ವಕೀಲ ಈರಣ್ಣಗೌಡಗೆ 15ಕ್ಕೂ ಹೆಚ್ಚು ಬಾರಿ ಕೊಚ್ಚಿ ಕೊಲೆ: ವಿಡಿಯೋ ವೈರಲ್ | ಐವರ ಬಂಧನ

0
44

ಕಲಬುರಗಿ; ವಕೀಲ್ ಈರಣ್ಣಗೌಡ ಪೊಲೀಸ್ ಪಾಟೀಲನನ್ನು ಇಪತ್ತಕ್ಕೂ ಹೆಚ್ಚು ಬಾರಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಯ ವಿಡಿಯೋ ಭಾರಿ ವೈರಲ್ ಆಗುತ್ತಿದಂತೆ ವಿಶ್ವ ವಿದ್ಯಾಲಯ ಪೊಲೀಸರು 24 ಗಂಟೆಯೊಳಗೆ ಮತ್ತಿಬ್ಬರು ಪ್ರಮುಖ ಆರೋಪಿಗನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಸಂಖ್ಯೆ ಇದುವರೆಗೆ ಐವರನ್ನು ಬಂಧಿಸಿದ್ದಾರೆ.

ಕೊಲೆಯ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿರುವ ನೀಲಕಂಠಗೌಡ ಪೊಲೀಸ್ ಪಾಟೀಲ ಮತ್ತು ಅವರ ಪತ್ನಿ ಸಿದ್ದಮ್ಮ ಅವರನ್ನು ವಿವಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Contact Your\'s Advertisement; 9902492681

ಡಿ.10-ನಗರದ ಜೇವರ್ಗಿ ರಸ್ತೆಯ ಸಾಯಿ ಮಂದಿರ ಹತ್ತಿರದ ಅಪಾರ್ಟ್ಮೆಂಟ್ ಯೊಂದರಲ್ಲಿ ಕೊಲೆಗಾರರು ಕೈಯಲ್ಲಿ ಮಚ್ಚು ಹಿಡಿದುಕೊಂಡು ಈರಣ್ಣಗೌಡ ಅವರನ್ನು ಬೆನ್ನಟ್ಟಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಮತ್ತು ಅವರು ನೆಲಕ್ಕುರಿಳಿದಾಗ ಸುಮಾರು ಬಾರಿ ಕೊಚ್ಚಿ 15ಕ್ಕೂ ಹೆಚ್ಚು ಬಾರಿ ಕೊಲೆ ಮಾಡಿದ ದೃಶ್ಯಾವಳಿಗಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈರಣ್ಣಗೌಡ ಅವರನ್ನು ಮನಬಂದಂತೆ ಕೊಚ್ಚಿ ಕೊಲೆ ಮಾಡುವುದರ ಮೂಲಕ ಕೊಲೆಗಾರರು ಕ್ರೌರ್ಯ ಮೆರೆದಿದ್ದಾರೆ. ಹಾಡು ಹಗಲೇ ನಡೆದ ವಕೀಲನ ಈ ಕೊಲೆ ಪ್ರಕರಣಕ್ಕೆ ರಾಜ್ಯದ ವಕೀಲ್ ವೃತಿಯಲ್ಲಿರುವ ಹಲವರಿಗೆ ಮತ್ತು ಸಾರ್ವಜನಿಕರಿಗೆ ಬೆಚ್ಚಿ ಬೀಳಿಸಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಕ್ರವಾರ ಉದನೂರ್ ನವರಾಗಿದ್ದ ಮಲ್ಲಿನಾಥ್ ಬಸಣ್ಣ (45), ಭಾಗಣ್ಣ ಭಗವಾನ್ ಅವಣಪ್ಪ (20) ಹಾಗೂ ಅವಣಪ್ಪ ಭಾಗವಂತರಾವ್ (48) ಎಂಬ ಮೂವರು ಆರೋಪಿಗಳನ್ನು ಬಂಧಿಸಿತು. ಶನಿವಾರ ಮತ್ತೆ ನೀಲಕಂಠಗೌಡ ಪೊಲೀಸ್ ಪಾಟೀಲ ಮತ್ತು ಅವರ ಪತ್ನಿ ಸಿದ್ದಮ್ಮ ಅವರಿಗೆ ಬಂಧಿಸಿದ್ದಾರೆ.

ರಾಜದ್ಯಂತ ನ್ಯಾಯವಾದಿಗಳು ವಕೀಲ್ ಈರಣ್ಣಗೌಡ ಪೊಲೀಸ್ ಪಾಟೀಲ್ ಕೊಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆಸಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here