ಬಯಲು ಗ್ರಂಥಾಲಯ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯುವೆ: ಶಾಸಕ ಅಲ್ಲಮಪ್ರಭು ಪಾಟೀಲ್

0
93
  • ಆಂಧ್ರದಲ್ಲಿನ ಕನ್ನಡಿಗರಿಗಾಗಿ ಶ್ರೀಶೈಲ ಸಾರಂಗಮಠದಲ್ಲೂ ಶೀಘ್ರ ಬಯಲು ಗ್ರಂಥಾಲಯ ಆರಂಭ: ಶ್ರೀ ಸಾರಂಗಧರ ಜಗದ್ಗುರು

  • ಬಯಲು ಗ್ರಂಥಾಲಯದ ೨೩ನೇ ವಾರ್ಷಿಕೋತ್ಸವ

  • ರಾಜ್ಯದ ಪ್ರತಿ ಗಾರ್ಡನ್‌ನಲ್ಲಿ ಬಯಲು ಗ್ರಂಥಾಲಯ

ಕಲಬುರಗಿ: ಜನರಿಗೆ ಜ್ಞಾನದ ಅರಿವು ನೀಡಲು ರಾಜ್ಯದ ಪ್ರತಿಯೊಂದು ಉದ್ಯಾನದಲ್ಲಿ ಕಲಬುರಗಿಯ ಬಯಲು ಗ್ರಂಥಾಲಯ ಮಾದರಿಯಲ್ಲಿ ಗ್ರಂಥಾಲಯ ಆರಂಭಿಸುವಂತೆ ಈಗ ನಡೆದಿರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

Contact Your\'s Advertisement; 9902492681

ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಪತ್ರಕರ್ತರು ಸಾರ್ವಜನಿಕರ ಸಹಕಾರದೊಂದಿಗೆ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರು ನಡೆಸಿಕೊಂಡು ಬರುತ್ತಿರುವ ಬಯಲು ಗ್ರಂಥಾಲಯದ ೨೩ನೇ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಬುರಗಿಯಲ್ಲಿ ಪ್ರಾರಂಭವಾಗಿರುವ ಬಯಲು ಗ್ರಂಥಾಲಯ ವಿನೂತನ ಕಲ್ಪನೆಯದು. ಇತಿಹಾಸದಲ್ಲಿ ಹೆಸರು ಉಳಿಯುವಂತಾಗಿದೆ. ಇಂತಹ ಮಾದರಿ ಬಯಲು ಗ್ರಂಥಾಲಯದ ಬಗ್ಗೆ ಬೆಳಗಾವಿ ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ, ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು.

ವಿದ್ಯಾರ್ಥಿಗಳು ಪಠ್ಯದ ಜತೆಗೆ ದಿನ ಪತ್ರಿಕೆಗಳನ್ನು ಓದುವುದರಿಂದ ಎಲ್ಲ ತೆರನಾದ ಜ್ಞಾನ ಸಿಗುತ್ತದೆ. ಜನರು ಹೆಚ್ಚಾಗಿ ಪತ್ರಿಕೆಗಳನ್ನು ಓದಬೇಕು. ಇದೇ ಉದ್ದೇಶದಿಂದ, ಓದುವ ಹವ್ಯಾಸ ಹೆಚ್ಚಿಸಬೇಕೆಂದು ಯಾವುದೇ ಫಲಾಪೇಕ್ಷೆ ಇಲ್ಲದೆ ಕಳೆದ ೨೩ ವರ್ಷಗಳಿಂದ ನಿರಂತರವಾಗಿ ಪತ್ರಕರ್ತರೂ ಆಗಿರುವ ಬಣಗಾರ ಅವರು ನಡೆಸಿಕೊಂಡು ನಡೆಸಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಗ್ರಂಥಾಲಯದ ಅಭಿವೃದ್ಧಿಗೆ ಸದಾ ಅವರ ಸಹಕರಿಸುವುದಾಗಿ ಭರವಸೆ ನೀಡಿದರು.

ಸುಲಫಲ ಮಠದ ಮತ್ತು ಶ್ರೀಶೈಲ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜಿಗಳು ಸಾನಿಧ್ಯ ವಹಿಸಿ, ಆಂಧ್ರಪ್ರದೇಶದ ಶ್ರೀಕ್ಷೇತ್ರವಾಗಿರುವ ಶ್ರೀಶೈಲದ ಸಾರಂಗಮಠದಲ್ಲಿಯೂ ಆರಂಭಿಸಿ, ಅಲ್ಲಿನ ಕನ್ನಡಿಗರಿಗೆ ಕನ್ನಡ ಪತ್ರಿಕೆಗಳನ್ನು ಓದಲು ಒದಗಿಸಲಾಗುತ್ತದೆ ಎಂದರು.

