ಶ್ರೀ ಚೌಡೇಶ್ವರ ಶಾಲೆಯಲ್ಲಿ ಜಯಂತಿ ಆಚರಣೆ

0
7

ಕಲಬುರಗಿ: ನಗರದ ಶ್ರೀ ಚೌಡೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಚೌಡೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ‘ಬಹು ವಿಜೃಂಭಣೆಯಿಂದ ಮಕ್ಕಳು ಸ್ವಯಂ ಪ್ರೇರಿತರಾಗಿ ಅಂಬಿಗರ ಚೌಡಯ್ಯನವರ ವಚನಗಳನ್ನು ಹೇಳುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ಸಂಘದ ಅಧ್ಯಕ್ಷರಾದ ಡಾ. ಇಂದಿರಾ ಶಕ್ತಿ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಶಹಬಾದ ಕೋಳಿ ಸಮಾಜ ಅಧ್ಯಕ್ಷ ಅಶೋಕ ಕಟ್ಟಿ, ಅಖಿಲ ಭಾರತ ಕೋಲಿ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಟಿ, ಸೆರಿದಂತೆ ಶಾಲೆಯ ಉಪಾಧ್ಯಯರು, ಸಹ ಶಿಕ್ಷಕರು ಸೇರಿದಂತೆ ಇನ್ನಿತರರಿದ್ದರು.

ಇದೇ ವೇಳೆ ಮಕ್ಕಳಾದ ಗೌರಮ್ಮ, ಭವಾನಿ, ಶ್ವೇತಾ, ಲಕ್ಷ್ಮೀ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here