಲಿ ಇದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ನಮ್ಮ ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಮಾನದ ವ್ಯಾಪ್ತಿಯಲ್ಲಿ ಸೇರಲು ಯತ್ನಿಸಿದರೆ ನಾವು ಬಿಡುವುದಿಲ್ಲ ಇದಕ್ಕಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Contact Your\'s Advertisement; 9902492681

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಬೇಕೆಂದು ದಶಕಗಳಿಂದ ಕಷ್ಟ ಪಟ್ಟು ನಿರಂತರ ಹೋರಾಟ ಮಾಡಿ ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನದ 371ಜೇ ಕಲಂ ತಿದ್ದುಪಡಿಯ ವಿಶೇಷ ಸ್ಥಾನಮಾನ ಪಡೆದ್ದಿದ್ದೇವೆ.ಈ ರಚನಾತ್ಮಕ ಬೇಡಿಕೆ ಮುಂದಿಟ್ಟು ಕೊಂಡು ಹೋರಾಟ ನಡೆಸುವಾಗ ಕನಿಷ್ಠ ಸೌಜನ್ಯಕ್ಕಾದರೂ ನೈತಿಕ ಬೆಂಬಲ ನೀಡದ ಮುಂಬಯಿ ಕರ್ನಾಟಕದವರು ರೇಡಿಮೇಡ್ ಫಲ ಪಡಯಬೇಕೆನ್ನುವದು ಹಾಸ್ಯಾಸ್ಪದ ಸಂಗತಿ ಯಾಗಿದೆ.

ಮುಂಬಯ ಕರ್ನಾಟಕದವರಿಗೆ ವಿಶೇಷ ಸ್ಥಾನಮಾನ ಬೇಕಾದರೆ ಇದರ ಹೋರಾಟದ ಗಿಡ ಹಚ್ಚಿ ಪ್ರತ್ಯೇಕ ಮುಂಬಯಿ ಕರ್ನಾಟಕಕ್ಕೆ ಫಲ ಪಡೆಯಲು ಹೋರಾಡ ಮಾಡಲು ನಮ್ಮ ಯಾವ ತಕರಾರು ಇಲ್ಲ ಅದರೆ ಅಪ್ಪಿ ತಪ್ಪಿಯೂ ನಮ್ಮ ಪಾಲಿನಲ್ಲಿ ಸೇರಲು ಯತ್ನಿಸಿದರೆ ನಾವು ಬಿಡುವುದಿಲ್ಲ, ಅಷ್ಟೇ ಅಲ್ಲದೆ ಪ್ರಸ್ತುತ 371ನೇ ಜೇ ಕಾನೂನು ಸಹ ಇದಕ್ಕೆ ಅವಕಾಶ ನೀಡುವುದಿಲ್ಲ ಇಷ್ಟಾದರೂ ಎನೇ ಕುತಂತ್ರ ಮಾಡಿದರೆ ನಾವು ಸುಮ್ಮನೆ ಕೂಡುವುದಿಲ್ಲ ಎಂದು ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಬಲವಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here