ಜ್ಞಾನ ಮಾತ್ರ ಜಗತ್ತನ್ನು ಆಳಲು ಸಾಧ್ಯ: ಡಾ. ಚಿಂಚನಸೂರ

0
9

ಆಳಂದ: ವ್ಯಕ್ತಿ ಅಳಿದರೂ ವ್ಯಕ್ತಿಯ ಜ್ಞಾನ ಮತ್ತು ವಿಚಾರಗಳು ಸರ್ವಕಾಲಿಕವಾಗಿರುತ್ತವೆ ಎಂದು ಎಸ್‍ಆರ್‍ಜಿ ಫೌಂಡೇಶನ್ ಆಡಳಿತಾಧಿಕಾರಿ ಡಾ| ರಾಘವೇಂದ್ರ ಚಿಂಚನಸೂರ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್‍ಆರ್‍ಜಿ ಫೌಂಡೇಶನನ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಬಿ.ಎ, ಬಿ.ಎಸ್ಸಿ ಮತ್ತು ಬಿ.ಕಾಮ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೂಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಇತ್ತೀಚಿನ ಯುವಸಮೂಹ ಕೀಳರಿಮೆ, ಜಿಗುಪ್ಸೆ ಅತಿಯಾಗಿ ಹೊಂದಿರುವುದರಿಂದ ಜೀವನದಲ್ಲಿ ಫಲ ಕಾಣಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಸಕಾರಾತ್ಮಕ ಚಿಂತನೆ, ಸದ್ವಿಚಾರ, ಸದ್ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.

ಯಶಸ್ಸು ಪಡೆಯಲು ಅಡ್ಡದಾರಿಯಿಲ್ಲ ಕೇವಲ ಪರಿಶ್ರಮವೊಂದೇ ಅದಕ್ಕಿರುವ ಮಾರ್ಗವಾಗಿದೆ ಅದನ್ನು ಸಾಧಿಸಲು ನಿರಂತರ ಅಧ್ಯಯನ ಮಾಡುವುದು ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಲು ಶ್ರಮಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಂಸ್ಥೆಯ ವತಿಯಿಂದಲೇ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಪನ್ಯಾಸಕ ಶ್ರೀಶೈಲ ಮಾಳಗೆ ಅವರು, ಜಗತ್ತಿನ ಅನೇಕ ದಾರ್ಶನಿಕರು ತೀರಾ ಬಡತನ ಕುಟುಂಬದಲ್ಲಿ ಜನಿಸಿ ತಮ್ಮ ಅಗಾಧವಾದ ಜ್ಞಾನ ಪ್ರತಿಭೆಯಿಂದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ ಈ ನಿಟ್ಟಿನಲ್ಲಿ ಇಂದಿನ ಯುವಸಮೂಹ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಮ್ಮ ದಿನನಿತ್ಯದ ಬದುಕಿನ ಅವಶ್ಯಕತೆಗಳನ್ನು ಪೂರೈಸುಕೊಳ್ಳುವುದರ ಜೊತೆಗೆ ಸಾಮಾಜಿಕ ಕಳಕಳಿಯು ಹೊಂದಿರಬೇಕು ಅದಕ್ಕಾಗಿ ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಪತ್ರಕರ್ತ ಮಹಾದೇವ ವಡಗಾಂವ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಆಧಾರವಾಗಿಟ್ಟುಕೊಂಡು ಜೀವನದ ಗುರಿಮುಟ್ಟಬೇಕು ಎಂದರು.

ಕಾಲೇಜು ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಆದ್ಯತೆಗಳು ಬದಲಾಗಿವೆ ಅದಕ್ಕಾಗಿ ವಿದ್ಯಾರ್ಥಿಗಳು ಈಗಿನ ಸನ್ನಿವೇಶಕ್ಕೆ ತಕ್ಕಂತೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದರು.

ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಅಶೋಕರೆಡ್ಡಿ, ಪಿಯು ಕಾಲೇಜಿನ ಪ್ರಾಚಾರ್ಯ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಜ್ಯೋತಿ ವಿಶಾಖ್, ವಿದ್ಯಾರ್ಥಿ ಪ್ರತಿನಿಧಿ ವಿನೋದ ರಾಠೋಡ ಇದ್ದರು.

ಎನ್‍ಎಸ್‍ಎಸ್ ಅಧಿಕಾರಿ ರಾಜಕುಮಾರ ಸುತಾರ, ಪ್ರಾಧ್ಯಾಪಕ ಖಂಡಪ್ಪವಗ್ಗಿ, ಸಿದ್ಧಲಿಂಗ ಸಕ್ಕರಗಿ, ಸಂತೋಷ ಸಲಗರೆ, ದಯಾನಂದ ಭೀಮನ್, ರತನಕುಮಾರ ಮಾಂಜ್ರೆ, ಕಲ್ಯಾಣಿ ಪೂಜಾರಿ, ಮಹೇಶ ಮಾಡಿಯಾಳೆ, ಭಾಗ್ಯಶ್ರೀ ಪರಗೆ, ಜ್ಯೋತಿ ಕವಲಗಿ, ಸ್ವಾತಿ ಕುಲಕರ್ಣಿ, ರೂಪಾ ಕಲಬುರಗಿ, ರೇಣುಕಾ ಕಲಬುರಗಿ, ಅಂಬ್ರೇಶ ಸೇರಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.

ವಿದ್ಯಾರ್ಥಿನಿ ಸಿದ್ದಮ್ಮ ಸ್ವಾಗತಿಸಿದರು. ಲಕ್ಷ್ಮೀ ನಿರೂಪಿಸಿದರು. ರೂಪಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here