ವಿಕಲಚೇತನ ಮತದಾರರಿಗೆ ಮತದಾನಕ್ಕಾಗಿ ಹಲವು ಸೌಕರ್ಯ

0
13

ಕಲಬುರಗಿ: 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ಬಗೆಯ ವಿಕಲಚೇತನ ಮತದಾರರು ಸುಗಮವಾಗಿ ಮತ ಚಲಾಯಿಸಲು ಗಾಲಿ ಕುರ್ಚಿ, ಮತಗಟ್ಟೆಯಲ್ಲಿ ಇಳಿಜಾರು ಮತ್ತು ರೈಲಿಂಗ್ಸ, ಮತಯಂತ್ರದಲ್ಲಿ ಬ್ರೈಲ್ ಲಿಪಿ, ಸನ್ನೆ: ಸೂಚನಾ ಫಲಕಗಳು, ಮತದಾನ ಮಾಡಲು ಪ್ರತ್ಯೇಕ ಸಾಲು, ಅಂದ ಮತದಾರರಿಗೆ ಸಹಾಯಕರ ವ್ಯವಸ್ಥೆ, ವಿಕಲಚೇತನ ಸ್ನೇಹಿ ಶೌಚಾಲಯ, ಶ್ರವಣದೋಷ ಮತದಾರರಿಗೆ ಸನ್ನೆ: ಬಾಷೆಯಲ್ಲಿ ಮಾಹಿತಿ ಒದಗಿಸುವ ಹಾಗೂ ಇನ್ನಿತರ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ.

ಎಲ್ಲಾ ವಿಕಲಚೇತನ ಮತದಾರರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸರ್ಕಾರದ ಸೌಕರ್ಯಗಳ ಬಗ್ಗೆ ನಗರ ಮತ್ತು ಗ್ರಾಮೀಣ ಮಟ್ಟದ ವಿಕಲಚೇತನ ಮತದಾರರಲ್ಲಿ ಅರಿವು ಮೂಡಿಸಬೇಕೆಂದು ಸಮದೃಷ್ಟಿ ಕ್ಷಮತಾ ವಿಕಾಸ ಹಾಗೂ ಅನುಸಂಧಾನ ಮಂಡಲದ (ಸಕ್ಷಮ) ಜಿಲ್ಲಾಧ್ಯಕ್ಷ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here