ವಾಡಿ ಪುರಸಭೆ ಚುನಾವಣೆ; ಬಿಜೆಪಿಯಿಂದ ಸಭೆ

0
21

ವಾಡಿ; ಪಟ್ಟಣದ ಸೂರ್ಯ ಲಾಡ್ಜ್ ನಲ್ಲಿ ಪುರಸಭೆ ಚುನಾವಣೆ ನಿಮಿತ್ತವಾಗಿ ಮಹತ್ವದ ಸಭೆ ಜರುಗಿತು.

ಜಿಲ್ಲಾ ಅಧ್ಯಕ್ಷರಾದ ಶಿವರಾಜ ಪಾಟೀಲ ಮಾತನಾಡಿ ನಾಲ್ಕು ಬಾರಿ ವಾಡಿ ಯಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಲು ವಿಫಲವಾಗಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ, ಬಸ ನಿಲ್ದಾಣ ಇಲ್ಲ,ರಸ್ತೆ,ಚರಂಡಿ ಅವೈಜ್ಞಾನಿಕ ದಿಂದ ಕೂಡಿದ್ದು ಇವೆಲ್ಲ ಅವರ ಅಡಳಿತದ ಸಮಸ್ಯೆಗಳಿಂದ ಜನ ಬೆಸತ್ತು ಬಿಜೆಪಿಗೆ ಅಧಿಕಾರಕ್ಕೆ ತರಲು ಸಿದ್ದರಾಗಿದ್ದಾರೆ ಎಂದರು.

Contact Your\'s Advertisement; 9902492681

ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ, ಭರವಸೆಗಳನ್ನೇ ದೇಶದ ಎಲ್ಲ ಕಡೆಯೂ ಪ್ರಚಾರ ಮಾಡಿದೆ. ಆದರೆ, ಜನರಿಗೆ ಅವರ ಮೇಲೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಅವರ ಗ್ಯಾರಂಟಿಗಳು ವಿಫಲವಾಗುತ್ತ ಸಾಗಿವೆ. ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೇ ಜನರ ಆಶೀರ್ವಾದ ಸಿಗಲಿದೆ ಎಂದರು.

ಲೋಕಸಭಾ ಸದಸ್ಯ ಡಾ ಉಮೇಶ‌ ಜಾಧವ್, ತಾಲ್ಲೂಕು ಪ್ರಭಾರಿ ಶಶಿಧರ ಸೂಗುರ, ತಾಲ್ಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ಮುಖಂಡರಾದ ಮಣಿಕಂಠ ರಾಠೋಡ,ರಾಜು ಮುಕ್ಕಣ್ಣ,ಗಿರಿಮಲ್ಲಪ್ಪ ಕಟ್ಟಿಮನಿ,ರಾಮಚಂದ್ರ ರಡ್ಡಿ, ಭೀಮರಾವ ದೊರೆ, ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ,ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮಹಿಳಾ ಮೂರ್ಚಾ ಅಧ್ಯಕ್ಷ ಚಂದ್ರಕಲಾ ಬುದಡಕರ್, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಯವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಅರ್ಜುನ ಕಾಳೆಕರ, ಹರಿ ಗಲಾಂಡೆ,ರವಿ ಕಾರಬಾರಿ,ಯಮನಪ್ಪ ನವನಳ್ಳಿ, ಕಿಶನ ಜಾಧವ,ರಿಚರ್ಡ್ ಮಾರೆಡ್ಡಿ ಸೇರಿದಂತೆ ನೂರಾರು ಮುಖಂಡರು,ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here