ಕಲಬುರಗಿ: ನಗರದ ಗುಬ್ಬಿ ಕಾಲೋನಿಯ ಉದ್ಯಮಿ ಸೋಮಶೇಖರ್ ಪಾಟೀಲ್ ಅವರ ಮೇಲೆ ನಗರದ ಪಶು ಆಸ್ಪತ್ರೆ ಮುಂದೆ ಅಪರಿಚಿತರು ಹಲ್ಲೆ ಮಾಡಿ 1.50 ಲಕ್ಷ ರೂ.ಗಳ ಮೌಲ್ಯದ ಚಿನ್ನದ ಚೈನ್ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪೂರ್ ಠಾಣೆಯ ಪೋಲಿಸರು ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಇಂದಿರಾನಗರದ ಉದಯಕುಮಾರ್ ತಂದೆ ತಿಪ್ಪಣ್ಣ ದೊಡ್ಡಮನಿ (29), ಲೋಕೇಶ್ ತಂದೆ ಸುಭಾಷ್ ಶಿಂಧೆ (23), ಫಿಲ್ಟರ್ ಬೆಡ್‍ನ ಅಭಿಷೇಕ್ ಅಲಿಯಾಸ್ ಪೋಗೋ ತಂದೆ ಹುಣಚಪ್ಪ ಪೂಜಾರಿ(20) ಹಾಗೂ ಇಂದಿರಾನಗರದ ದರ್ಶನ್ ತಂದೆ ಗಿರೆಪ್ಪಾ ಶಿಂಗೆ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 1.50 ಲಕ್ಷ ರೂ.ಗಳ ಮೌಲ್ಯದ 30 ಗ್ರಾಮ್ ತೂಕದ ಚಿನ್ನದ ಚೈನ್, ಕೃತ್ಯಕ್ಕೆ ಬಳಸಿದ 14 ಲಕ್ಷ ರೂ.ಗಳ ಮೌಲ್ಯದ ಒಂದು ಮಾರುತಿ ಎರಿಟಿಗಾ ಕಾರು ಸೇರಿ ಒಟ್ಟು 15,500,000 ರೂ.ಗಳ ಮೌಲ್ಯದ್ದನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಪಿಐ ಘಾಳಪ್ಪ ಪೆನಾಗ್ ಅವರ ನೇತೃತ್ವದಲ್ಲಿ ಪಿಎಸ್‍ಐ ಶಾಮಸುಂದರ್, ಸಿಬ್ಬಂದಿಗಳಾದ ಶಿವಪ್ರಕಾಶ್, ಕೇಸುರಾಯ್, ವಿಶ್ವನಾಥ್, ರಾಮು ಪವಾರ್, ಶಶಿಕಾಂತ್, ನವೀನಕುಮಾರ್, ಶಿವಶರಣಪ್ಪ, ಚನ್ನವೀರೇಶ್ ಅವರು ಕಾರ್ಯಾಚರಣೆ ಕೈಗೊಂಡು ದರೋಡೆಕೋರರನ್ನು ಬಂಧಿಸಿದರು. ಕಾರ್ಯಾಚರಣೆಗೆ ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.