ಸಾಹೇಬ್ ನನಗೆ ಸ್ಪೂರ್ತಿಯಾದೆ

0
31

ಸಾಹೇಬ್ ನನಗೆ ಸ್ಪೂರ್ತಿಯಾದೆ

ನೆಮ್ಮದಿಯ ಬದುಕಿಗೆ ದಾರಿದೀಪವಾದೆ
ನನ್ನ ಬದುಕಿಗೆ ಒಂದು ಅರ್ಥವಾದೆ
ಜಗತ್ತು ಕಂಡ ಶ್ರೇಷ್ಠ ವಿದ್ವಾಂಸನಾದೆ
ಸಾಹೇಬ್ ನನಗೆ ಸ್ಪೂರ್ತಿಯಾದೆ..!!

ಮನುವಾದಕ್ಕೆ ಮೆಟ್ಟಿನಿಂತು
ಮಹಿಳೆಯರ ಮುಕ್ತಿಗೆ ನಾಂದಿಯಾದೆ
ಅವರ ಚಳುವಳಿಗೆ ಶಕ್ತಿಯಾದೆ
ಸಾಹೇಬ್ ನನಗೆ ಸ್ಪೂರ್ತಿಯಾದೆ..!!

ಸಮಾಜದ ಸಂಕೋಲೆಗಳನ್ನು
ಧಿಕ್ಕರಿಸಿದೆ, ಶೋಷಣೆಗೆ
ಹೋರಾಟದ ಕಿಚ್ಚು ಹಚ್ಚಿದೆ
ಸಾಹೇಬ್ ನನಗೆ ಸ್ಪೂರ್ತಿಯಾದೆ..!!

ಸಂವಿಧಾನ ಶಿಲ್ಪಿಯಾಗಿ
ಗುಲಾಮಗಿರಿಯ ಬೇಡಿ
ಕತ್ತರಿಸಿದೆ, ಸಮಾನತೆ, ಸ್ವಾತಂತ್ರ್ಯ,
ಸೋದರತ್ವ ಬಿತ್ತಿದೆ,
ಸಾಹೇಬ್ ನನಗೆ ಸ್ಪೂರ್ತಿಯಾದೆ..!!

ಮೌಡ್ಯ ತುಂಬಿದ ಬದುಕಿಗೆ
ಬುದ್ಧನ ಬೆಳಕು ತೋರಿದೆ
ಧಮ್ಮಕ್ಕೆ ಮರಳಿ ಎಂದೆ
ಸಾಹೇಬ್ ನನಗೆ ಸ್ಪೂರ್ತಿಯಾದೆ
ನೀ ನನಗೆ ಸ್ಪೂರ್ತಿಯಾದೆ..!!

ರವಿ ಕೋಳಕೂರ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here