ಗುರುಮಠಕಲ್‌ನಲ್ಲಿ ಕಮಲ ಹಿಡಿದ ಚಿಂಚನಸೂರ್ ಕಟ್ಟಾ ಬೆಂಬಲಿಗರು

0
24

ಗುರುಮಠಕಲ್: ಬಿಜೆಪಿ ಪಕ್ಷದ ಶಕ್ತಿ ವರ್ಧನೆಯನ್ನು ಕಂಡು ಗುರುಮಠಕಲ್ ಕ್ಷೇತ್ರದಲ್ಲಿ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ್ ಬೆಂಬಲಿಗರು ಸಂಸದ ಡಾ. ಉಮೇಶ್ ಜಾಧವ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿಯ ಮೌಲ್ಯಾಧಾರಿತ ರಾಜಕಾರಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮನಸೋತು, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಗುರುಮಠಕಲ್ ತಾಲೂಕಿನ ಬಾಲ್ಚೆಡ್ ಗ್ರಾಮದಲ್ಲಿ ಮಾಜಿ ತಾಲೂಕ ಪಂಚಾಯತ್ ಸದಸ್ಯ, ಬಾಬುರಾವ್ ಚಿಂಚನಸೂರ್ ಬೆಂಬಲಿಗರಾದ ಚಂದಪ್ಪ ಕಾವ್ಲಿ ಬಾಲ್ಚೆಡ್ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರೆಲ್ಲರನ್ನು ಪಕ್ಷದ ಧ್ವಜ ನೀಡಿ ಹಾರಾರ್ಪಣೆ ಮಾಡಿ ಹೃತ್ಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

Contact Your\'s Advertisement; 9902492681

ಕಾಂಗ್ರೆಸಿನ ದುರಾಡಳಿತ ಮತ್ತು ಒಡೆದು ಆಳುವ ನೀತಿ ಹಾಗೂ ಹಿಂದುಳಿದ ವರ್ಗಗಳಿಗೆ ಇದ್ದ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಹಸ್ಯ ಕಾರ್ಯಾಚರಣೆಯಿಂದ ಹಿಂದುಳಿದ ವರ್ಗದಲ್ಲಿ ಸಮಾಧಾನ ಭುಗಿಲೆದ್ದಿದೆ . ಈಗ ಕಾಂಗ್ರೆಸ್ ನಡವಳಿಕೆಯಿಂದ ಹಿಂದುಳಿದ ವರ್ಗಗಳಲ್ಲಿ ನಡುಕ ಉಂಟಾಗಿದ್ದು ಮೀಸಲಾತಿ ಕೈತಪ್ಪಿ ಅಸಹಾಯಕ ಸ್ಥಿತಿ ನಿರ್ಮಾಣವಾಗುವ ಭಯದಿಂದ ಎಲ್ಲ ಸಮಾಜದ ಮುಖಂಡರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಲು ಸಿದ್ದರಾಗಿದ್ದಾರೆ ಎಂದು ಡಾ. ಉಮೇಶ್ ಜಾಧವ್ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ಸಿನ ಒಡೆದು ಆಳುವ ನೀತಿ ಮತ್ತು ಹಿಂದುಳಿದ ವರ್ಗದವರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ರಾಜಕೀಯ ಬೇಳೆ ಬೇಯಿಸುತ್ತಿರುವ ನಿಜ ಬಣ್ಣ ಬಯಲಾಗಿರುವುದರಿಂದ ಹಿಂದುಳಿದ ಸಮುದಾಯದವರು ಕಾಂಗ್ರೆಸಿಗೆ ಹಿಡಿ ಶಾಪ ಹಾಕಿ ಪಕ್ಷ ತೊರೆಯಲು ತೀರ್ಮಾನಿಸಿದ್ದಾರೆ. ಧರ್ಮ ದಾರಿತ ಮೀಸಲಾತಿ ನೀಡಬಾರದೆಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದರು ಸಂವಿಧಾನ ವಿರೋಧಿಯಾಗಿ ಹಿಂದುಳಿದ ವರ್ಗಗಳ ವಿರೋಧಿಯಾಗಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಮೀಸಲಾತಿ ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಲು ತೀರ್ಮಾನಿಸಿರುವುದು ದೊಡ್ಡ ದುರಂತವಾಗಿದೆ ಎಂದರು.