ಕರ್ನಾಟಕದಿಂದ ಶ್ರೀಶೈಲಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ತಮ್ಮ ಮಠದಲ್ಲಿ ತಂಗುತ್ತಾರೆ. ಹೀಗಾಗಿ ಅವರಿಗೆ ಕನ್ನಡ ದಿನಪತ್ರಿಕೆಗಳನ್ನು ಓದಲು ಬಯಲು ಗ್ರಂಥಾಲಯ ಆರಂಭಿಸುವು ಮೂಲಕ ಅನುಕೂಲ ಮಾಡಿಕೊಡಲಾಗುತ್ತದೆ. ಪ್ರತಿದಿನ ಬೆಳಗ್ಗೆ ಕಲಬುರಗಿಯಿಂದ ಶ್ರೀಶೈಲಕ್ಕೆ ಬರುವ ಬಸ್ಸಿಗೆ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಕಳುಹಿಸಿಕೊಡಲಾಗುವುದು. ಸಂಜೆ ಅಲ್ಲಿಗೆ ತಲುಪುತ್ತವೆ. ಅವನ್ನು ಭಕ್ತರಿಗೆ ಓದಲು ಸೂಕ್ತ ಸ್ಥಳ ಮಾಡಿ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲಿಯೇ ಗ್ರಂಥಾಲಯ ಉದ್ಘಾಟನೆ ಮಾಡಲಾಗುವುದು ಎಂದು ಪೂಜ್ಯರು ಭರವಸೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್ ಅಧ್ಯಕ್ಷತೆ ವಹಿಸಿ, ಓದುವ ಹವ್ಯಾಸ ಹೆಚ್ಚಿಸಲು ಬಯಲು ಗ್ರಂಥಾಲಯ ಪ್ರಾರಂಭಿಸಿದ ಬಣಗಾರ ಅವರಿಗೆ ಪತ್ರಕರ್ತರು ನೀಡಿದ ಸಹಕಾರವನ್ನು ನೆನಪಿಸಿಕೊಂಡು, ಅವರ ಉತ್ತಮ ಕಾರ್ಯಕ್ಕೆ ಯಾವತ್ತೂ ತಾವು ಸಹಕರಿಸುವುದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಗುವಿವಿ ಗ್ರಂಥಪಾಲಕರು ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಡಾ.ಸುರೇಶ ಜಂಗೆ, ಅಖಿಲ ಭಾರತೀಯ ಫಾರ್ಮಸಿ ಅಧಿಕಾರಿಗಳು ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ, ಸರ್ವಜ್ಞ ಶಿಕ್ಣಣ ಸಂಸ್ಥೆಗಳ ಸಮೂಹ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್, ಷಡಕ್ಷರಿಸ್ವಾಮಿ ಡಿಗ್ಗಾಂವಕರ್ ಟ್ರಸ್ಟ್ ಸಂಚಾಲಕರಾದ ಎಸ್.ಎಸ್. ಹಿರೇಮಠ ಜಾಲಿಹಾಳ, ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮೊದಲಾದವರು ಮಾತನಾಡಿದರು.

ಬಯಲು ಗ್ರಂಥಾಲಯದ ಸಂಸ್ಥಾಪಕರಾದ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಸ್ವಾಗತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಸಿಂಪಿ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ನಿರೂಪಿಸಿದರು. ಈರಣ್ಣ ಬಣಗಾರ ವಂದಿಸಿದರು.

ಪ್ರಮುಖರಾದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ, ವಿನೋದಕುಮಾರ ಜನೇವರಿ, ಶಿವಾನಂದ ಅಣಜಗಿ, ಶಿವಲಿಂಗಪ್ಪ ಅಷ್ಟಗಿ, ಶ್ರೀನಿವಾಸ ಬಲಪುರ, ಗುರುರಾಜ ಕುಲಕರ್ಣಿ, ಪ್ರಭಾಕರ ಸಿಂಪಿ, ಕುಮಾರ ಮೇತ್ರಿ, ರವಿಕುಮಾರ ಬಣಗಾರ, ಶೇಷಗಿರಿ ಹುಣಸಗಿ, ವಿನೋದ ದೇಸಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಗ್ರಂಥಾಲಯಗಳಿಗೆ ಆಧ್ಯತೆ ನೀಡಬೇಕು ಸಾಮಾನ್ಯ ಜ್ಞಾನ ಹೆಚ್ಚಿಸುವಂತಾಗಲು ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಗ್ರಂಥಾಲಯ ರುಚಿ ಹಚ್ಚಿಸಬೇಕು. ಇದಕ್ಕಾಗಿ ಶಾಲಾ ಗ್ರಂಥಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪತ್ರಿಕೆ ಮತ್ತು ಪುಸ್ತಕ ಓದುವ ಸಂಸ್ಕೃತಿ ಹೆಚ್ಚಬೇಕು. ತಂತ್ರಜ್ಞಾನ ಬಂದು ಸಾಕಷ್ಟು ಅನುವು ಆಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲೂ ಇದೇ ಮಾದರಿ ಅನುಸರಿಸಿ ಗ್ರೀನ್ ಲೈಬ್ರೆರಿ ಶುರು ಮಾಡಲಾಗಿದೆ. –ಡಾ.ಸುರೇಶ ಜಂಗೆ, ಗುವಿವಿ ಗ್ರಂಥಪಾಲಕರು ಹಾಗೂ ಸಂಯೋಜನಾಧಿಕಾರಿಗಳು ಪತ್ರಿಕೋದ್ಯಮ ವಿಭಾಗ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here