ಬಸವ ಸೇನೆಯನ್ನು ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ವಿಲಿನಗೊಳಿಸುವಂತೆ ಆಗ್ರಹ

0
86

ಕಲಬುರಗಿ: ವೀರಶೈವ ಲಿಂಗಾಯತರ ಮಧ್ಯೆ ಭಿನ್ನಾಭಿಪ್ರಾಯ ತಂದು ವೀರಶೈವವೇ ಬೇರೆ ಲಿಂಗಾಯತವೇ ಬೇರೆ ಎಂದು ಹೇಳಿಕೊಂಡು ತಿರುಗಾಡಿದ ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಮತ್ತು ಮಾಜಿ ಶಾಸಕ ಬಿಆರ್ ಪಾಟೀಲ್ ಅವರ ನಡೆ ಕುರಿತು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ, ಜಿಲ್ಲಾ ಘಟಕ ವಿಲಿನ, ಜಿಲ್ಲಾ ಘಟಕ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

ನಗರದ ಶಹಾಬಜಾರದ ಸೊಗಸನಗೇರಿಯ ಕಡಗಂಚಿ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಠಾಧೀಶರು, ವೀರಶೈವ ಲಿಂಗಾಯತ ಸಮಾಜ ಶತಶತಮಾನಗಳಿಂದ ಒಂದಾಗಿ ಹೊರಟಿರುವ ಸಮಾಜಕ್ಕೆ ಪ್ರತ್ಯೇಕ ಧರ್ಮದ ಹೆಸರಿನ ಮೇಲೆ ತಮ್ಮ ರಾಜಕೀಯ ಲಾಭಕ್ಕೋಸ್ಕರ ಮುಗ್ಧ ಜನತೆಯಲ್ಲಿ ಭಿನ್ನಾಭಿಪ್ರಾಯದ ಬೀಜ ಬಿತ್ತಿ ರಾಜಕೀಯವಾಗಿ ಬೆಳೆಯಲು ಸಂಚು ರೂಪಿಸಲಾಗುತ್ತಿದೆ.

Contact Your\'s Advertisement; 9902492681

ಪರಂಪರೆಯ ಕುರಿತು ಶ್ರದ್ಧೆ ನಂಬಿಕೆ ಕುರಿತು ವ್ಯಾಪಕವಾಗಿ ಟೀಕಿಸಿ ಉದ್ದುದ್ದ ಭಾಷಣ ಬಿಗಿದ ನಾಯಕರ ಬಾಯಲ್ಲಿ ವೀರಶೈವ ಲಿಂಗಾಯತ ಧರ್ಮ ಒಂದೇ ಎನ್ನುವ ಪದ ಬರುತ್ತಿರುವುದು ಲೋಕಸಭಾ ಚುನಾವಣಾ ಗಿಮಿಕ್ಕೆ? ಎಂದು ಪ್ರಶ್ನಿಸಿದ್ದರು.  ಸೌಹಾರ್ದತೆ ಶಾಂತಿಯಿಂದ ಬಾಳುತ್ತಿದ್ದ ಸಮಾಜದಲ್ಲಿ ಅಧಿಕಾರದ ಸ್ವಾರ್ಥಕ್ಕಾಗಿ ಧರ್ಮ ಒಡೆಯುವ ಕಾಯಕಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ ನಾಯಕರು ಈಗ ನಿಜವಾಗಿಯೂ ವೀರಶೈವ ಲಿಂಗಾಯತರು ಒಂದೇ ಎಂದು ಹೇಳುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ನಿಜವಾಗಿಯೂ ವೀರಶೈವ ಲಿಂಗಾಯತರ ಬಗ್ಗೆ ಕಾಳಜಿ ಇದ್ದರೆ ವೀರಶೈವ ಲಿಂಗಾಯತ ಒಂದೇ ಎನ್ನುವ ಮನೋಭಾವನೆ ಹೊಂದಿದ್ದರೆ ಕೂಡಲೇ ಜಾಗತಿಕ ಲಿಂಗಾಯತ ಮಹಾಸಭಾವನ್ನು ಮತ್ತು ಬಸವ ಸೇನೆಯನ್ನು ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ವಿಲಿನಗೊಳಿಸುವಂತೆ ಕೇಳಿಕೊಳ್ಳುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಹಲವಾರು ಪೂಜ್ಯ ಮಠಾಧೀಶರು  ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here