ಕಲಬುರಗಿ: ಲೋಕಸಬಾ ಚುನಾವಣೆ ಹಿನ್ನಲ್ಲೆಯಲ್ಲಿ ಲೆಕ್ಕಕ್ಕೆ ಸಿಗದ ಆಕ್ರಮ ಹಣ, ಮದ್ಯಸೇರಿದಂತೆ ಇತರೆ ಸಾಮಗ್ರಿಗಳನ್ನು ಉಚಿತವಾಗಿ ಮತದಾರರಿಗೆ ವಿತರಿಸಿ ಅಮಿಶೆ ಹಾಕುವುದನ್ನು ತಡೆಯಲು ಜಿಲ್ಲಾಡಳಿತ ನಗರದಲ್ಲಿ 10 ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು ಈ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಟ್ಟೆಚ್ಚರವಹಿಸಲಾಗುತ್ತಿದೆ ಪೊಲೀಸ್ ಆಯುಕ್ತರಾದ ಐಪಿಎಸ್ ಚೈತನ್ ಆರ್ ತಿಳಿಸಿದ್ದಾರೆ.
ಪಟ್ಟಣ ಮತ್ತು ನಗರದ ಪ್ರಮುಖ ಪ್ರವೇಶ ಕೇಂದ್ರಗಳಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಜಂಟಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್, ಕಂದಾಯ, ಆರ್‌ಟಿಒ, ವಾಣಿಜ್ಯ ತೆರಿಗೆ, ಅಬಕಾರಿ ಮತ್ತು ಇತರ ಇಲಾಖೆಗಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗಾಗಲೇ, ಸಿಬ್ಬಂದಿಗಳು ಹಾದುಹೋಗುವ ವಾಹನಗಳ ತಪಾಸಣೆಯನ್ನು ಪ್ರಾರಂಭಿಸಿದ್ದಾರೆ ಎಲ್ಲಾ ವಾಹನಗಳನ್ನು ಪರಿಶೀಲಿಸಲಾಗುವುದು ಮತ್ತು ಲೋಕಸಭಾ ಚುನಾವಣೆ 2024 ರ ಚುನಾವಣೆಯನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಘೋಷಿಸಿದ ನಂತರ ಚಾಲನೆಯನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.