ಹಟಗಾರ ಸಮಾಜದ ಸಭೆ; ದಶಕಗಳ ಕಾಲ ನಿಸ್ವಾರ್ಥ ಸೇವೆ ಗೈದವರನ್ನು ಪರಿಗಣಿಸಿ

0
65

ಕಲಬುರಗಿ: ರವಿವಾರ ಕರ್ನಾಟಕ ರಾಜ್ಯ ಹಟಗಾರ ಸಮಾಜದ ರಾಜ್ಯ ಘಟಕದ ಸಭೆ ರದ್ದುಗೊಂಡ ಪ್ರಯುಕ್ತ ಜಿಲ್ಲಾ ಮಟ್ಟದ ಸಭೆಯಾಗಿ ಪರಿವರ್ತಿಸಿ, ಪರಮೇಶ್ವರ ಮುನ್ನೋಳ್ಳಿ ಯವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ಕರ್ನಾಟಕ ರಾಜ್ಯ ಹಟಗಾರ ಸಮಾಜದ ರಾಜ್ಯ ಘಟಕದ ಸಾಮಾನ್ಯ ವಾರ್ಷಿಕ ಸಭೆಯನ್ನು ತುರಾತುರಿಯಲ್ಲಿ ರದ್ದು ಗೊಳಿಸಿದಕ್ಕೆ, ಕನ್ನಡ ಭವನದ ಮನದಾಳದ ಮಾತು ಕೋಣೆಯಲ್ಲಿ ಜಿಲ್ಲಾ ಮಟ್ಟದ ಹಟಗಾರ ಸಮಾಜ ಸಭೆಯಲ್ಲಿ ಖಂಡಿಸಲಾಯಿತು. ಸ್ವಾರ್ಥ ರಹಿತ ಹಾಗೂ ರಾಜಕೀಯ ರಹಿತ ಸಮಾಜ ಸೇವಕರನ್ನು ಜವಾಬ್ದಾರಿ ಸ್ಥಾನಗಳನ್ನು ನೀಡಿ ಸಂಘಟನೆ ಮಾಡಲು ಒತ್ತಾಯಿಸಿದರು.

Contact Your\'s Advertisement; 9902492681

ಬನಹಟ್ಟಿಯ ನಿವಾಸಿಗಳು ಹಾಗೂ ಪ್ರಸ್ತುತ ಭೂಸನೂರ ಶುಗರ ಕಾರ್ಖಾನೆ ಯಲ್ಲಿ ಲೆಕ್ಕ ಪತ್ರ ವಿಭಾಗದಲ್ಲಿ ಉಪ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಮಠದ ರವನ್ನು ಮುಖ್ಯ ಅತಿಥಿ ಸ್ಥಾನದಲ್ಲಿ ಭಾಗವಹಿಸಲು ಕೊರಲಾಯಿತು. ಜಿಲ್ಲಾ ಘಟಕದ ಸಭೆಯ ಸಂಚಾಲಕರಾದ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ರವರು ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಮಾಜ ಸಂಘಟನೆ ಮಾಡುವ ಎಲ್ಲಾ ಮನಸ್ಸುಗಳಿಗೆ ಮತ್ತು ಅಸಕ್ತಿ ಉಳ್ಳ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡಲು ಸಮಾಜ ಭಾಂಧವರಲ್ಲಿ ವಿನಂತಿಸಿದರು. ಸಭೆಯ ನಿರ್ಣಯ ಮಂಡನೆಗೆ ಅವಕಾಶ ನೀಡಲಾಗಿತ್ತು, ಜಿಲ್ಲಾ ಹಟಗಾರ ಸಮಾಜದ (ಯುವ ಘಟಕದ) ಜಿಲ್ಲಾ ಅಧ್ಯಕ್ಷರನ್ನಾಗಿ ರವಿ ಯಳಸಂಗಿ ಯವರನ್ನು ಆಯ್ಕೆ ಮಾಡಲಾಯಿತು.

