ಲೋಕಸಭಾ ಚುನಾವಣೆ: ಬಿಜೆಪಿ ಸೋಲಿಸಲು ಸಂಯುಕ್ತ ಹೋರಾಟ ಸಮಿತಿ ಒಮ್ಮತದ ನಿರ್ಣಯ

0
29

ಕಲಬುರಗಿ: ಜನ ವಿರೋಧಿ, ರೈತ ವಿರೋಧಿ ಸಂವಿಧಾನ ವಿರೋದಿ,ü ಪ್ರಜಾಪ್ರಭುತ್ವ ವಿರೋಧಿ, ಕಾರ್ಮಿಕ ವಿರೋಧಿ, ಮಹಿಳಾ ವಿರೋಧಿ, ಕೋಮುವಾದಿ, ಜಾತಿವಾದಿ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಸಂಯುಕ್ತ- ಹೋರಾಟ ಕರ್ನಾಟಕ ಸಮಿತಿ ಶುಕ್ರವಾರ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿತು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಖಿಲ ಭಾರತ ಕಿಸಾನ್ ಸಭಾ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಮೌಲಾ ಮುಲ್ಲಾ, ರೈತ ಮುಖಂಡರಾದ ನಾಗೇಂದ್ರಪ್ಪ ಥಂಬೆ, ಅರ್ಜುನ್ ಗೊಬ್ಬೂರ್, ಭೀಮಾಶಂಕರ್ ಮಾಡಿಯಾಳ್, ಸಾಜಿದ್ ಅಹಿಮ್‍ದ್, ಸಿದ್ದು ವೇದಶೆಟ್ಟಿ, ಕಲ್ಯಾಣಿ ತುಕ್ಕಾಣಿ ಅವರನ್ನು ಒಳಗೊಂಡ ಮುಖಂಡರ ಸಮ್ಮುಖದಲ್ಲಿ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಸ್.ಆರ್. ಕೊಲ್ಲೂರ್ ಅವರ ಅಧ್ಯಕ್ಷತೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.

Contact Your\'s Advertisement; 9902492681

ರೈತ ಮುಖಂಡರು ಮಾತನಾಡಿ, ದೆಹಲಿಯ ಸಿಂಗು ಗಡಿಯಲ್ಲಿ ರೈತರು ಹಲವಾರು ಬೇಡಿಕೆಗಳಿಗಾಗಿ ರೈತರ ಸಾಲ ಮನ್ನಾ, ರೈತ ವಿರೋಧಿ ಕರಾಳ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ, ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಸಿ2+50 ಸೇರಿಸಿ ಎಂಎಸ್‍ಪಿ ಕಾನೂನು ಜಾರಿಗಾಗಿ, ರೈತರ ಆತ್ಮಹತ್ಯೆ ತಡೆಗಟ್ಟಲು, ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಅನ್ನದಾತರ 754 ಜನ ರೈತರು ಹೋರಾಟದಲ್ಲಿ ಮಡಿದರು. ಮತ್ತು ಲಾಟಿ ಪ್ರಹಾರ, ಅಶ್ರುವಾಯು ಸಿಡಿಸಿ ಗಾಳಿಯಲ್ಲಿ ಗುಂಡು ಹಾರಿಸಿ ರಸ್ತೆಯ ಮೇಲೆ ಮೊಳೆ ಹೊಡೆದು ರೈತರ ಹೋರಾಟ ಹತ್ತಿಕ್ಕುವ ಹುನ್ನಾರ ಪಿತುರಿ ಮಾಡಿದ ಎನ್‍ಡಿಎ ಮಿತ್ರ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಪ್ರಜಾಪ್ರಭುತ್ವ ಎತ್ತಿಹಿಡಿಯಲು ರೈತರಿಗೆ ಕರೆ ನೀಡಿದರು.

ಬೀಜ, ರಸಗೊಬ್ಬರ, ಕೀಟನಾಶಕ ಔಷಧಿ ದುಬಾರಿ ಬೆಲೆ ಏರಿಕೆ ಮಾಡಿ ರೈತರ ಒಕ್ಕಲುತನ ದಿವಾಳಿತನ ಮುಂದುವರಿದಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಸರಿ ಸುಮಾರು 1 ಲಕ್ಷ ಜನ ರೈತರು ಸಾಲದ ಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅನ್ನದಾತರ ಬಗ್ಗೆ ಕಾಳಜಿ ತೋರಲಿಲ್ಲ. ಕಾಪೆರ್Çರೇಟ್ ಕಂಪೆನಿಗಳಿಗೆ ರತ್ನದ ಕಂಬಳಿ ಹಾಕಿ ಸ್ವಾಗತ ಮಾಡಿದ ಮೋದಿ ಆಡಳಿತ ಇದೊಂದು ಕೆಟ್ಟ ದುಷ್ಪರಿಣಾಮವಾಗಿದೆ. ರೈತರು ಬೇಸತ್ತು ಹೋಗಿದ್ದಾರೆ. ಕಲ್ಯಾಣ ಕರ್ನಾಟಕ ನಾಡು ಸಂಪೂರ್ಣ ಅಭಿವೃದ್ಧಿ ಕಡೆಗಣಿಸಿದೆ. ಜಿಲ್ಲೆಯ ತೊಗರಿ ನಾಡು ಅಭಿವೃದ್ಧಿ ಇಲ್ಲ ತೊಗರಿ ಬೆಳೆಗಾರರ ಬಗ್ಗೆ ಬೇಜವಾಬ್ದಾರಿ ಹೊರದೇಶದ ತೊಗರಿ ಮೇಲೆ ಬಹಳ ಪ್ರತಿ ತೋರಿಸಿದ್ದಾರೆ. ತೊಗರಿ ನಾಡಿನ ತೊಗರಿ ಬೆಳೆಗಾರರಿಗೆ ಸಂಪೂರ್ಣ ವಾಗಿ ಕಡೆಗಣಿಸಿದ್ದಾರೆ. ತೊಗರಿ ಕವಡೆ ಕಿಮ್ಮತ್ತು ಇಲ್ಲ ಎಂದು ಅವರು ಆರೋಪಿಸಿದರು. ಇಂತಹ ರೈತ ವಿರೋಧಿ ಬಿಜೆಪಿಯನ್ನು ಸೋಲಿಸಲು ಮುಖಂಡರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here