ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸಿ

0
39

ಕಲಬುರಗಿ: ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರು ಕೂಡಾ ನಮ್ಮ ನೆರೆ-ಹೊರೆ ರಾಷ್ಟ್ರಗಳಲ್ಲಿ ಇನ್ನೂ ಕಂಡುಬರುತ್ತಿರುವುದರಿಂದ ಅದು ವೈರಸ್ ನಮ್ಮ ದೇಶಕ್ಕೆ ತಗುಲಬಾರದೆಂದು ಮುಂಜಾಗ್ರತೆಯಾಗಿ ಪೋಲಿಯೋ ಹನಿಯನ್ನು ಹಾಕಲಾಗುತ್ತಿದೆ. ಐದು ವರ್ಷಗಳೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿಯನ್ನು ಹಾಕಿಸುವ ಮೂಲಕ ಪೋಲಿಯೋ ರೋಗ ಬರದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಾಲೂಕಾ ಆರೋಗ್ಯ ಮೇಲ್ವಿಚಾರಕ ಪುಂಡಲಿಕ ಗಂಜಿ ಹೇಳಿದರು. ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಹೇಳಿದರು.

ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದ ಆವರಣದಲ್ಲಿ ಶನಿವಾರ ಜರುಗಿದ ಪೋಲಿಯೋ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಯುಪಿಎಚ್‍ಸಿಯ ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಮಾತನಾಡಿ, ಪೋಲಿಯೋ ಎಂಬುದು ವೈರಾಣುವಿನಿಂದ ಉಂಟಾಗುವ, ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದೆ. ಮಕ್ಕಳನ್ನು ಕಾಡುವು ಈ ಕಾಯಿಲೆಯು, ಜ್ವರ, ಸುಸ್ತು, ವಾಂತಿ, ತಲೆನೋವು, ಸ್ನಾಯು ಸೆಟೆದುಕೊಳ್ಳುವ ಲಕ್ಷಣಗಳನ್ನು ಹೊಂದಿದೆ. ಪ್ರತಿ 200 ಪ್ರಕರಣಗಳಲ್ಲಿ ಒಂದು ಪ್ರಕರಣವು ಶಾಶ್ವತ ಅಂಗವೈಕಲ್ಯಕ್ಕೆ ಎಡೆಮಾಡಿಕೊಡುವದರಿಂದ ನಿರ್ಲಕ್ಷ ಮಾಡುವುದು ಬೇಡವೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here