14 ರಂದು ಆಶ್ರಯ ಕಾಲೋನಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಔಷಧಿ ವಿತರಣೆ

0
22

ಕಲಬುರಗಿ: ಇಲ್ಲಿನ ಹಾಗರಗಾ ಪ್ರದೇಶದ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯಲ್ಲಿ ಸರಕಾರಿ ಶಾಲೆಯ ಹತ್ತಿರದ ಪ್ರದೇಶದಲ್ಲಿ ಯುನಿಕಾರ್ನ್ ಆಸ್ಪತ್ರೆ ಸಹಕಾರದೊಂದಿಗೆ ರವಿವಾರ 14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಯ ಕಾಲೋನಿಯ ಯುವ ಮುಖಂಡ ಮೊಹಮ್ಮದ್ ಅಮೇರ್ ಬಾಗಬಾನ್ ಎನ್.ಎಸ್.ಬಿ ತಿಳಿಸಿದ್ದಾರೆ.

ಶಿಬಿರಕ್ಕೆ ಯುನಿಕಾರ್ನ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಹಿರಿಯ ವೈದ್ಯಧಿಕಾರಿಗಳಾದ ಡಾ. ಅಬ್ದುಲ್ ಖಾದರ್ ಜಿಲಾನಿ ಅವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಆರೋಗಿಗಳಿಗೆ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಸ್ತ್ರೀ ರೋಗ, ಇ.ಎನ್‌.ಟಿ, ಹೃದ್ರೋಗ, ಫಿಸಿಯೋಥೆರಪಿ, ನೇತ್ರ ತಪಾಸಣೆ, ನರಶಸ್ತ್ರ ಚಿಕಿತ್ಸೆ, ಜನರಲ್ ಚಿಕಿತ್ಸೆ ಸೇರಿದಂತೆ ಇತರೆ ಆರೋಗ್ಯ ಸಂಬಂಧಿಸಿದ ತಪಾಸಣೆ ನಡೆಸಿ ಶಿಬಿರದಲ್ಲಿ ಅಗತ್ಯ ಔಷಧಿಗಳು ಸಹ ಉಚಿತ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಇದರ ಲಾಭ ಪಡೆಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here