ಅದೇ ರೀತಿ ವಿವಿಧ ತಾಲೂಕಾ ಘಟಕಗಳಿಗೆ ಕ್ರಿಯಾಶೀಲ ಯುವಕರನ್ನು ನೇಮಿಸುವ ನಿಟ್ಟಿನಲ್ಲಿ ಕಾರ್ಯ ವಾಗಲಿ ಎಂದು ನಿರ್ಣಯ ಸಲಾಯಿತು, ನಂತರ ಸೇಡಂ ತಾಲ್ಲೂಕಿನಲ್ಲಿ ಹಟಗಾರ ಸಮಾಜ ಸಂಘಟನೆ ಮಾಡಲು ಡಾ. ಬಸವರಾಜ ಚನ್ನಾ ರವರಿಗೆ ಸೇಡಂ ತಾಲೂಕಾ ಘಟಕಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಲಾಯಿತು.

ಆಳಂದ ತಾಲೂಕಿನ ಘಟಕಕ್ಕೆ ಅಧ್ಯಕ್ಷರನ್ನಾಗಿ ಶಾಂತಕುಮಾರ ಯಳಸಂಗಿ ಯವರನ್ನು ಒಕ್ಕೂರಿಲಿಂದ ಆಯ್ಕೆ ಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಗಿರೀಶ್ ಮಠದ ಮಾತನಾಡಿ, ಸಮಾಜದ ಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾಗವಹಿಸಲು ಆಗಮಿಸಿದ ನನಗೆ ಮುಖ್ಯ ಅತಿಥಿ ಸ್ಥಾನದಲ್ಲಿ ಕೂಡಿಸಿ ನನ್ನನ್ನು ಸಮಾಜದ ಕಾರ್ಯಕ್ರಮದಲ್ಲಿ ಇನ್ನೂ ಸಕ್ರಿಯವಾಗಿ ಪಾಲಗೊಳ್ಳಲ್ಲೂ ಪೆರೇಪಿಸಿದ್ದಕ್ಕೆ ಕೃತಜ್ಞೆತೆ ತಿಳಿಸಿ ಮುಂದೆಯೂ ತೆಗೆದುಕೊಂಡ ಎಲ್ಲಾ ನಿರ್ಣಯ ಗಳ್ಳನ್ನು ತಪ್ಪದೆ ಪಾಲಿಸಲು ಸಹಕರ ಬಯಸುತೇನೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ  ಶಿವಲಿಂಗಪ್ಪಾ ಅಷ್ಟಗಿ ಯವರ ಅನಿಸಿಕೆ ಮತ್ತು ಸಲಹೆಯಂತೆ ಸ್ವಚ್ಛ ಮನಸ್ಸಿನಿಂದ ಸೇವೆ ಗೈದ ಒಬ್ಬ ವ್ಯಕ್ತಿ ಯನ್ನು ಪ್ರತಿ ವರ್ಷ ಹಟಗಾರ ಪ್ರಶಸ್ತಿ ಪ್ರದಾನ ಮಾಡಲು ಸೂಚಿಸಿದರು. ಜಿಲ್ಲಾ ಘಟಕದ ಅಧ್ಯಕ್ಷರ, ಅನುಉಪಸ್ಥಿತಿಯಲ್ಲಿ ನನಗೆ ಒದಗಿ ಬಂದ ಸ್ಥಾನದಲ್ಲಿ, ಅಧ್ಯಕ್ಷತೆ ವಹಿಸಿದ್ದ ಸಮಾಜದ ಹಿರಿಯರಾದ ಪರಮೇಶ್ವರ್ ಮುನ್ನೋಳ್ಳಿ ಸಭೆಯನ್ನುದ್ದೇಶಿಸಿ ಮಾತನಾಡಿ, ಯುವಕರ ಕೈಯಲ್ಲಿ ಸಮಾಜದ ಚುಕ್ಕಾಣಿ ನೀಡಿ ಹಿರಿಯರು ಆಶೀರ್ವಾದ ಮಾಡಬೇಕು ಮತ್ತು ತಪ್ಪು ದಾರಿಯಲ್ಲಿ ಸಾಗುತ್ತಿದ್ದರೆ ತಿದ್ದಿ ಸರಿಪಡಿಸಿ, ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಘಟಕದ ಸಭೆಯಲ್ಲಿ ಹಟಗಾರ ಸಮಾಜದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನಾಗನಾಥ ಯಳಸಂಗಿ, ಸಾಮಾನ್ಯ ಸದಸ್ಯರಾದ ವೀರೇಶ ಅಕ್ಕಾ, ಮಹಾದೇವಪ್ಪ ಜೇವೂರ್, ಅನಿಲ ಕುಮಾರ ಅಷ್ಟಗಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here