ಗೋಲಗೇರಿ ಲಿಂಗಯ್ಯನ ಜಾತ್ರೆ ನಾಳೆ

0
22

ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವು ಸಹ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿಯ ಗೊಲ್ಲಾಳೇಶ್ವರ ಮಹಾರಥೋತ್ಸವ ಏ. 23ರಂದು ಜರುಗಲಿದೆ ಎಂದು ಸಕಲ ಸದ್ಭಕ್ತರ ಪರವಾಗಿ ಉದಯಕುಮಾರ ಎಲ್. ಜೇವರ್ಗಿ ಮರತೂರು ತಿಳಿಸಿದ್ದಾರೆ.

ಏ. 9ರಿಂದ ಏ.27ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು, ಗೊಲ್ಲಾಳೇಶ್ವರ ಮಹಾಪುರಾಣ ಆರಂಭವಾಗಿದ್ದು, ಮಳ್ಳಿಯ ಶಂಕರಯ್ಯ ಶಾಸ್ತ್ರಿಗಳು ಪುರಾಣ ನಡೆಸಿಕೊಡುತ್ತಿದ್ದಾರೆ. ತಬಲಾ ಪ್ರಭುಲಿಂಗಯ್ಯ ಮಠ, ಗೌಡಪ್ಪ ಗವಾಯಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಹಾಪುರಾಣ ಮಂಗಲದ ತರುವಾಯ ಸಂಜೆ 7 ಗಂಟೆಗೆ ಬಿಂಗಿ ಉತ್ಸವ ರಾತ್ರಿ 10 ಗಂಟೆಗೆ ಕಡೆಯ ಉಚ್ಛಾಯಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ನಾಳೆ ರಥೋತ್ಸವ: ಏ. 23ರಂದು ಸಂಜೆ 5.30ಕ್ಕೆ ಧರ್ಮದರ್ಶಿ ಸಿದ್ರಾಮಪ್ಪ ದೇವರಮನಿ, ವರಪುತ್ರ ಹೋಳಪ್ಪ ದೇವರಮನಿ ನೇತೃತ್ವದಲ್ಲಿ ಕಳಾಸಾರೋಹಣ ಹಾಗೂ ವಿಜೃಂಭಣೆಯ ರಥೋತ್ಸವ ಜರುಗಲಿದ್ದು, 24ರಿಂದ ದನಗಳ ಜಾತ್ರೆ, 25ರಂದು ಕಡಬಿನ ಕಾಳಗ, 27ರಂದು ಕಳಸ ಇಳಿಸುವ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಆಗಮಿಸಿ ಗೊಲ್ಲಾಲೇಶ್ವರರ ದರ್ಶನಾಶೀರ್ವಾದ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

ಶಿವನ ಸಾಕ್ಷಾತ್ಕಾರ ಕುರಿ ಕಾಯುವುದರ ಜೊತೆಗೆ ಶಿವನ ಮೇಲಿನ ನಿಷ್ಠೆಯಿಂದ ಶಿವನ ಸಾಕ್ಷಾತ್ಕಾರ ಪಡೆದ ಗೊಲ್ಲಾಳ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರಿಗೆ ತನಗೂ ಒಂದು ಲಿಂಗ ತರಲು ಹೇಳುತ್ತಾನೆ. ಲಿಂಗ ತರಲು ಮರೆತು ಬಂದ ನಂದಯ್ಯನವರು ಅಲ್ಲಿಯೇ ಇದ್ದ ಕುರಿಯ ಹಿಕ್ಕಿಯನ್ನು ಕೊಟ್ಟು ದಿನಾಲು ಪೂಜಿಸುವಂತೆ ಸೂಚಿಸುತ್ತಾನೆ. ಅದಂತೆ ಗೊಲ್ಲಾಳ ಗೊಬ್ಬರದ ಗುಂಡಿಯಲ್ಲಿಟ್ಟು ಪೂಜಿಸುತ್ತಾನೆ. ಶಿವ ಈತನ ಭಕ್ತಿಗೆ ಒಲಿದು ಸಾಕ್ಷಾತ್ಕಾರ ನೀಡಿದ ಎಂಬ ಕಥೆ ಈ ಗೊಲ್ಲಾಳೇಶ್ವರನ ಸುತ್ತ ಹೆಣೆದುಕೊಂಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here