ಮೋದಿಯವರ ನೇತೃತ್ವದ ಸರಕಾರ ಮಾತ್ರ ಹಿಂದುಳಿದವರಿಗೆ, ಶೋಷಿತ ಜನಾಂಗದವರಿಗೆ ನ್ಯಾಯ ನೀಡ ಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಮುಂದಿನ ಮೋದಿ ಸರಕಾರದಲ್ಲಿ ಕೋಲಿ ಸಮುದಾಯ ಎಸ್ ಟಿ ಪಂಗಡಕ್ಕೆ ಪೂರ್ಣ ಪ್ರಮಾಣದಲ್ಲಿ ಸೇರ್ಪಡೆಗೊಳ್ಳುವುದು ನೂರಕ್ಕೆ ನೂರರಷ್ಟು ಸತ್ಯ. ತಳವಾರ ಸಮುದಾಯಕ್ಕೆ ಎಸ್‌ಟಿ ಸರ್ಟಿಫಿಕೇಟ್ ನೀಡಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ.ಕಾಂಗ್ರೆಸ್ ಕಳೆದ 75 ವರ್ಷಗಳಿಂದ ಜನರ ಕೈಗೆ ಚೊಂಬು ಕೊಟ್ಟದ್ದನ್ನು ಬಿಟ್ಟರೆ ಇನ್ನೇನು ಮಾಡಲಿಲ್ಲ. ರಾಹುಲ್ ಗಾಂಧಿ ಪ್ರಧಾನಿ ಆದರೆ ಕೋಲಿ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರ್ಪಡೆ ಮಾಡುವುದಾಗಿ ಪ್ರಿಯಾಂಕ ಖರ್ಗೆ ಅವರು ಹೇಳಿಕೆ ನೀಡಿ ನಗೆ ಪಾಟಲಿಗೆ ಈಡಾಗಿದ್ದಾರೆ.

ಕಾಂಗ್ರೆಸ್ ಸ್ವತಂತ್ರವಾಗಿ ಬಹುಮತ ಪಡೆಯುವಷ್ಟು ಸ್ಥಾನಗಳಲ್ಲಿ ಸ್ಪರ್ಧೆಯೇ ಮಾಡದೇ ಇರುವಾಗ ಅಧಿಕಾರಕ್ಕೆ ಬರುವುದಾದರೂ ಹೇಗೆ? ಮತ್ತು ಇಂಡಿಯಾ ಮೈತ್ರಿ ಪಕ್ಷಗಳು ಒಬ್ಬರನ್ನೊಬ್ಬರು ದೂಷಿಸಿ ಅಕ್ರಮ,ಹಗರಣಗಳಿಂದ ಜೈಲಿನಲ್ಲಿ ಅಥವಾ ಬೇಲ್ ನಲ್ಲಿ ಇದ್ದುಕೊಂಡು ಕೆಸರೆರಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಈ ಸತ್ಯದ ಅರಿವಿಲ್ಲದ ಪ್ರಿಯಾಂಕ ಖರ್ಗೆಯವರು ಈಗ ರಾಹುಲ್ ಪ್ರಧಾನಿ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಜನರನ್ನು ಮರಳು ಮಾಡುವುದಕ್ಕಾಗಿ ಈ ರೀತಿಯ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸಿನ ದುಷ್ಟ,ಭ್ರಷ್ಟ ಆಡಳಿತ ಮತ್ತು ಕರ್ನಾಟಕವನ್ನು ಕ್ರಿಮಿನಲ್ ರಾಜ್ಯವನ್ನಾಗಿ ಮಾರ್ಪಡಿಸಿದ ಸರಕಾರದ ವಿರುದ್ಧ ಪ್ರಬುದ್ಧ ಮತದಾರರು ಮೇ ಏಳರಂದು ತಕ್ಕ ಪಾಠವನ್ನು ಕಲಿಸಿ ಇನ್ನು ಚುನಾವಣೆಯಾಗುವ 14 ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್ ಗಂಟು ಮೂಟೆ ಕಟ್ಟುವಂತೆ ಮಾಡಲಿದ್ದಾರೆ ಎಂದು ಜಾಧವ್ ತೀವ್ರವಾದ ವಾಗ್ದಾಳಿ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here