ಪುಸ್ತಕ ಓದುವ ಮತ್ತು ಬರೆಯುವುದನ್ನು ರೂಢಿಸಿಕೊಳ್ಳಿ: ಖ್ಯಾತ ಚಿತ್ರನಟ ಮುಖ್ಯಮಂತ್ರಿ ಚಂದ್ರು

0
255

ಕಲಬುರಗಿ: ತಾಂತ್ರಿಕವಾಗಿ ಬೆಳೆದ ನಾವು ಮೊಬೈಲ್ ಜೀವನದಲ್ಲಿ ಓದುವ ಸಂಸ್ಕøತಿ ಕಡಿಮೆಯಾಗುತ್ತಿದೆ. ಹೀಗಾಗಿ ಪುಸ್ತಕ ಓದುವ ಮತ್ತು ಬರೆಯುವುದನ್ನು ರೂಢಿಸಿಕೊಳ್ಳಬೇಕು. ಇಂಥ ವ್ಯವಸ್ಥೆಯಲ್ಲಿ ನಾವು ವೃತ್ತಿ ಮತ್ತು ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆ ಮೂಲಕ ನಾವು ನಮ್ಮ ಬದುಕು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಖ್ಯಾತ ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹುತಾತ್ಮ ಅಪ್ಪಾರಾವ ಪಾಟೀಲ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೈದರಾಬಾದ ವಿಮೋಚನಾ ಹುತಾತ್ಮರು ಎಂಬ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜಾತಿ, ಧರ್ಮ ಹಾಗೂ ವೈಯಕ್ತಿಕ ನೆಲೆಗಟ್ಟಿನ ರಾಜಕಾರಣದಿಂದ ದೂರವಿರಬೇಕು. ಇಂದಿನ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಉತ್ತಮ ನಾಯಕನನ್ನು ಚುನಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದರು. ಜಿಲ್ಲೆಯಲ್ಲಿ ಪರಿಷತ್ತು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಸೇವಾ ಕಾರ್ಯಗಳಿಗೂ ಪ್ರೇರಣೆಯಾಗಿವೆ ಎಂದು ಮನದುಂಬಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಿಮೋಚನೆಗಾಗಿ ಪ್ರಾಣ ತ್ಯಾಗ ಮಾಡಿದ ಅನೇಕರ ದೇಶ ಸೇವೆ ಸದಾ ಸ್ಮರಣಿಯವಾದುದು. ಇತಿಹಾಸ, ಸಂಸ್ಕøತಿ ಪರಂಪರೆ, ಕಲೆ, ಸಾಹಿತ್ಯ, ಸಾಂಸ್ಕøತಿಕ ಕಾರ್ಯಗಳಿಗೆ ಪರಿಷತ್ತು ತೊಡಗಿಸಿಕೊಂಡಿದೆ. ಮುಂದಿನ ಯುವ ಪೀಳಿಗೆಗೆ ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಲು ನಿರಂತರ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ ಎಂದರು.

ವಿಜ್ಞಾನಿ ಡಾ. ಬಿ.ಎ.ಪಾಟೀಲ ಮಹಾಗಾಂವ ಮಾತನಾಡಿ, ಜಾತಿ, ಧರ್ಮ ಬಿಟ್ಟು ಬದುಕು ನಡೆಸಬೇಕು. ನಮಗಿಂದು ಬುಲೆಟ್ ಬೇಡ, ಬ್ಯಾಲೆಟ್ ಬೇಕು ಎಂದು ಹೇಳಿದ ಅವರು, ಬೀದರಿನಲ್ಲಿ 350 ಮತ್ತು ಕಲಬುರಗಿಯಲ್ಲಿ 280 ಜನ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಇಂಥ ತ್ಯಾಗ ಬಲಿದಾನದ ನಾಡು ನಮ್ಮದು. ಇಂಥವರ ಆದರ್ಶ ಅಳವಡಿಸಿಕೊಳ್ಳಬೇಕು. ಹಾಗೂ ನಮ್ಮ ದೇಶದ ಸಂಸ್ಕøತಿ ಎತ್ತಿ ಹಿಡಿಯಬೇಕಾಗಿದೆ. ಜಾತಿ ಮತ ಬಿಟ್ಟು ದೇಶ ಕಟ್ಟಲು ಮುಂದಾಗಬೇಕಾಗಿದೆ ಎಂದರು.

ಸಹಕಾರಿ ಧುರೀಣ ನಸಿರುದ್ದೀನ್ ಪಟೇಲ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮಾತನಾಡಿದರು. ಪದಾಧಿಕಾರಿಗಳು, ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ. ಶಿವಶರಣಪ್ಪ ಮೋತಕಪಳ್ಳಿ, ನಾಗಮ್ಮಾ ಪರಶುರಾಮ ಬೆಳಕೇರಿ, ಬಸವಲಿಂಗಪ್ಪ ದಂಡೋತಿ, ಶಿವಕುಮಾರ ಎಂ. ಕಲ್ಲಕ್, ಕೇದಾರನಾಥ ಕುಲಕರ್ಣಿ ಅವರನ್ನು ಕರ್ಮಯೋಗಿ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.

ಈ ಭಾಗದ ಹೋರಾಟಗಾರರ ಯಶೋಗಾಥೆಯನ್ನು ಸಾಕ್ಷ್ಯಚಿತ್ರದ ಮೂಲಕ ಪ್ರೇಕ್ಷರಿಗೆ ಪ್ರದರ್ಶನ ಮಾಡಲಾಯಿತು.

ಕನ್ನಡ ಭವನದ ಆವರಣದಲ್ಲಿ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಚಾಲನೆ ನೀಡಿದರು ಸಿವಿಲ್ ನ್ಯಾಯಾಧೀಶ ಶ್ರೀನಿವಾಶ ನವಲೆ, ಪ್ರಮುಖರಾದ ಮಹಾದೇವಯ್ಯಾ ಕರದಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಮುಖರಾದ ಡಾ. ನಾಗೇಂದ್ರ ಮಸೂತಿ, ಪ್ರೊ. ಎಸ್ ಎಲ್ ಪಾಟೀಲ, ಡಾ. ಬಾಬುರಾವ ಶೇರಿಕಾರಿ, ಧರ್ಮಣ್ಣ ಹೆಚ್ ಧನ್ನಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ರಾಜೇಂದ್ರ ಮಾಡಬೂಳ, ರವಿಂದ್ರಕುಮಾರ ಭಂಟನಲ್ಳಿ, ಜಗದೀಶ ಮರಪಳ್ಳಿ, ಬಾಬುರಾವ ಪಾಟೀಲ, ವಿಶ್ವನಾತ ತೊಟ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here