ಕಲಬುರಗಿ ಜಿಮ್ಸ್‌ ಆಸ್ಪತ್ರೆಯಲ್ಲಿ 552 ಹುದ್ದೆ ಖಾಲಿ: ಸಚಿವ ದಿನೇಶ ಗುಂಡೂರಾವ

0
60
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲರ ಪ್ರಶ್ನೆಗೆ ಆರೋಗ್ಯ ಸಚಿವರ ಲಿಖಿತ ಉತ್ತರ
ಹೊಸತಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಆರಂಭಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ

ಕಲಬುರಗಿ: ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು 2016 ರಲ್ಲೇ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆ ಜಿಮ್ಸ್‌ಗೆ ಹಸ್ತಾಂತರಗೊಂಡಿದೆ. ಇಲ್ಲಿರುವ 868 ಅಧಿಕಾರಿ, ಸಿಬ್ಬಂದಿ ಮಂಜೂರಾದ ಹುದ್ದೆಗಳ ಪೈಕಿ 362 ಮಾತ್ರ ಕಾರ್ಯನಿರ್ವಹಿಸುತ್ತಿವೆ. 552 ವಿವಿಧ ದರ್ಜೆಯ ಹುದ್ದೆಗಳು ಖಾಲಿ ಇವೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಲಿಗಾಲದ ಅಧಿವೇಶನದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಹೊಸತಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಮಂಜೂರು ಮಾಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ಜಿಮ್ಸ್‌ಗೆ ಮಂಜೂರಾದ ವೃಂದ ಎ- 987, ಬಿ- 12, ಸಿ- 362 ಹಾಗೂ ಡಿ- 395 ರ ಪೈಕಿ, ಎ- 64, ಬಿ- 7, ಸಿ- 126 ಹಾಗೂ ಡಿ- 99 ಹುದ್ದೆಗಳಲ್ಲಿ ಒಟ್ಟು 316 ಸಿಬ್ಬಂದಿ ಕೆಲಸದಲ್ಲಿದ್ದಾರೆ. ಇನ್ನುಳಿದಂತೆ 552 ಹುದ್ದೆಗಳಲು ಖಾಲಿ ಇವೆ ಎಂದು ಸಚಿವರು ಹೇಳಿದ್ದಾರೆ.

ಜಿಮ್ಸ್‌ನಲ್ಲಿ ಖಾಲಿ ಇರುವ ಹುದ್ದಗಳ ಪೈಕಿ ವೃಂದ ಎ- 14, ಬಿ- 5, ಸಿ- 237, ಡಿ, 296 ಸೇರಿದಂತೆ 552 ಹುದ್ದೆಗಳು ಖಾಲಿ ಇವೆ.

1, 250 ಹಾಸಿಗೆಗಳ ಸಾಮರ್ತ್ಯದ ಜಿಲ್ಲಾಸ್ಪತ್ರೆಯಾಗಿ ಜಿ್ಸ್‌ ಕೆಲಸ ಮಾಡತ್ತಲಿದೆ. ತಕ್ಷಣ ಖಾಲಿ ಹುದ್ದೆ ಭರಿಸುವ ಮೂಲಕ ಸದರಿ ಆಸ್ಪತ್ರೆ ರೋಗಿಗಳಿಗೆ ಇನ್ನೂ ಹೆಚ್ಚಿನ ಅನುಕೂಲವಾಗುವಂತೆ ಮಾಬೇಕೆಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಸದನದಲ್ಲಿ ಪ್ರಶ್ನೆ ಎತ್ತುವ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here