ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಕೋಡ್ ಹೆಕಾಥಾನ್‌ಗೆ ಚಾಲನೆ

0
80

ಕಲಬುರಗಿ: ತಾಂತ್ರಿಕ ಶಿಕ್ಷಣ ಕ್ಷೇತ್ರಗಳು ಬೇಳೆಯಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ನೈಪುಣ್ಯತೆ ಹಾಗೂ ಕೌಶಲ್ಯತೆ ಮೂಡಬೇಕು ಎಂದಾದರೆ ಪ್ರತಿ ವರುಷ ಹೆಕಾಥಾನ ರೀತಿಯ ಕಾರ್ಯತಂತ್ರಗಳು ನಡೆಯುತ್ತಿರಬೇಕು. ಭಾರತ ಸರಕಾರವು ೨೦೧೭ ರಲ್ಲಿ ಮೊದಲಬಾರಿಗೆ ಕೋಡ್ ಹೇಕಾಥಾನಗೆ ದೇಶಾದ್ಯಂತ ಪ್ರಚುರ ಪಡಿಸಿತು. ಸಾಕಷ್ಟು ವಿದ್ಯಾರ್ಥಿಗಳು ಆಸಕ್ತಿಯಿಂದ ಅದರಲ್ಲಿ ಭಾಗವಹಿಸಿ ವಿನೂತನವಾದ ಸಮಾಜಕ್ಕೆ ಉಪಯುಕ್ತವಾಗುವಂಥಹ ಸಾಫ್ಟವೇರಗಳನ್ನು ತಯ್ಯಾರಿಸಿದರು ಮುಂದೆಯೂ ಕೂಡಾ ಇಂತಹ ಹೆಕಾಥಾನಗಳು ನಡೆಯುತ್ತಲೇ ಇರಬೇಕೆಂದು ಶರಣಬಸವ ವಿಶ್ವವಿದ್ಯಾಲಯದ ಪ್ರೊ ವಾಯ್ಸಚಾನ್ಸಲರಾದ ಡಾ. ವ್ಹಿ. ಡಿ. ಮೈತ್ರಿಯವರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರು ಇಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ಯೂಪ್ ೩ ಅಡಿ ಪ್ರಾಯೋಜಿಸಲಾದ ೨೮ ಗಂಟೆಗಳ ಕೋಡ್ ಹೆಕಾಥಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ರಾಷ್ಟ್ರಮಟ್ಟದ ಕೋಡ್ ಹೆಕಾಥಾನನ್ನು ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗ ಹಾಗೂ ಗಣಕತಂತ್ರ ವಿಜ್ಞಾನ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದು ದೇಶಾದ್ಯಂತದ ವಿವಿಧ ತಾಂತ್ರಿಕ ಮಹಾವಿದ್ಯಾಲಯದ ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಸಿ. ಬಿಲಗುಂದಿಯವರು ಮಾತನಾಡಿ ಈ ರೀತಿಯ ಕೋಡ ಹೆಕಾಥಾನ ಈ ಭಾಗದಲ್ಲಿ ಮೊದಲಬಾರಿಗೆ ನಡೆದಿದ್ದು ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಸುಮಾರು ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಇದು ನಮ್ಮ ಮಹಾವಿದ್ಯಾಲಯಕ್ಕೆ ಹೆಮ್ಮೆಯ ವಿಷಯ, ಮುಂದೆಯು ಕೂಡಾ ಈ ರೀತಿಯ ಹೆಕಾಥಾನಗಳು ಮಹಾವಿದ್ಯಾಲಯದಲ್ಲಿ ನಡೆಯಿಸಲಾಗುವುದು ಎಂದು ಹೇಳಿದರು.

ಸ್ವಾಗತ ಭಾಷಣವನ್ನು ಮಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ಮಾತನಾಡಿ ’ಕೋಡ ಹ್ಯಾಕಾಥಾನ’ ಭಾರತ ಸರಕಾರದ ’ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ನ ಗುಣ ಲಕ್ಷಣಗಳನ್ನು ಹೊಂದಿದ್ದು ಇಲ್ಲಿಯೂ ಕೂಡ ಭಾಗವಹಿಸುವ ತಂಡಗಳು ಸಮಾಜಕ್ಕೆ ಒಳಿತಾಗುವಂತಹ ಸಾಫ್ಟ್‌ವೇರ್ ತಯಾರಿಸುವ ಗುರಿಯನ್ನು ಹೊಂದಿರುತ್ತಾರೆ.ವಿದ್ಯಾರ್ಥಿಗಳಲ್ಲಿ ಅಡಗಿರುವ ’ಕೋಡಿಂಗ್’ ಚಾಣಾಕ್ಷತೆಯನ್ನು ಜಾಗೃತಗೋಳಿಸುವುದೇ ಈ ಹ್ಯಾಕಾಥಾನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಟೆಕ್ಯೂಪ್ – ೩ ರ ಸಂಚಾಲಕರಾದ ಪ್ರೊ. ಶರಣ ಪಡಶೆಟ್ಟಿ ಹೆಕಾಥಾನನ ಮೂಲ ಉದ್ದೇಶ, ಅದನ್ನು ನಿರ್ವಹಿಸುವ ಕಾರ್ಯರೂಪಗಳ ಬಗ್ಗೆ ಸವಿಸ್ತಾರವಾಗಿ ವಿವಿರಿಸಿದರು. ಸಮಾರಂಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಮಂಠಾಳೆ, ಜಂಟಿ ಕಾರ್ಯದರ್ಶಿಗಳಾದ ಗಂಗಾಧರ ಡಿ. ಎಲಿ, ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಸಂಪತಕುಮಾರ ಡಿ. ಲೋಯಾ, ನಿತಿನ ಬಿ. ಜವಳಿ, ಉದಯಕುಮಾರ ಚಿಂಚೋಳಿ, ಡಾ.ಎಸ.ಬಿ.ಕಾಮರೆಡ್ಡಿ, ಸತೀಶ್ಚಂದ್ರ ಸಿ. ಹಡಗಲಿಮಠ ಹಾಗೂ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಗಣಕತಂತ್ರ ವಿಭಾಗದ ಮುಖ್ಯಸ್ಥೆಯಾದ ಡಾ. ಸುವರ್ಣಾ ನಂದ್ಯಾಳ ಅವರು ಗೌರವ ಅತಿಥಿಗಳನ್ನು ಪರಿಚಯಿಸಿದರು. ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ವಂದನಾರ್ಪಣೆಯನ್ನು ಮಾಡಿದರು.

ಈ ಕಾರ್ಯಕ್ರಮದಲ್ಲಿ ಹೆಕಾಥಾನನ ಸಂಚಾಲಕರಾದ ಡಾ. ಜಯಶ್ರೀ ಅಗರಖೇಡ, ಅಶೋಕ ಪಾಟೀಲ, ನಾಗೇಶ ಸಾಲಿಮಠ ಮತ್ತು ಶರಣಬಸಪ್ಪಾ ಗಂದಗೆ ಅವರು ಉಪಸ್ಥಿತರಿರುವರು. ಮಹಾವಿದ್ಯಾಲಯದ ಡೀನಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here