ಯುವಕರಿಗೆ ಶಿಕ್ಷಣದ ಕಡೆಗೆ ಪ್ರೋತ್ಸಾಹಿಸುವ ದಿನವೇ ಯುವ ದಿನ

0
20

ಕಲಬುರಗಿ: ಭಾರತದಲ್ಲಿನ ಜನರ ಹಕ್ಕುಗಳ ಬಗ್ಗೆ ಜ್ಞಾನವನ್ನು ನೀಡುವ  ಸರಿಯಾಗಿ ನಡೆದುಕೊಳ್ಳಲು ಜನರಿಗೆ ಶಿಕ್ಷಣ ನೀಡುವ ದಿನವೇರಾಷ್ಟ್ರೀಯ ಯುವ ದಿನವಾಗಿದೆ ಎಂದು ಬೀದರ ನಗರದ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಿವಶರಣಪ್ಪ ಹುಗ್ಗೆಪಾಟೀಲ್ ಹೇಳಿದರು.

ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯವು ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಯುವಕರನ್ನು ಪ್ರೇರೇಪಿಸುವ ಮತ್ತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಹರಡುವ ಮೂಲಕ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯುವ ದಿನದ ಮಹತ್ವವನ್ನು ಹೇಳಿಕೊಟ್ಟರು. ವೇದಿಕೆಯಲ್ಲಿ ಉಪ ಪ್ರಾಚಾರ್ಯರಾದ ಡಾ. ವೀಣಾ ಎಚ., ಶ್ರೀಮತಿ ಉಮಾ ರೇವೂರ್, ಡಾ. ಮಹೇಶ್ ಗಂವ್ಹಾರ, ಡಾ. ರೇಣುಕಾ ಎಚ., ಶ್ರೀಮತಿ ಸುಷ್ಮಾ ಕುಲಕರ್ಣಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕು. ಸುಷ್ಮಾ ಬೇನುರ, ಪ್ರಾರ್ಥನಾ ಗೀತೆಯನ್ನು ಕು. ಸುಮತಿ ಎಸ್., ವಂದನಾರ್ಪಣೆಯನ್ನು ಕು. ರುಚಿಕಾ ಹಂಪ್ಲಿ ಮಾಡಿದರು. ಡಾ. ಮಹೇಶ್ ಗಂವ್ಹಾರ ರವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here