ರಾಜ್ಯ ಸರಕಾರದಿಂದ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಮಸೂದೆ ಮಂಡನೆ

0
114

ಬೆಳಗಾವಿ ಸುವರ್ಣ ಸೌಧ: ವಕೀಲರ ಮೇಲೆ ಹಲ್ಲೆ ಅಥವಾ ಹಿಂಸಾಚಾರ ನಡೆಸುವವರಿಗೆ ಆರು ತಿಂಗಳಿನಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆಯನ್ನು ಸೋಮವಾರ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಮಸೂದೆಯನ್ನು ಮಂಡಿಸಿದರು..

ವಕೀಲರು ತಮ್ಮ ಕರ್ತವ್ಯ ನಿರ್ವಹಣೆ ವಿಷಯದಲ್ಲಿ ಬೆದರಿಕೆಗಳು ಬಂದಾಗ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದಾಗ, ಅವರ ಮೇಲೆ ಹಲ್ಲೆ ನಡೆಯುವಂತಹ ಸಂದರ್ಭಗಳಲ್ಲಿ ರಕ್ಷಿಸುವುದಕ್ಕಾಗಿ ಈ ಮಸೂದೆಯನ್ನು ರೂಪಿಸಲಾಗಿದೆ ಎಂದು ಮಸೂದೆ ಅಂಶಗಳ ಮೇಲೆ ಬೆಳಕು ಚಲ್ಲಿದ್ದರು.

Contact Your\'s Advertisement; 9902492681

ಈ ಮಸೂದೆಯ ಅಡಿಯಲ್ಲಿ ದಾಖಲಿಸುವ ಪ್ರಕರಣಗಳ ವಿಚಾರಣೆಯನ್ನು ಪ್ರಥಮ ದರ್ಜೆ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ನ್ಯಾಯಾಲಯಗಳಲ್ಲೇ ನಡೆಸಬೇಕು.

ಯಾವುದೇ ಪ್ರಕರಣಗಳಲ್ಲಿ ವಕೀಲರನ್ನು ಬಂಧಿಸಿದಾಗ 24 ಗಂಟೆಗಳ ಒಳಗಾಗಿ ಆ ವಕೀಲನು ಸದಸ್ಯನಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಷಯವನ್ನು ಪೊಲೀಸರು ತಿಳಿಸುವುದನ್ನು ಈ ಮಸೂದೆಯು ಕಡ್ಡಾಯಗೊಳಿಸು ಅಂಶಗಳು ವಿಧೇಯಕದಲ್ಲಿ ಇದೆ.

ಕಲಬುರಗಿಯಲ್ಲಿ ವಕೀಲರ ಓರ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಹೈಕೋರ್ಟ್ ನ್ಯಾಯವಾದಿಗಳಿಂದ ನಿರಂತರ ಹೋರಾಟ ಮತ್ತು ನ್ಯಾಯವಾದಿಗಳ ಹಿತ ರಕ್ಷಣೆ ಕಾಯ್ದೆ ಜಾರಿಗೆ ರಾಜ್ಯಾದ್ಯಂತ ವಕೀಲರು ಆಗ್ರಹಿಸಿದರು. ಕಲಬುರಗಿಯಲ್ಲಿ ಅನಿರ್ದಿಷ್ಟ ಅವಧಿ ಧರಣಿ ಸಹ ನಡರದಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here