ಕಲಬುರಗಿ: ಕಲ್ಯಾಣ ಕರ್ನಾಟಕದ ಸ್ವಾತಂತ್ಯ್ರದ ಜೊತೆಗೆ ನಿಜಾಮನ ಕಪಿಮುಷ್ಟಿಯಿಂದ ವಿಮೋಚನೆಗೊಂಡು ಭಾರತದ ಒಕ್ಕುಟಕ್ಕೆ ವಿಲಿನಗೊಂಡ ದಿನವೇ ಈ ಭಾಗದ ನಿಜಸ್ವಾತಂತ್ಯ್ರದ ದಿನ ಎಂದು ಸುರಪುರದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಹೇಳಿದರು.
ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚಾರಣೆ ನಿಮಿತ್ಯ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಹೈದರಬಾದ್ ಕರ್ನಾಟಕ ವಿಮೊಚನಾ ದಿನವನ್ನು ಸರಕಾರ ಈ ವರ್ಷದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಕೇತವಾಗಿದ್ದು, ಈ ಭಾಗಕ್ಕೆ ನಿಜವಾದ ಸ್ವಾತಂತ್ಯ್ರದ ದಿನ ಇದಾಗಿದ್ದು, ಈ ವಿಮೊಚನಾ ಚಳುವಳಿಯಲ್ಲಿ ನಮ್ಮ ಭಾಗದ ಅನೇಕ ಜನ ಮಹಾನಿಯರು ದುಡಿದು ದೇಶಕ್ಕಾಗಿ ಈ ಭಾಗಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ್ದಾರೆ.
ರಜಾಕಾರರ ಹಾವಳಿಯಲ್ಲಿ ರಾಜನಕೊಳ್ಳುರಿನ ವಿರುಪಾಕ್ಷಾಪ್ಪ ಗೌಡರು ವಿಮೋಚನಾ ಹೋರಾಟದಲ್ಲಿ ವೀರ ಮರಣವನ್ನಪ್ಪಿದರು ಎಂದು ಹೆಳಿದರು ಜೊತೆಗೆ ಈ ಚಳುವಳಿಯ ಮುಖ್ಯ ಹೋರಾಟಗಾರರಾದ ಯಾದಗಿರಿಯ ಕೋಲುರು ಮಲ್ಲಪ್ಪ, ವಿಶ್ವನಾಥರೆಡ್ಡಿ ಮುದ್ನಾಳ, ವಿಧ್ಯಾಧರ ಗುರುಜಿ, ಅಚಾಪ್ಪಗೌಡ ಸುಬೇದರ ಸಗರ, ದುಮ್ಮದ್ರಿ ಶರಣಗೌಡ ಸೇರಿದಂತೆ ಸುರಪುರ ಸಂಸ್ಥಾನದ ಅರಸರ ಕೋಡುಗೆ ಕೋಡ ಈ ಚಳುವಳಿಗೆ ಮಹತ್ತರವಾಗಿದೆ ಎಂದು ಅಂಗಡಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ವಹಿಸಿ ವಿಮೋಚನ ಚಳುವಳಿ ಇತಿಹಾಸ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ದೇವಿಂದ್ರಪ್ಪ ಗೌಡ ಮಾಲಗತ್ತಿ, ಕರ್ನಾಟಕ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಶಿವರಾಜ ಕಲಿಕೇರಿ, ಕಾಲೇಜಿನ ಪ್ರಾಂಶುಪಾಲರುಗಳಾದ ವಿರೇಶ ಹಳಿಮನಿ, ಶಾಂತು ನಾಯಕ, ಶಿವಶರಣಪ್ಪ ಹೆಡಿಗಿನಾಳ ವೇದಿಕೆಮೇಲಿದ್ದರು. ಕಾರ್ಯಕ್ರಮವನ್ನು ಬಿರೇಶ ಕುಮಾರ ದೇವತ್ಕಲ್ ನಿರೂಪಿಸಿದರು, ಬಲಭೀಮ ಪಾಟೀಲ್ ಸ್ವಾಗತಿಸಿದರು, ಶ್ರೀಮತಿ. ಭಾರತಿ ಪೂಜಾರಿ ಪ್ರಾರ್ಥಿಸಿದರು, ರುದ್ರಪ್ಪ ಕೆಂಭಾವಿ ವಂದಿಸಿದರು.