ಕಲಬುರಗಿ: ಇಂದು ಸ್ವೀಪ್ ಸಮಿತಿ ಹಾಗೂ ತಾಲೂಕ ಪಂಚಾಯತ್ ಕಾಳಗಿ ವತಿಯಿಂದ “ಮತದಾನ ಜಾಗೃತಿ ಜಾಥಾ ಅಭಿಯಾನ” ವನ್ನು ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕಿರಣ ಪಾಟೀಲ ಅವರ ನೇತತ್ವದಲ್ಲಿ ಆಯೋಜಿಸಲಾಯಿತು.
ಜಾಥಾ ಮೆರವಣಿಗೆಯನ್ನು ಕಾಳಗಿ ತಾಲೂಕಿನ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸರ್ಕಲ್ ಇಂದ ಹಳೇ ಬಸ್ ಸ್ಟ್ಯಾಂಡ್ ವರೆಗೆ ಮತದಾನ ನಮ್ಮ ಹಕ್ಕು, ನಮ್ಮ ಶಕ್ತಿ , ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ, ಮತದಾನ ಕ್ಕಿಂತ ಇನ್ನೊಂದಿಲ್ಲ, ಎಂಬ ಘೋಷಣೆಯೊಂದಿಗೆ ಜಾಥಾ ನಡೆಸಲಾಯಿತು.
ಮಾನ್ಯ ತಹಸೀಲ್ದಾರ ಘಮಾವತಿ ರಾಥೋಡ್ ಅವರು ಮಾತನಾಡಿ ಮತದಾನ ಮಾಡುವ ಅಧಿಕಾರ ಸಿಕ್ಕಿದು ನಮ್ಮೆಲ್ಲರ ಪುಣ್ಯ, ಹೀಗಾಗಿ ಆದಿನ ಯಾರು ಕೂಡಾ ಮತದಾನದಿಂದ ದೂರ ಉಳಿಯದೆ ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ಮನವಿ ಮಾಡಿದರು.
ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮಾತನಾಡಿ, ಮತದಾನ ನಮ್ಮ ಹಕ್ಕು, ಅದು ನಮ್ಮಗೆ 5 ವರ್ಷಗಳಿಗೊಮ್ಮೆ ದೊರೆಯುತ್ತದೆ. ಉತ್ತಮ ನಾಯಕರನ್ನು ಆರಿಸುವ ಹಕ್ಕು, ಪ್ರತಿಯೊಬ್ಬ ನಾಯಕನದಾಗಿದೆ. ನಮ್ಮ ದೇಶದ ಮುಂದಿನ ಭವಿಷ್ಯ ನಮ್ಮ ಕೈಯಲ್ಲಿ ಇದೆ. ತಾವು ಮತದಾನ ಮಾಡಿ ಇತರರಿಗೂ ಕೂಡ ಮತದಾನ ಮಾಡುವಂತೆ ತಿಳಿ ಹೇಳಬೇಕು. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಗೆ ಹೋಗಿ ಮತದಾನ ಮಾಡಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತದಾನ ಪ್ರತಿಜ್ಞಾವಿಧಿ ನರೇಗಾ ಐಈಸಿ ಸಂಯೋಜಕಿ ಯಾದ ಜ್ಯೋತಿ ಸಾಗರ್ ಅವರು ಬೋಧಿಸಿದರು.
ಜಾಥಾದಲ್ಲಿ ನರೇಗಾ ಮಾನ್ಯ ಸಹಾಯಕ ನಿರ್ದೇಶಕರಾದ ಗಂಗಾಧರ್, ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಪಟ್ಟಣ್ಣ ಪಂಚಾಯಿತಿ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು, ಕಾಳಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎನ್ ಆರ್ ಎಲ್ ಎಂ ಸಂಘದ ಮಹಿಳೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.