ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು

0
17

ಶಹಾಬಾದ: ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು. ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದು ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ ಹೇಳಿದರು.

ಅವರು ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಬಸವ ಜಯಂತಿಯನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

12ನೇ ಶತಮಾನದ ಅಂದಿನ ಸಮಾಜ ತಾರತಮ್ಯದಿಂದ ಕೂಡಿತ್ತು. ಶೋಷಿತರು, ದೀನದಲಿತರು ಹಾಗೂ ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯ ವಿಲ್ಲದೆ ತಮ್ಮ ದನಿಯನ್ನೇ ಕಳೆದುಕೊಂಡಿದ್ದರು. ಅಂತಹ ಸಂದರ್ಭದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆ ಯವರನ್ನು ಒಂದೆಡೆ ಕಲೆಹಾಕಿ ತಮ್ಮ ಸರಳ ವಚನ ಸಾಹಿತ್ಯದ ಮೂಲಕ ಎಲ್ಲರನ್ನು ಜಾಗೃತ ಗೊಳಿಸಿದರು. ಅ ಮೂಲಕ ಸಮಾನತೆಯ ತತ್ವ ವಿಚಾರಗಳಿಗೆ ಮುನ್ನುಡಿ ಬರೆದ ಬಸವಣ್ಣ ಅವರು ಶ್ರೇಷ್ಠ ಸಮಾಜ ಸುಧಾರಕರಾದರು ಎಂದು ಹೇಳಿದರು.

ಮುಖಂಡರಾದ ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿ, ಬಸವಣ್ಣನವರು ತಮ್ಮ ಶ್ರೇಷ್ಠ ಚಿಂತನೆಗಳ ಮೂಲಕ ಶೋಷಿತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣರಾದರು. ಅವರು ಅಂದು ಸ್ಥಾಪಿ ಸಿದ ಅನುಭವ ಮಂಟಪದ ಮಾದರಿಯೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಮಾತನಾಡಿ, ವಿಶ್ವದ ಪ್ರಥಮ ಪ್ರಜಾಸತ್ತಾತ್ಮಕ ಸಂಸ್ಥೆಯೆಂದೇ ಕರೆಯಲ್ಪಡುವ ಅನುಭವ ಮಂಟಪದ ಪರಿಕಲ್ಪನೆಯನ್ನು ಸಾಕಾರಗೊಳಿಸಿದವರು ಬಸವಣ್ಣನವರು ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದೀನೆಶ ಗೌಳಿ, ದೇವದಾಸ ಜಾಧವ, ಉಪಾಧ್ಯಕ್ಷರಾದ ಮಹದೇವ ಗೊಬ್ಬೂರಕರ, ಸಿದ್ರಾಮ ಕಂಸಾಳೆ, ಸದಾನಂದ ಕುಂಬಾರ, ಶಶಿಕಲಾ ಸಜ್ಜನ, ಜಯಶ್ರೀ ಸೂಡಿ, ಪಾರ್ವತಿ ಪವಾರ, ಪದ್ಮಾ ಕಟಕೆ, ಅರುಣ ಪಟ್ಟಣಕರ, ಸೂರ್ಯಕಾಂತ ವಾರದ, ಅನೀಲ ಬೋರಗಾಂವಕರ, ಬಸವರಾಜ ಬಿರಾದಾರ, ಸೈಬಣ್ಣ ಬೆಳಗುಂಪಿ, ತಿಮ್ಮಣ್ಣ ಕುರ್ಡೆಕರ, ಶ್ರೀಧರ ಜೋಶಿ, ಸಂಜಯ ಕೋರೆ, ಸಂತೋಷ ಪಾಟೀಲ, ನಾಗರಾಜ ಮೆಲಗಿರಿ, ಅಪ್ಪಾರಾವ ನಾಗಶೆಟ್ಟಿ, ಯಲ್ಲಪ್ಪ ದಂಡಗುಲಕರ, ಜಗದೇವ ಸುಬೆದಾರ, ಶ್ರೀನಿವಾಸ ದಂಡಗುಲಕರ, ತಿಪ್ಪಣ್ಣ ನಾಟಿಕಾರ, ದತ್ತಾತ್ರೇಯ ಗಂಟಿ, ಶಂಕರ ಭಗಾಡೆ, ನಾಗರಾಜ ಮುದ್ನಾಳ, ಮೊಹನ ಹಳ್ಳಿ, ರೇವಣಸಿದ್ದ ಮತ್ತಿಮಡು, ಅಂಬರೀಷ ಕಲ್ಯಾಣಿ, ವಿನೋದ ಕಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ದೇವದಾಸ ಜಾಧವ ಸ್ವಾಗತಿಸಿ ನಿರೂಪಿಸಿದರು. ದಿನೇಶ ಗೌಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here