ಬೋನ್ಹಾಳ ಬಳಿ ಧ್ವಂಸಗೊಂಡ ಎರಡು ವಿಗ್ರಹಗಳು ಪತ್ತೆ; ಮಹಾತ್ಮ ಗೌತಮ್ ಬುದ್ಧರ ಮೂರ್ತಿಗಳು ಎನ್ನುವುದರಲ್ಲಿ ಸಂಶಯವಿಲ್ಲ-

0
12

ಸುರಪುರ:ತಾಲೂಕಿನ ಬೋನ್ಹಾಳ ಗ್ರಾಮದ ಬಳಿಯಲ್ಲಿ ಎರಡು ಕಲ್ಲಿನ ವಿಗ್ರಹಳು ಹಾಗೂ ಪಾದುಕೆ ಪತ್ತೆಯಾಗಿದ್ದು,ಯಾರೋ ಕಿಡಿಗೇಡಿಗಳು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ.ಸ್ಥಳಕ್ಕೆ ಮೂಲನಿವಾಸಿ ಅಂಬೇಡ್ಕರ್ ನೀಲಿ ಸೇನೆ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ ಭೇಟಿ ನೀಡಿ,ಮೂರ್ತಿಗಳು ಮಹಾತ್ಮ ಗೌತಮ್ ಬುದ್ಧರ ಮೂರ್ತಿಗಳಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು.

ಬೋನ್ಹಾಳ ಗ್ರಾಮ ಒಂದು ಕಾಲದಲ್ಲಿ ಕೆರೆಯಿಂದ ಹರಿಯುವ ದೊಡ್ಡ ಹಳ್ಳದ ದಡದಲ್ಲಿ ಗ್ರಾಮಸ್ತರು ವಾಸವಾಗಿದ್ದರು ಕೆರೆ ಹುಟ್ಟಿಕೊಂಡಾಗ ಹರಿಯುವ ಕೋಡಿ ನೀರಿನ ಭಯದಿಂದ ಜನರ ಸುರಕ್ಷಿತಕ್ಕಾಗಿ ಈಗ ವಾಸಿಸುತ್ತಿರುವ ಗ್ರಾಮದ ಸ್ಥಳವನ್ನು ಆಕಾಲದಲ್ಲಿ ಸ್ಥಳಾಂತರವಾಗಿದೆ ಮತ್ತು ಅದೇ ಸಮಯದಲ್ಲಿ ಇಲ್ಲಿ ಬುದ್ದನ ಆರಾಧನೆ ಆಗುತ್ತಿದ್ದಿರಬಹುದು ಹಾಗೂ ಬುದ್ದನ ಯಾವೂದೋ ತಾಣವಾಗಿಯೂ ಇರಬಹುದು ಅದು ಯಾವೂದೋ ಕುತಂತ್ರಕ್ಕೆ ತುತ್ತಾಗಿ ಯಾರಿಂದಲೋ ದಾಳಿಯಾಗಿ ಎರಡು ಮೂರ್ತಿಗಳನ್ನು ಅರ್ದ ಭಾಗದವರೆಗೆ ತುಂಡರಿಸಿದ್ದಾರೆ, ಅರ್ಧ ಭಾಗ ಇಲ್ಲಿಯೇ ಗದ್ದೆಯಲ್ಲಿ ಮಣ್ಣಿನಲ್ಲಿ ಹೂತುಹೋಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಬಹಳ ಹಿಂದೆಯೆ ಬುದ್ದನ ಮಂದಿರವಿರಬಹುದು ಇದು ಗ್ರಾಮಸ್ತರಿಗೆ ಹಾಗೂ ಬೌದ್ಧ ಅನುಯಾಯಿಗಳಿಗೆ ಚಕಿತಗೋಳಿಸಿದಂತೆ ಆಗಿದೆ. ಅದಕ್ಕಾಗಿ ಯಾದಗಿರಿ ಜಿಲ್ಲಾಡಳಿತ ಪುರಾತತ್ವ ಇಲಾಖೆಯಿಂದ ಹೆಚಿನ ಮಟ್ಟದ ಸಶಶೋಧನೆ ನಡೆದು ಪುನಃ ಗ್ರಾಮದಲ್ಲಿ ಬೌದ್ಧ ತಾಣವನ್ನಾಗಿ ಮಾಡಲೂ ಸರಕಾರ ನೆರವು ನೀಡಬೇಕು, ಈಗಾಗಲೇ ಸಿದ್ದಾರ್ಥ ನಗರದಲ್ಲಿ ಕಟ್ಟಿರುವ ಬುದ್ಧಭವನವನ್ನು ಉನ್ನತ್ತಿಕರಣಗೋಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಶೀಘ್ರವೇ ನೆನೆಗುದುಗೆ ಬಿದ್ದಿರುವ ಬುದ್ಧ ವಿಹಾರದ ನೂತನ ಸಮಿತಿಯೋಂದನ್ನು ಹುಟ್ಟುಹಾಕಲಾಗುವದು ಇದರಿಂದ ಡಾ.ಅಂಬೇಡ್ಕರ್ ಅನುಯಾಯಿಗಳು ಮೌಡ್ಯತೆಯಿಂದ, ಸಂಪ್ರದಾಯಗಳಿಂದ ಹೊಬರಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಗಣ್ಣ ಉರಸಗುಂಡಿ, ಶಿರುದ್ರಪ್ಪ ಪೂಜಾರಿ, ಬಸವರಾಜ ಎಂಟಮನಿ, ಮಾನಪ್ಪ ಬಳಬಟ್ಟಿ,ಬಲಭೀಮ ಕಟ್ಟಿಮನಿ, ಶರಣಪ್ಪ ಅಂಬರಖೇಡ, ಶರಣಪ್ಪ ಹುಲಿಮನಿ, ಶರಣು ಹುಲಿಮನಿ, ಉಮೇಶ ಹುಲಿಮನಿ, ಪರಶುರಾಮ್ ಗೋವಾ, ನಾಗರಾಜ್ ಬೇವಿನಗಿಡ, ಅವಿನಾಶ ಹೊಸಮನಿ, ಮುತ್ತು ಕಂಬಾರ, ಶಿವಪ್ಪ ಚಾಕ್ರೀ, ಮರೆಪ್ಪ ನಾಟೀಕಾರ, ರಾಮೂ ಹುಲಿಮನಿ ಇತರರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here