ವಾಡಿ: ಪಟ್ಟಣದಲ್ಲಿ ಕಳೆದ ಒಂದು ವಾರ ದಿಂದ ಕುಡಿಯಲು,ಬಳಸಲು ನೀರಿಲ್ಲ ಇಲ್ಲಿನ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದು ಇಂತಹ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸೇಡಂ ನ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ರೀತಿ ನೀರಿನ ಸಮಸ್ಯೆ ಬರಬಾರದು ಎಂದು ಇಂಗಳಗಿ ಯಿಂದ ಎಸಿಸಿ ಕಂಪನಿಯ ಪೈಪ್ ಲೈನಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ 50 ಲಕ್ಷ ರೂಪಾಯಿಗಳು ಖರ್ಚು ಮಾಡಿ, ಸುಮಾರು ಲಕ್ಷಾಂತರರೂ ಮೋಟಾರ್ ಪಂಪ್ ರಿಪೇರಿ, ಅಂತ ಹೊಸ ಖರೀದಿ ಅಂತ ಖರ್ಚು ಬರೆಯುತ್ತಾರೆ. ನಕಲಿ ಬಿಲ್ ಗಳ ಮುಖಾಂತರ ಲಕ್ಷಾಂತರ ರೂಪಾಯಿಗಳನ್ನು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಹಗಲು ದರೋಡೆ ಮಾಡುತ್ತಿದ್ದು,ಇವರ ಸಂಪತ್ತಿನ ಮತ್ತು ಆದಾಯ ಮೂಲದ ತನಿಖೆ ಮಾಡಿ ಕ್ರಮಕೈಗೊಳ್ಳಿ, ಈ ರೀತಿ ಹಣ ಕೊಳ್ಳೆ ಹೊಡೆಯುತ್ತಾ ಒಂದೊಂದು ವಾರ ನೀರು ಬಿಡದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ.
ಇದರ ಬಗ್ಗೆ ಸಾಕಷ್ಟು ಸಲ ಪುರಾವೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನ ವಾಗಿಲ್ಲ.ಇಂತಹ ಬೇಸಿಗೆ ಕಾಲದಲ್ಲಿ ನಮ್ಮ ಪಕ್ಕದಲ್ಲಿ ಎರಡೆರಡೂ ನದಿಗಳಿದ್ದರೂ ನೀರಿಗಾಗಿ ಜನ ಪರಿತಪಿಸುವಂತೆ ಇಲ್ಲಿನ ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದಾರೆ.
ಇದನ್ನು ತಾವು ಗಂಭೀರವಾಗಿ ಪರಿಗಣಿಸಿ ಇವರ ವಿರುದ್ಧ
ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.