ಕಲಬುರಗಿ ಕಸಾಪದಿಂದ ಮತದಾನ ಜಾಗೃತಿ ಕವಿಗೋಷ್ಠಿ ನಾಳೆ

0
60

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಾಳೆ ( ಏ.24 ) ಸಾಯಂಕಾಲ 4.15 ಕ್ಕೆ ನಗರದ ಕನ್ನಡ ಭವನದ ಪ್ರಾಂಗಣದಲ್ಲಿ ಮನಸಾಕ್ಷಿಯ ಮತ – ದೇಶಕ್ಕೆ ಹಿತ ಎನ್ನುವ ಮತ ಕಾವ್ಯ (ಮತದಾನ ಜಾಗೃತಿ ಕವಿಗೋಷ್ಠಿ) ವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಯಾವುದೇ ಆಸೆ, ಆಮೀಷೆಗಳಿಗೆ ಒಳಗಾಗದೇ ಜಾತಿ, ಮತ, ಧರ್ಮಗಳ ಜಾಡಿಗೆ ಒಳಗಾಗದೇ ಉತ್ತಮ ವ್ಯಕ್ತಿತ್ವದ ಮತ್ತು ಜನಪರ ಕಾಳಜಿವುಳ್ಳ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಚುನಾಯಿಸಬೇಕೆಂಬ ಸಂದೇಶ ಸಾರುವ ಕವಿತೆಗಳು ಈ ಭಾಗದ ಅನೇಕ ಕವಿಗಳು ತಮ್ಮ ಸ್ವ ರಚಿತ ಕವನಗಳ ಮೂಲಕ ಜಾಗೃತಿ ಮೂಡಿಸಲಿದ್ದಾರೆ.

Contact Your\'s Advertisement; 9902492681

ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಪಂ ನ ಸಿಇಓ-ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ನೇತೃತ್ವ ವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿದಂತೆ ಹಿರಿಯ ಸಾಹಿತಿಗಳು, ಕವಿಗಳು ಭಾಗವಹಿಸಲಿದ್ದಾರೆ.

ಅನುಭವಿ ಕವಿಗಳಾದ ನರಸಿಂಗರಾವ ಹೇಮನೂರ, ಕಲ್ಲಯ್ಯಾ ಸ್ಥಾವರಮಠ, ಶಾಂತಾ ಪಸ್ತಾಪೂರ, ಗಂಗಮ್ಮಾ ನಾಲವಾರ, ಶಕುಂತಲಾ ಪಾಟೀಲ, ಪ್ರಭು ನಿಷ್ಠಿ ನಿಡಗುಂದಾ, ಮನೋಹರ ಮರಗುತ್ತಿ, ರಾಜೇಂದ್ರ ಝಳಕಿ, ರವಿ ಎಲ್ ಹೂಗಾರ, ರವೀಂದ್ರ ಬಿ.ಕೆ., ರೇಣುಕಾ ಡಾಂಗೆ, ಪರ್ವಿನ್ ಸುಲ್ತಾನಾ, ಸಂತೋಷಕುಮಾರ ಕರಹರಿ, ಸಿದ್ಧರಾಮ ರಾಜಮಾನೆ, ಬಾಗ್ಯಲತಾ ಶಾಸ್ತ್ರೀ ಸೇರಿದಂತೆ ಅನೇಕರು ಕವನ ವಾಚಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here