ವಾಗಣಗೇರ ಝಂಡದಕೇರಾ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

0
16

ಸುರಪುರ: ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಯಾದ ರಾಜಾ ವೇಣುಗೋಪಾಲ ನಾಯಕ ರವರ ಸಮ್ಮುಖದಲ್ಲಿ ಸುರಪುರ ನಗರಸಭೆಯ ವಾರ್ಡ ನಂ. 9 ಝಂಡದಕೇರ ವಾರ್ಡನ ನಗರಸಭೆ ಸದಸ್ಯರಾದ ಶಿವುಕುಮಾರ ಕಟ್ಟಿಮನಿ ರವರು ಸುಮಾರು 20ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಅಭ್ಯಾರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ,ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕÀ ಅವರು ಶಾಸಕರಾಗಿ ಅಧಿಕಾರಿ ಅವಧಿಯಲ್ಲಿ ಮಾಡಿದ ಜನಪರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ತಾವೆಲ್ಲರು ಗುರುತಿಸಿ ಇಂದು ಅವರಿಲ್ಲದ್ದರಿಂದ ಚುನಾವಣೆ ನಡೆಯುತ್ತಿದೆ,ತಾವೆಲ್ಲರು ಪಕ್ಷಕ್ಕೆ ಸೇರ್ಪಡೆಗೊಂಡು ಶಕ್ತಿ ತುಂಬಿದ್ದೀರಿ,ರಾಜಾ ವೆಂಕಟಪ್ಪ ನಾಯಕ ಅವರು ಮಾಡಿದ ಕಾರ್ಯಗಳನ್ನು ಮುಂದುವರೆಸಲು ತಾವೆಲ್ಲರು ಕಾಂಗ್ರೆಸ್‍ಗೆ ಮತ ನೀಡಿ ಗೆಲ್ಲಿಸುವಂತೆ ವಿನಂತಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ನಗರದ ಝಂಡದಕೇರಾದ ಶೇಖರ ಬಾಬು ಕಟ್ಟಿಮನಿ, ಚಂದಪ್ಪ ಪಂಚಮಿ, ಹಣಮಂತ ಹೊಸಮನಿ, ಮಹೇಶ ಕಟ್ಟಿಮನಿ, ರವಿಕುಮಾರ, ಗೋರ್ವಧ ತೇಲ್ಕರ, ಬಸಮ್ಮ ಬಿ ಕಟ್ಟಿಮನಿ, ನಿರ್ಮಲಾ ಕಟ್ಟಿಮನಿ, ಮಿನಾಕ್ಷಿ ಕಟ್ಟಿಮನಿ, ಲಕ್ಷ್ಮೀ ಕಟ್ಟಿಮನಿ, ರೇಣುಕಾ ಕಟ್ಟಿಮನಿ, ಸುಜಾತ ಕಟ್ಟಿಮನಿ, ಶಿವಬಾಯಿ ಕಟ್ಟಿಮನಿ, ಬಸಮ್ಮ ಕಟ್ಟಿಮನಿ, ನಿಂಗರಾಜ ಪಂಚಮಿ, ಪರಶುರಾಮ ಪಂಚಮಿ, ಮಲ್ಲಿಕಾರ್ಜುನ ಪಂಚಮಿ, ನಿಂಗಮ್ಮ ಪಂಚಮಿ, ಅಖೀಲಾ ಕಟ್ಟಿಮನಿ, ಭೀಮಬಾಯಿ ಕಟ್ಟಿಮನಿ, ರಾಜು ಕಟ್ಟಿಮನಿ, ರಾಹುಲ ತೇಲ್ಕರ ಹಾಗೂ ಇನ್ನಿತರರು ಸೇರ್ಪಡೆಗೊಂಡರು.

ವಾಗಣಗೇರ ಗ್ರಾಮದ ಸಣ್ಣ ಮಾನಪ್ಪ ಟಣಕೇದಾರ, ಅಂಬ್ಲಪ್ಪ ಟಣಕೇದಾರ, ಹಣಮಂತ, ಸಣ್ಣ ಬಾಲಪ್ಪಗೌಡ, ಬಲಭೀಮಪ್ಪ, ಮಂಜುನಾಥ, ಗಂಗಪ್ಪ ಗೌಡಗೇರಿ, ಮಲ್ಲಪ್ಪ ಡ್ರೈವರ, ಮೌನೇಶ ಟಣಕೇದಾರ, ಮಲ್ಲಪ್ಪ ವನದುರ್ಗ, ಬೈಲಪ್ಪ ಗೌಡಗೇರಿ ಹಾಗೂ ಇನ್ನಿತರರು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಹಲ್ ಯಾದವ, ವೆಂಕೋಬ ಯಾದವ, ನಿಂಗರಾಜ ಬಾಚಿಮಟ್ಟಿ,ಪ್ರಕಾಶ ಗುತ್ತೇದಾರ, ಭೀಮರಾಯ ಮೂಲಿಮನಿ, ರಾಜಾ ಸಂತೊಷ ನಾಯಕ, ರಾಜಾ ವಿಜಯ ಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಕಾಳಪ್ಪ ಕವಾತಿ, ದೇವರಾಜ ಜಾಗಿರದಾರ ವಕೀಲ, ರಾಜಾ ಪಿಡ್ಡ ನಾಯಕ(ತಾತಾ), ವೆಂಕಟೇಶ ಹೊಸಮನಿ ಮಾಜಿ ನಗರಸಭೆ ಸದಸ್ಯರು, ಶಕೀಲ ನಗರಸಭೆ ಸದಸ್ಯರು, ನಾಸೀರ ಕುಂಡಾಲೆ ನಗರಸಭೆ ಸದಸ್ಯರು, ಸುಮೀತ ಝಂಡದಕೇರಿ, ಆದಪ್ಪ ಹೊಸಮನಿ ವಕೀಲ, ಶ್ರೀನಿವಾಸ ನಾಯಕ ಬೋಮ್ಮನಹಳ್ಳಿ, ಮಾನಪ್ಪ ಕಟ್ಟಿಮನಿ ನಗರಸಭೆ ಮಾಜಿ ಸದಸ್ಯರು ವಡ್ಡರಗಲ್ಲಿ ಹಾಗೂ ಗುಂಡಲಗೇರಾ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದುರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here