‘ನನ್ನ ನಗರ ನನ್ನ ಜವಾಬ್ದಾರಿ – ಸಕ್ರಿಯ ನಾಗರಿಕತ್ವದ ಕೈಪಿಡಿಯ’ ಬಿಡುಗಡೆ

0
18

ಕಲಬುರಗಿ: ಜನಾಗ್ರಹ ಸಿಟಿಜನ್‍ಶಿಪ್ ಅಂಡ್ ಡೆಮಾಕ್ರಸಿ ಸಿದ್ಧಪಡಿಸಿರುವ ‘ನನ್ನ ನಗರ ನನ್ನ ಜವಾಬ್ದಾರಿ’ – ಸಕ್ರಿಯ ನಾಗರಿಕತ್ವದ ಕೈಪಿಡಿಯ ಕರ್ನಾಟಕ ಆವೃತ್ತಿಯನ್ನು ಕಲಬುರಗಿ ವಾರ್ಡ್ ಸಮಿತಿ ಬಳಗದ ವತಿಯಿಂದ ಮಿಸ್ಬಾ ನಗರ ಚೌಕ್ ಮಿರ್ಚಿ ಗೊಡನ್, ಐಕಾನ್ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿ ಜನಪ್ರತಿನಿದಿಗಳು, ನಾಗರಿಕ ಮುಖಂಡರು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ನಾಗರಿಕರ ಸಾಮೂಹಿಕ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಹಜ್ರತ್ ಸೈಯದ್ ಅಲಿ ಅಕ್ಬರ್ ಹುಸೇನಿ ಅಲ್ಲಮಾರುಫ್ ಸಾಭಿರ್ ಹುಸೇನಿ ಸಾಯೆಬ್, ಕಿಬ್ಲಾ ಮುತ್ವಲ್ಲಿ ದರ್ಗಾ ಕುಂಜಾ ಮಾ ಸಾಯೆಬಾ ಖಾಜಾ ಖಮೃದ್ದಿನ್ ಮೀರಾ ಕಪ್ನುರಾ ಕಲಬುರ್ಗಿ ಇವರ ದಿವ್ಯ ಸಾನಿಧ್ಯ ವಸಿದ್ದರು.

Contact Your\'s Advertisement; 9902492681

ಶಾಸಕ ಅಲ್ಲಮ ಪ್ರಭು ಪಾಟೀಲ್ ಇವರು ಮಾತನಾಡಿ ‘ನನ್ನ ನಗರ ನನ್ನ ಜವಾಬ್ದಾರಿ; ಸಕ್ರಿಯ ನಾಗರಿಕತ್ವದ ಕೈಪಿಡಿಯ’ ಬಿಡುಗಡೆಗೊಳಸಿ ಸಕ್ರಿಯ ನಾಗರಿಕತ್ವದ ಕೈಪಿಡಿಯು ನಗರದ ನಿರಾಸಕ್ತ ನಾಗರೀಕ ಹೇಗೆ ಸಮುದಾಯ ನಾಯಕನಾಗಬಹುದು ಎಂಬುದನ್ನು ತಿಳಿಸುವ ಕೈಪಿಡಿಯಾಗಿದ್ದು. ಇದು ಜನಾಗ್ರಹ ಸಂಸ್ಥೆಯ 20 ವರ್ಷದ ಅನುಭವಗಳನ್ನು ಒಳಗೊಂಡು ಸುಂದರವಾಗಿ ಮೂಡಿಬಂದಿದೆ ಎಂದು ಹೇಳಿದರು ಮತ್ತು ವಾರ್ಡ್ ಸಮಿತಿ ಮಾಡುವದರಿಂದ ಸ್ಥಳೀಯ ಮಟ್ಟದಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗಿ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತವೆ ಮತ್ತು ವಾರ್ಡ್ ಸಮಿತಿಗೆ ನನ್ನ ಬೆಂಬಲವಿದೇ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯೆ ಶಾಂತಾ ಬಾಯಿ ಮಾತನಾಡಿ ವಾರ್ಡ್ ಸಮಿತಿಗಳ ರಚನೆಯಿಂದ ವಾರ್ಡ್ ಗಳ ಅಭಿವೃದ್ಧಿ ಹೊಂದುವುದರ ಜೊತೆಗೆ ನಮ್ಮದೇ ಆದಂತಹ ನಾಗರಿಕರ ಪಡೆ ರಚನೆಯಾಗಲಿದ್ದು ಇದು ವಾರ್ಡಿನ ಪ್ರತಿ ಬೀದಿಗಳನ್ನು ತಲುಪಿ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪಾರಿಜಾರಿಸಲಿದೆ ಮುಂದಿನ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಿತಿ ರಚನೆಯ ಕುರಿತು ಕೌನ್ಸಿಲ್ ಗಮನಕ್ಕೆ ತರುತ್ತೇನೆ. ಎಂದರು.

