ವಂದೇ ಭಾರತ್ ನಿತ್ಯ ಸಂಚರಿಸಿತ್ತಿರುವ ಮಾಹಿತಿ ಇಲ್ಲದ ಉಸ್ತುವಾರಿ ಸಚಿವರು; ಡಾ. ಉಮೇಶ್ ಜಾಧವ್ 

0
33

ಕಲಬುರಗಿ: ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆಯವರಿಗೆ ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯವೂ ವಂದೇ ಭಾರತ್ ರೈಲು ಸಂಚರಿಸುತ್ತಿರುವ ಮಾಹಿತಿ ಇಲ್ಲದಿರುವುದು ದುಃಖಕರ ವಿಷಯ ಮತ್ತು ಅವರು ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮರೆಯುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಟೀಕಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಒಂದೇ ಭಾರತ್ ರೈಲು ಆರಂಭವಾಗಿ ಒಂದೇ ವಾರದಲ್ಲಿ ನಿಂತು ಹೋಗಿದೆ ಎಂದು ಹೇಳುವ ಮೂಲಕ ಅವರ ಅಜ್ಞಾನವನ್ನು ಬಯಲು ಮಾಡಿದ್ದಾರೆ. ಕಲಬುರಗಿಯಿಂದ ಬೆಂಗಳೂರಿಗೆ ಎರಡು ರೈಲು ಗಾಡಿಗಳ ಸಂಚಾರ ಪ್ರಾರಂಭಿಸಿದ ಬಿಜೆಪಿಯು ಪ್ರತಿನಿತ್ಯ ವಂದೇ ಭಾರತ್ ಹಾಗೂ ವಾರದಲ್ಲಿ ಒಂದು ದಿನ ಸಂಚರಿಸುತ್ತಿದ್ದ ರೈಲುಗಾಡಿಯನ್ನು ಈಗ ಮೂರು ದಿನ ಓಡಿಸುತ್ತಿದ್ದು ಈ ರೈಲುಗಳ ಮಾಹಿತಿಯು ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೊತ್ತಿಲ್ಲದೆ ಇರುವುದು ಅವರ ಅಜ್ಞಾನವೋ ಅವಿವೇಕತನವೋ ಅಥವಾ ಜನರನ್ನು ಮಂಗ ಮಾಡುವ ತಂತ್ರವೋ ಎಂಬುದು ತಿಳಿಯುತ್ತಿಲ್ಲ. ಒಬ್ಬ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಹಾಗೂ ಬೆಳವಣಿಗೆಗಳು ಅರಿವಿಗೆ ಬಾರದೆ ಇರುವುದು ಅವರ ಜಾಣ ಕುರುಡುತನಕ್ಕೆ ಸಾಕ್ಷಿ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಜಾಧವ್ ಹೇಳಿದರು.

Contact Your\'s Advertisement; 9902492681

ಪ್ರಿಯಾಂಕ ಖರ್ಗೆ ಅವರ ತಂದೆಯವರೇ ರೈಲ್ವೆ ಸಚಿವರಾಗಿದ್ದರೂ ಕೂಡ ಕಲಬುರ್ಗಿಯಿಂದ ಬೆಂಗಳೂರಿಗೆ ಒಂದು ರೈಲು ಆರಂಭಿಸಲು ಸಾಧ್ಯವಾಗದಿರುವ ತಪ್ಪನ್ನು ಮುಚ್ಚಿಕೊಳ್ಳಲು ಉಮೇಶ್ ಜಾಧವ್ ಎರಡು ರೈಲು ಪ್ರಾರಂಭಿಸಿದ್ದೆ ದೊಡ್ಡ ಸಾಧನೆ ಹಾಗೂ ಒಂದೇ ವಾರದಲ್ಲಿ ವಂದೇ ಭಾರತ್ ರೈಲು ನಿಂತು ಹೋಯಿತು ಎಂದು ಜೋಶ್ ನಲ್ಲಿ ಮಾತನಾಡಿ ಜನರ ಮುಂದೆ ಅವರ ಅಜ್ಞಾನ ಬಟಾಬಯಲಾಗಿದೆ. ತಾನೊಬ್ಬ ಮುತ್ಸದ್ದಿ ಯಾಗಿ ಜಗತ್ತಿನ ಮತ್ತು ರಾಷ್ಟ್ರದ ವಿಚಾರಗಳಿಗೆ ಪ್ರತಿಕ್ರಿಯೆ ನೀಡುತ್ತ ಈಗ ಕಲಬುರಗಿಯ ಅಭಿವೃದ್ಧಿಯ ಕೆಲಸಗಳನ್ನೇ ಮರೆತುಬಿಟ್ಟಿರುವುದು ಡಾಲರ್ಸ್ ಕಾಲೋನಿಯ ಮಂತ್ರಿ , ಸ್ಪೆಷಲ್ ಬೇಬಿ ಪ್ರಿಯಾಂಕ್ ಖರ್ಗೆಯವರ ಮೇರು ಪಾಂಡಿತ್ಯವನ್ನೇ ಪ್ರಶ್ನಿಸುವಂತಾಗಿದೆ.

