ಚಿತ್ತಾಪುರ: ಮೊಬೈಲ್ ಅಂಗಡಿಯಲ್ಲಿ ಹಣ ಕಳುವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

0
45
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: ಪಟ್ಟಣದ ಗರ್ಲ್ ಹೈಸ್ಕೂಲ್ ಎದರುಗಡೆಯ ಮೊಬೈಲ್ ಅಂಗಡಿಯಲ್ಲಿ ಇಂದು ನಸುಕಿನ ಜಾವ 4 ಗಂಟೆ 30 ನಿಮಿಷಕ್ಕೆ 2 ಲಕ್ಷ 50 ಸಾವಿರ ರೂ. ಹಣ ಕಳವು ಮಾಡಿರುವ ಘಟನೆ ಜರುಗಿದೆ.

ಯೋಗೇಶ ಎನ್ನುವವರ ಮೊಬೈಲ್ ಅಂಗಡಿಯೊಳಗೆ ಓರ್ವ ವ್ಯಕ್ತಿ ಶೇಟರ್ ಮುರಿದು ಅಂಗಡಿಯೊಳಗೆ ನುಗ್ಗಿ ಹಣ ದೋಚಿದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Contact Your\'s Advertisement; 9902492681

ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್’ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಹುಸೇನ್ ಪಾಶಾ, ಅಯ್ಯಣ್ಣ, ಸವಿಕುಮಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೆಳೆ ಶ್ವಾನದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here