ಸಮಿತಿಯ ರಾಜ್ಯ ಮುಖ್ಯಸ್ಥ ಮಂಜುನಾಥ ಹಂಪಾಪುರ ಎಲ್, ಮಾತನಾಡುತ್ತಾ ನಾಗರಿಕರ ಭಾಗವಹಿಸುವಿಕೆ ಕಾರ್ಯಕ್ರಮ ಜನಾಗ್ರಹ ನನ್ನ ನಗರ ನನ್ನ ಜವಾಬ್ದಾರಿ ಸಕ್ರಿಯ ನಾಗರಿಕತ್ವದ ಕೈಪಿಡಿ ನಿರಾಸಕ್ತ ನಾಗರಿಕನನ್ನ ಸಕ್ರಿಯ ನಾಗರಿಕ ನೆಡೆಗೆ ಕೊಂಡೊಯ್ಯುವಂತಹ ಸಾಧನವಾಗಿದ್ದು ಇದನ್ನು ಕಲಬುರಗಿಯ ನಾಗರಿಕರು ಸದುಪಯೋಗ ಪಡಿಸಿಕೊಳ್ಳುವದರ ಮೂಲಕ ಇದನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಕೈಪಿಡಿಯು ಹವಾಮಾನ, ನಗರ ಸರ್ಕಾರಗಳ ಚುನಾಯಿತ ಪ್ರತಿನಿಧಿಗಳ ಕರ್ತವ್ಯ, ವಾರ್ಡ್ ಸಮಿತಿಗಳಂತ ವಿಷಯಗಳನ್ನು ಬೇರುಮಟ್ಟದಲ್ಲಿ ಗಟ್ಟಿಗೊಳಿಸುವ ವಿಧಾನ ಮತ್ತು ಸಕ್ರಿಯ ಭಾಗವಹಿಸುವಿಕೆಯ ಅರಿವನ್ನು ಮೂಡಿಸುತ್ತದೆ. ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾರ್ಡ್ ಸಮಿತಿ ಬಳಗ ಸಂಚಾಲಕ ಮೋದಿನ ಪಟೇಲ್ ಅಣಬಿ, ಹಿರಿಯ ಸಂಯೋಜಕ ಮಂಜುನಾಥ ಮೊಕಾಶಿ, ಉದ್ಯಮಿ ನೀಲಕಂಠರಾವ ಮೂಲಗೆ, ಉರ್ದು ಹಿರಿಯ ಪತ್ರಕರ್ತ ಅಜೀಜ್ ಉಲ್ಲಾ ಸರ್ಮಸ್ತ, ಮಾಜಿ ಮೇಯರ್ ಸಜ್ಜಾದ ಅಲಿ ಇನಾಮದಾರ, ಮಾಜಿ ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಸರಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ನಜಿರೋದ್ದಿನ್ ಮೂತವಲ್ಲಿ, ಡಾ ಗೌಸಿದ್ದೀನ್, ಅಸ್ಲಾಂ ಬಾಜೆ, ಸಂಜೀವ ಕುಮಾರ ಡೊಂಗರಗಾವ್, ಡಾ ರಾಜಶೇಖರ ಕಟ್ಟಿಮನಿ, ಖಾಜಾ ಗೇಸುದರಜ್, ಸಹಾರ ಭಾನು, ಅಕ್ರಮ ಸಕ್ರಮ ಭಾಗರ್ ಉಕ್ಕುಂ ಸಾಗುವಳಿ, ಶೈಖ್ ಸಮ್ರಿನ್, ರಾಜಶೇಖರ್ ಮಾಗ, ರಾಜಶೇಖರ್ ಬಿರಾದರ, ಸತೀಶ ಮಾಲಗಿತ್ತಿ, ನಾಗರಾಜ್ ಮುಲಗಿ, ಬಸವರಾಜ ಗಂಜಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here