ಪ್ರಬುದ್ಧ ನಾಗರಿಕರನ್ನು ಮತ್ತು ಕಲಬುರ್ಗಿಯ ಜನತೆಯನ್ನು ಇಂತಹ ಹೇಳಿಕೆಗಳಿಂದ ಮರುಳು ಮಾಡಲು ಖಂಡಿತಾ ಸಾಧ್ಯವಿಲ್ಲ ಎಂಬ ಸತ್ಯ ಪ್ರಿಯಾಂಕ ಖರ್ಗೆಯವರಿಗೆ ಮನವರಿಗೆ ಯಾಗಬೇಕಿದೆ. ಬಿಜೆಪಿಯ ಜನಪ್ರಿಯತೆ ಹಾಗೂ ಕರ್ನಾಟಕ ಕ್ರಿಮಿನಲ್ ರಾಜ್ಯವಾಗು ತ್ತಿದ್ದು, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ನ ಭಯೋತ್ಪಾದಕನನ್ನು ಬ್ರದರ್ ಎಂದು ಸಂಬೋಧನೆ ಮಾಡಿದ ಡಿಸಿಎಂ, ನೇಹಾ ಹತ್ಯೆ ಘಟನೆಯನ್ನು ಅದೊಂದು ವೈಯಕ್ತಿಕ ಕಾರಣ ಮತ್ತು ಕ್ಷುಲ್ಲಕ ವಿಷಯ ಎಂದು ಲೇವಡಿ ಮಾಡಿದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರ ಹೇಳಿಕೆಗಳು ನಾಡಿನ ಜನತೆಯನ್ನು ರೊಚ್ಚಿಗೆಬ್ಬಿಸಿದೆ. ಕಾಂಗ್ರೆಸ್ಸಿನ ದುರಾಡಳಿತದಿಂದ ಜನ ಈಗ ಬೇಸತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

28 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಯಭೇರಿ ಬಾರಿಸಿ ಕಾಂಗ್ರೆಸ್ ನೆಲಕಚ್ಚುವುದು ಖಚಿತವಾಗಿದೆ. ಹತಾಶೆಗೊಂಡ ಪ್ರಿಯಾಂಕ ಖರ್ಗೆಯವರ ನಾಲಿಗೆ ಈಗ ಟ್ರ್ಯಾಕ್ ಬಿಟ್ಟು ಚಲಿಸುತ್ತಿದೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಸೆಟೆದು ನಿಂತ ಮಹಿಳೆಯರು ಮೋದಿಯವರ ಗೆಲುವಿಗೆ ದುಡಿಯುತ್ತಿದ್ದಾರೆ. ನೇಹಾಳಂತೆ ಹೆಣ್ಣು ಮಗಳನ್ನು ಹಡೆದ ನಾಡಿನ ತಾಯಂದಿರು ಭಯಭೀತಗೊಂಡು ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷವು ದಿಕ್ಕು ತೋಚದೆ ಮುಗ್ಧೆ ನೇಹಾಳ ಹತ್ಯೆ ನಡೆದು ಆರು ದಿನಗಳ ನಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಜ್ಞಾನೋದಯವಾಗಿ ಮಂಗಳವಾರ ನೇಹಾಳ ತಂದೆಯ ಕ್ಷಮೆ ಕೋರುತ್ತಿರುವುದು ಅವರ ಉದ್ಧಟತನದ ಪರಮಾವಧಿಗೆ ಸಾಕ್ಷಿಯಾಗಿದೆ.

ಈ ಘಟನೆಯ ಬಗ್ಗೆ ಪ್ರಿಯಾಂಕ ಖರ್ಗೆ ಅವರು ತುಟಿ ಬಿಚ್ಚದಿರುವುದು ಸಂದೇಹಕ್ಕೆಡೆಕೊಟ್ಟಿದೆ. ಪ್ರತಿಯೊಂದು ಘಟನೆಗಳಿಗೂ ಮೋದಿಯವರಿಂದ ಹಿಡಿದು ಎಲ್ಲರ ಬಗ್ಗೆ ಹಿಗ್ಗಾಮುಗ್ಗ ವಾಗಿ ಬೈದು ತನ್ನ ನಾಲಿಗೆ ಹರಿಬಿಡುವ ಪ್ರಿಯಾಂಕ ಖರ್ಗೆ ನೇಹಾಳ ಹತ್ಯೆ ಘಟನೆಯ ಬಗ್ಗೆ ಮೌನವಾಗಿರುವುದು ಯಾಕೆ? ಇದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಜಾಧವ್ ಪ್ರಶ್ನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here